More

    ಶಿವಮೊಗ್ಗ ಗಲಭೆ ಪೂರ್ವ ನಿಯೋಜಿತ

    ಕೋಲಾರ: ಶಿವಮೊಗ್ಗದಲ್ಲಿ ಈದ್ ಮಿಲಾದ್ ದಿನ ನಡೆದಿರುವ ಘಟನೆ ಪೂರ್ವ ನಿಯೋಜಿತವಾಗಿದ್ದು, ಇದರ ಹಿಂದೆ ಸರ್ಕಾರದ ಕುಮ್ಮಕ್ಕಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ, ಪೊಲೀಸ್ ಠಾಣೆೆ, ನೂರಾರು ಅಂಗಡಿಗಳನ್ನು ಸುಟ್ಟ ಆರೋಪಿಗಳಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟರೂ ಅಶ್ಚರ್ಯವಿಲ್ಲ. ಮುಸ್ಲಿಮರ ಋಣ ತೀರಿಸಬೇಕು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಅವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಕೃತ್ಯಗಳು ಸಂಭವಿಸುತ್ತಿವೆ ಎಂದರು.
    ಕಾAಗ್ರೆಸ್ ಅಽಕಾರದಲ್ಲಿ ಇರುವ ಕಾರಣದಿಂದಲೇ ಕತ್ತಿ ಪ್ರದರ್ಶನ ನಡೆದಿದೆ. ಅದು ಕೇವಲ ಬಿಜೆಪಿ, ಆರ್‌ಎಸ್‌ಎಸ್‌ನವರಿಗೆ ತೋರಿಸಿದ್ದಾರೆ ಎಂದು ಭಾವಿಸಬಾರದು, ನಾಳೆ ಕಾಂಗ್ರೆಸ್‌ನವರನ್ನು ಮುಗಿಸುತ್ತದೆ. ಅವರ ದೃಷ್ಟಿಯಲ್ಲಿ ಸಿದ್ದರಾಮಯ್ಯಎಷ್ಟೇ ಟೋಪಿ ಹಾಕಿಕೊಂಡರೂ ಮುಸ್ಲಿಮರ ಲೆಕ್ಕದಲ್ಲಿ ಕಾಫಿರ್‌ರೇ ಎಂದು ವ್ಯಂಗ್ಯವಾಡಿದರು.
    ಈಗಾಗಲೇ ಸಿಮಿ, ಪಿಎಫ್‌ಐ ರದ್ದಾಗಿದೆ. ಘಜವಹಿಂದು ಉದ್ದೇಶ ಇಟ್ಟುಕೊಂಡು ಕೆಲಸ ಮಾಡುವ ವ್ಯಕ್ತಿಗಳು ಈಗಲೂ ಇದ್ದಾರೆ ಎಂಬುದಕ್ಕೆ ಶಿವಮೊಗ್ಗದಲ್ಲಿ ಖಡ್ಗ, ಔರಂಗಜೇಬ್ ಸ್ಥಾಪನೆ ಮಾಡಿರುವುದು ನಿದರ್ಶನವಾಗಿದೆ. ಸತಾತನ ಧರ್ಮ ನಾಶ ಮಾಡುವ ಉದ್ದೇಶ ಇದರ ಹಿಂದೆ ಅಡಗಿದೆ. ಅದಕ್ಕೆ ಜಿಲ್ಲಾಡಳಿತ, ಕಾಂಗ್ರೆಸ್ ಸರ್ಕಾರ ಈದ್ ಮಿಲಾದ್ ದಿನ ಔರಂಗಜೇಬ್‌ನನ್ನು ವಿಜೃಂಭಿಸಲು ಕೆ ಅನುಮತಿ ನೀಡಬೇಕಿತ್ತು ಎಂದು ಪ್ರಶ್ನಿಸಿದರು.
    ೨೦೧೩ರಿಂದ೧೮ರತನಕ ಇದ್ದ ಸಿದ್ದರಾಮಯ್ಯಗೂ ೨೦೨೩ರ ಸಿದ್ದರಾಮಯ್ಯಗೂ ತುಂಬಾ ವ್ಯತ್ಯಾಸವಿದೆ. ರಾಜ್ಯದಲ್ಲಿ ಸರ್ಕಾರದ ಅಸಮರ್ಥತೆ ಎದ್ದು ಕಾಣುತ್ತಿದೆ. ಅವರು ಸಮರ್ಥತೆÉ ಪ್ರದರ್ಶನ ಮಾಡುತ್ತಿರುವುದು ಹಿಂದೆ ಪರಮೇಶ್ವರ್ ಮೇಲೆ ಆಗಿತ್ತು. ಈಗ ಬಿ.ಕೆ.ಹರಿಪ್ರಸಾದ್ ಮತ್ತು ಶ್ಯಾಮನೂರು ಶಿವಶಂಕರಪ್ಪ ಮೇಲೆ ತೋರುತ್ತಿದ್ದಾರೆ. ಅಸಮರ್ಥತೆ ಮುಚ್ಚಿ ಹಾಕಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts