More

  ಟಿಕೆಟ್ ಸಿಗಲಿಲ್ಲ ಎಂದು ಪಾರ್ಕ್‌ನಲ್ಲಿ ಕೂತು ತಮಟೆ ಬಾರಿಸಿಲ್ಲ: ಪ್ರತಾಪಸಿಂಹ ಟ್ಯಾಂಗ್

  ಮೈಸೂರು: ಹತ್ತು ವರ್ಷ ಅಧಿಕಾರ ಕೊಟ್ಟಿದ್ದೀರಿ. ಈಗ ಬದಲಾವಣೆ ಬಯಸಿದ್ದೀರಿ. ಅದನ್ನು ಒಪ್ಪುತ್ತೇನೆ. ಬೇರೆಯವರ ರೀತಿ ಟಿಕೆಟ್ ತಪ್ಪಿತು ಎಂದು ಪಾರ್ಕ್‌ನಲ್ಲಿ ಕುಳಿತು ತಮಟೆ ಬಾರಿಸಿಲ್ಲ ಎನ್ನುವ ಮೂಲಕ ಮಾಜಿ ಶಾಸಕ ಎಸ್.ಎ.ರಾಮದಾಸ್‌ಗೆ ಟಾಂಗ್ ಕೊಟ್ಟರು.
  ಹುಣಸೂರು ಹನುಮ ಜಯಂತಿ ವಿಚಾರದಲ್ಲಿ ಎರಡು ಕ್ರಿಮಿನಲ್ ಕೇಸ್ ಹಾಕಿಸಿಕೊಂಡಿದ್ದೇನೆ. ಧರ್ಮದ ವಿಚಾರದಲ್ಲಿ ನಾನು ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ನಾಳೆ ಬೆಳಗ್ಗೆ ನಿಮಗೆ ಯಾರಾದರೂ ಧಮ್ಕಿ ಹಾಕಿದ್ರೂ ನಿಮ್ಮ ಜತೆಗೆ ನಿಲ್ಲುವವನು ಇದೇ ಪ್ರತಾಪ್ ಸಿಂಹ ಮಾತ್ರ ಎಂದರು.
  ಸಿದ್ದರಾಮಯ್ಯ ಜತೆ ನನಗೆ ವೈಯಕ್ತಿಕವಾಗಿ ಏನೂ ಇಲ್ಲ. ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿಕೊಂಡಿದ್ದರೆ ಮುಡಾದಲ್ಲಿ 50-50 ಪಾಲು ಪಡೆದು ಹಣ ಮಾಡಬಹುದಿತ್ತು. ಆದರೆ ನಾನು ಕಾರ್ಯಕರ್ತರಿಗೋಸ್ಕರ ದುಡಿದಿದ್ದೇನೆ. ಹಿಂದೆ ಮುಂದೆ ಬಹಳಷ್ಟು ಮಾತಾಡ್ತಾರೆ. ಏನೂ ಮಾಡೋಕಾಗಲ್ಲ ಎಂದು ಹೇಳಿದರು.
  ಮುಂದಿನ ದಿನಗಳಲ್ಲಿ ನನಗೆ ಇನ್ನೂ ಒಳ್ಳೆಯ ಅವಕಾಶ ಬರಬಹುದು. ನಾನು ಮೈಸೂರಿನಲ್ಲಿ ಹಣ ಆಸ್ತಿ ಮಾಡಲು ಬಂದಿಲ್ಲ. ಒಳ್ಳೆಯ ಕೆಲಸ, ಹಿಂದುತ್ವ ಬೆಳೆಸಲು ಬಂದಿದ್ದೆ. ಅದನ್ನು ಮಾಡಿದ್ದೇನೆ. ನಾನು ಹೊಸಬನಾಗಿ ಮೈಸೂರಿಗೆ ಬಂದಿದ್ದೆ. ಇವತ್ತು ಮಹಾರಾಜರು ಹೊಸಬರಾಗಿ ರಾಜಕಾರಣಕ್ಕೆ ಬಂದಿದ್ದಾರೆ. ಅವರನ್ನು ಕೈ ಹಿಡಿದು ಬೆಳೆಸಿ ಎಂದರು.
  ಇದು ಮಹಾರಾಜರ ಊರು. ಹೊಗಳು ಭಟ್ಟರು ಇರುತ್ತಾರೆ, ಚಾಡಿಕೋರರೂ ಇರುತ್ತಾರೆ. ಮಹಾರಾಜರು ಇರುವ ಊರುಗಳೆಲ್ಲ ಹಾಗೇ ಇರುತ್ತವೆ. ಆದರೂ ನನ್ನ ಕೆಲಸ ಬಿಡದೆ ಮುಂದಿನ ದಿನಗಳಲ್ಲಿ ನಿಮ್ಮ ಕಷ್ಟ ಕೇಳುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts