More

    1.22 ಕೋಟಿ ರೂ. ನಗದು ಜಪ್ತಿ

    ತುಮಕೂರು: ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಮಾ.16 ರಿಂದ ಏಪ್ರಿಲ್ 20ರ ವರೆಗೆ ಜಿಲ್ಲಾದ್ಯಂತ ನಿಯೋಜಿತ ತಂಡಗಳು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಫ್‌ಎಸ್‌ಟಿ ತಂಡದಿAದ 47,11,751 ರೂ. ಹಾಗೂ ಎಸ್‌ಎಸ್‌ಟಿ ತಂಡದಿAದ 75,75,301 ರೂ. ಸೇರಿ 1,22,87,052 ರೂ.ಗಳನ್ನು ಜಪ್ತಿ ಮಾಡಲಾಗಿದ್ದು, ಇದರಲ್ಲಿ ದಾಖಲೆಯಿಲ್ಲದ 44,30,500 ರೂ. ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.

    ಉಳಿದ 78,56,552 ರೂ. ಹಣವನ್ನು ಜಿಲ್ಲಾ ಖಜಾನೆಗೆ ಜಮೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಜಮೆಯಾಗಿರುವ 44,30,500 ರೂ. ಹಣಕ್ಕೆ ಸಮರ್ಪಕ ದಾಖಲೆ ಒದಗಿಸಿದ ನಂತರ ಸಂಬAಧಿಸಿದವರಿಗೆ ಹಿಂದಿರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಅಕ್ರಮವನ್ನು ತಡೆಯಲು ಇಬ್ಬರು ವೆಚ್ಚ ವೀಕ್ಷಕರು, 57 ವಿಚಕ್ಷಣ ದಳ(ಎಫ್‌ಎಸ್‌ಟಿ-ಫ್ಲೆÊಯಿಂಗ್ ಸ್ವಾö್ಯಡ್), 45 ಸ್ಥಿರ ಕಣ್ಗಾವಲು ತಂಡ (ಎಸ್‌ಎಸ್‌ಟಿ-ಸ್ಟಾö್ಯಟಿಕ್ ಸರ್ವೇಲೆನ್ಸ್ ತಂಡ) ಹಾಗೂ 11 ಅಬಕಾರಿ ತಂಡವನ್ನು ನಿಯೋಜಿಸಲಾಗಿದೆ.

    ಜಿಲ್ಲೆಯಲ್ಲಿ ಮಾರ್ಚ್ 16 ರಿಂದ ಏಪ್ರಿಲ್ 20ರವರೆಗೆ 10183.52 ಲೀಟರ್ ಭಾರತೀಯ ತಯಾರಿಕಾ ಮದ್ಯ, 18388.65 ಲೀ. ಬಿಯರ್ ಹಾಗೂ 730 ಲೀ. ಸೇಂದಿ ಸೇರಿ 75,59,806 ರೂ. ಮೌಲ್ಯದ ಮದ್ಯ ಉತ್ಪಾದನೆಗಳನ್ನು ಜಪ್ತಿ ಮಾಡಲಾಗಿದೆಯಲ್ಲದೆ, 1.70ಲಕ್ಷ ರೂ. ಮೌಲ್ಯದ 5.35 ಕೆ.ಜಿ. ಗಾಂಜಾ ಅನ್ನು ವಶಪಡಿಸಿಕೊಳ್ಳಲಾಗಿದೆ.

    ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿಟ್ಟಿದ್ದ 13,06,146 ರೂ. ಅಂದಾಜು ಮೌಲ್ಯದ 73 ಬಾಕ್ಸ್ ಕುಕ್ಕರ್, 700 ಗೋಡೆ ಗಡಿಯಾರ, 126 ಸೀರೆ, 126.42 ಗ್ರಾಂ. ಚಿನ್ನ, 30 ಚೀಲ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

    ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ದಾಖಲಾದ ಪ್ರಕರಣಗಳಲ್ಲಿ ಅಬಕಾರಿ ಕಾಯ್ದೆಯನ್ನು ಉಲ್ಲಂಘನೆಯಡಿ ವಿಚಕ್ಷಣ ದಳದಿಂದ 64 ಹಾಗೂ ಅಬಕಾರಿ ಇಲಾಖೆಯಿಂದ 1329, ಚುನಾವಣಾ ವೆಚ್ಚಕ್ಕೆ ಸಂಬAಧಿಸಿದAತೆ ಸ್ಥಿರ ಕಣ್ಗಾವಲು ತಂಡದಿAದ 1 ಪ್ರಕರಣಗಳಿಗೆ ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts