More

    ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯ

    ಮುನವಳ್ಳಿ: ಸುತ್ತಮುತ್ತಲಿನ ಪರಿಸರ ಸ್ವಚ್ಛ ಹಾಗೂ ಶುದ್ಧವಾಗಿದ್ದರೆ ಎಲ್ಲರೂ ಆರೋಗ್ಯದಿಂದ ಬದುಕುಬಹುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

    ಸಮೀಪದ ಶಿಂದೋಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ರಾಮದುರ್ಗ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ಸಾರಿಗೆ ಇಲಾಖೆಯ ಸೂಚನೆಗಳನ್ನು ಪಾಲಿಸುವ ಮೂಲಕ ವಾಯುಮಾಲಿನ್ಯ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸುವ ಮೂಲಕ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

    ರಾಮದುರ್ಗ ಆರ್‌ಟಿಒ ಅಧಿಕಾರಿ ಷಣ್ಮುಖಪ್ಪ ತೀರ್ಥ ಮಾತನಾಡಿ, ವಾಹನಗಳು ಹೊರಸೂಸುವ ವಿಷಕಾರಿ ಅನಿಲಗಳು ಶುದ್ಧ ಗಾಳಿಯೊಡನೆ ಸೇರಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ. ಆದ್ದರಿಂದ ಎಲ್ಲರೂ ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಡಿ.ಟೋಪೋಜಿ ಮಾತನಾಡಿ, ಸಾರ್ವಜನಿಕರು ವಾಹನ ಓಡಿಸುವ ಜತೆಗೆ ಸಾರಿಗೆ ನಿಯಮ ಪಾಲಿಸಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕು ಎಂದರು. ಮಡಿವಾಳಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ತಾಪಂ ಇಒ ಯಶವಂತಕುಮಾರ, ಸಿಪಿಐ ಕರುಣೇಶಗೌಡ ಜೆ., ಆರ್‌ಟಿಒ ಅಧಿಕಾರಿ ಬಸವರಾಜ ಬಾಗಲ, ಮಿರಾಜಬಿ ಮಿರ್ಜಿ, ಶಕುಂತಲಾ ಬಂಡಿವಡ್ಡರ, ಮುಖ್ಯ ಶಿಕ್ಷಕ ಬಿ.ಪಿ.ಅಂಗಡಿ, ಪಿಡಿಒ ರಮೇಶ ಬೆಡಸೂರ, ಗ್ರಾಪಂ ಸದಸ್ಯರಾದ ಬಸವರಾಜ ಮಾಯಪ್ಪನವರ, ಈಶ್ವರ ಯಕ್ಕೇರಿ, ಮಲ್ಲಿಕಾರ್ಜುನ ದಸ್ತಿ, ಮಾಯವ್ವ ಟೋಪೋಜಿ, ಕೀರಪ್ಪ ಮಾದರ, ಕಲ್ಲಪ್ಪ ಕುರಬಗಟ್ಟಿ, ಚನ್ನವ್ವ ಗೋಕಾಂವಿ, ಗುಡುಮಾ ಶೆರೆಗಾರ, ಮುಶೆಪ್ಪ ಮುಶೆನ್ನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts