More

    ಬಳ್ಳಾರಿ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿಸಿದ ಡಿ.ತ್ರಿವೇಣಿ

    • ನಾಡಿನ ಅತ್ಯಂತ ಕಿರಿಯ ಮೇತರ್ ಎಂಬ ಹೆಗ್ಗಳಿಕೆ

    ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ನೂತನ ಮೇಯರ್ ಸ್ಥಾನಕ್ಕೆ ಬುಧವಾರ ಆಯೋಜಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯೆ ಡಿ. ತ್ರಿವೇಣಿ ಆಯ್ಕೆಯಾಗುವ ಮೂಲಕ ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರಾರಾಗಿದ್ದಾರೆ.
    ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪಾಯಿ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್‌ಸಿಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಕೈ ಎತ್ತುವ ಮೂಲಕ ಡಿ.ತ್ರಿವೇಣಿ ಅವರನ್ನು ಆಯ್ಕೆ ಮಾಡಲಾಯಿತು. ಕಾಂಗ್ರೆಸ್‌ನಿAದ ಸ್ಪರ್ಧಿಸಿದ್ದ ಡಿ. ತ್ರಿವೇಣಿಗೆ ೨೮ ಮತ್ತು ಬಿಜೆಪಿ ಅಭ್ಯರ್ಥಿ ನಾಗರತ್ನ ಪರ ೧೬ ಮತಗಳು ಚಲಾನವಣೆಯಾಗಿದ್ದವು. ಎಸ್‌ಟಿಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಬಿ.ಜಾನಕಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು.
    ಪ್ಯಾರಾ ಮೆಡಿಕಲ್ ಓದಿರುವ ೨೩ ವರ್ಷದ ಡಿ.ತ್ರಿವೇಣಿ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ರಾಜ್ಯದ ಅತ್ಯಂತ ಕಿರೀಯ ಮೇಯರ್ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ೨೦೧೯-೨೦ರಲ್ಲಿ ೬ನೇ ವಾರ್ಡ್ನ ಸದಸ್ಯೆಯಾಗಿದ್ದ ಸುಶೀಲಾ ಬಾಯಿ ಅವರು ಮೇಯರ್ ಆಗಿದ್ದರು. ಇದೀಗ ಅವರ ಮಗಳು ತ್ರಿವೇಣಿ ಸಹ ಮೇಯರ್ ಆಗಿ ಆಯ್ಕೆಯಾಗಿದ್ದು, ತಾಯಿ-ಮಗಳು ಇಬ್ಬರಿಗೂ ಮೇಯರ್ ಆಗುವ ಭಾಗ್ಯ ಲಭಿಸಿದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts