More

    ಫೆಬ್ರವರಿಗೆ ಶೇ.500 ರಷ್ಟು ಇಂಧನ ಬೆಲೆ ದುಬಾರಿ: ಯಾವ ದೇಶ ?

    ಕ್ಯೂಬಾ: ದ್ವೀಪ ರಾಷ್ಟ್ರ ಕ್ಯೂಬಾದಲ್ಲಿ ಫೆಬ್ರವರಿ 1 ರಿಂದ ಇಂಧನ ದರ ಶೇ.500ರಷ್ಟು ಹೆಚ್ಚಾಗಲಿದೆ. ಈ ಕುರಿತು ಕ್ಯೂಬಾ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ದೇಶದಲ್ಲಿ ಹಣದುಬ್ಬರ ಮತ್ತು ಉತ್ಪನ್ನದ ಕೊರತೆಯಿಂದ ಬಳಲುತ್ತಿರುವ ಕ್ಯೂಬಾದ ಜನರ ಪರಿಸ್ಥಿತಿ ಇದರಿಂದ ಮತ್ತಷ್ಟು ಬಿಗಡಾಯಿಸಲಿದೆ.

    ಇದನ್ನೂ ಓದಿ:ಮೋದಿ ಸಂಪುಟಕ್ಕೆ ಕುಮಾರಸ್ವಾಮಿ ಜತೆ ಇನ್ನೂ ಮೂವರು ಸಿಎಂಗಳು: ಚುನಾವಣೆಗೆ ಮುನ್ನ ಬಿಜೆಪಿಯ ಬಿಗ್ ಸ್ಟ್ರಾಟಜಿ..!

    ಒಂದು ಲೀಟರ್ ಸಾಮಾನ್ಯ ಗ್ಯಾಸೋಲಿನ್‌ನ ಬೆಲೆ 25 ಪೆಸೊಗಳಿಂದ (20 ಯುಎಸ್ ಸೆಂಟ್ಸ್) 132 ಪೆಸೊಗಳಿಗೆ ಏರುತ್ತದೆ. ಆದರೆ ಪ್ರೀಮಿಯಂ ಗ್ಯಾಸೋಲಿನ್ ಬೆಲೆ 30 ರಿಂದ 156 ಪೆಸೊಗಳಿಗೆ ಜಿಗಿಯಲಿದೆ ಎನ್ನಲಾಗಿದೆ.

    ಲ್ಯಾಟಿನ್ ಅಮೆರಿಕನ್ ದೇಶವಾಗಿರುವ ಕ್ಯೂಬಾ 1940 ದಶಕದಲ್ಲಿ ತೀವ್ರ ರೀತಿಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಒಂದು ಕಡೆ ದೇಶದ ಆಂತರೀಕ ವ್ಯವಹಾರಗಳಲ್ಲಿ ಹೆಚ್ಚುತ್ತಿದ್ದ ಅಮೆರಿಕಾದ ಹಸ್ತಕ್ಷೇಪ, ಇನ್ನೊಂದು ಕಡೆ ಕುಸಿಯುತ್ತಿದ್ದ ದೇಶದ ಆರ್ಥಿಕಥೆ, ನಿರುದ್ಯೋಗ, ಬಡತನ ಹಾಗೂ ಭ್ರಷ್ಟಾಚಾರದಂಥ ಸಮಸ್ಯೆಗಳು ಕ್ಯೂಬಾವನ್ನು ಅರಾಜಕತೆಗೆ ನೂಕಿದ್ದ ಸಂದರ್ಭ.

    ಫಲಗೆನ್ಶಿಯೋ ಬಾಟಿಸ್ಟ 1952ರಲ್ಲಿ ಅಮೆರಿಕಾ ಸಹಾಯದಿಂದ ಸೇನಾದಂಗೆ ನಡೆಸಿ ಪ್ರಜಾತಾಂತ್ರಿಕ ಸರ್ಕಾರವನ್ನು ಉರುಳಿಸಿ ಅಧ್ಯಕ್ಷರಾದರು. ಮಾಜಿ ಯೋಧನಾಗಿದ್ದ ಬಾಟಿಸ್ಟ 1940ರಲ್ಲಿ ಪ್ರಜಾಸತ್ತಾತ್ಮಕವಾಗಿ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ, ಹಾಗೂ 1952ರಲ್ಲಿ ಸೇನಾದಂಗೆಯ ಮೂಲಕ ಅಧ್ಯಕ್ಷರಾಗಿ ಅವರ ರಾಜಕೀಯ ಹಾಗೂ ಆರ್ಥಿಕ ನಿಲುವುಗಳಲ್ಲಿ ಅಜಗಜಾಂತರವಿತ್ತು. ಅಮೆರಿಕಾಕ್ಕೆ ಅತೀ ನಿಷ್ಟರು ಸರ್ವಾಧಿಕಾರಿ ಬಾಟಿಸ್ಟರ ನಿಲುವುಗಳು ಕ್ಯೂಬಾದ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದವು.

    ಮುಂಬೈ ದಾಳಿ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಎಲ್ಲಿದ್ದಾನೆ ಗೊತ್ತಾ? ವಿಶ್ವಸಂಸ್ಥೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts