More

    ಕರೊನಾ ಸೋಂಕಿಗೆ ಮತ್ತೊಬ್ಬ ಶಿಕ್ಷಕ ಬಲಿ

    ಹಾವೇರಿ: ತಾಲೂಕಿನ ಮರೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಆನಂದಸ್ವಾಮಿ ತಿರಕಯ್ಯ ಯಳವತ್ತಿಮಠ(55) ಶನಿವಾರ ಕರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.

    ಕಳೆದ 14 ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

    ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾಕ್ಕೆ ಬಲಿಯಾದ ಶಿಕ್ಷಕರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 204 ಶಿಕ್ಷಕರಿಗೆ ಕರೊನಾ ಸೋಂಕು ತಗುಲಿದೆ.

    ರಾಜ್ಯದಲ್ಲಿ ಈಗಾಗಲೇ ಕರೊನಾ ಸೋಂಕಿನಿಂದ 193 ಶಿಕ್ಷಕರು, ಉಪನ್ಯಾಸಕರು ಬಲಿಯಾಗಿದ್ದಾರೆ. ಇದೀಗ ಮತ್ತೊಬ್ಬ ಶಿಕ್ಷಕರು ಮೃತಪಟ್ಟಿದ್ದು, ಶಿಕ್ಷಕರ ವಲಯದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸುವಂತೆ ಮಾಡಿದೆ.

    ಮರೋಳ ಶಾಲೆಯ ಶಿಕ್ಷಕರು ಕರೊನಾದಿಂದ ಮೃತಪಟ್ಟಿದ್ದು ತೀವ್ರ ಆಘಾತ ತಂದಿದೆ. ಮೃತ ಶಿಕ್ಷಕರ ಸಹೋದರನಿಗೆ ಮೊದಲು ಕರೊನಾ ದೃಢಪಟ್ಟಿತ್ತು. ಅವರಿಂದ ಈ ಶಿಕ್ಷಕರಿಗೆ ಬಂದಿದೆ ಎಂಬ ಮಾಹಿತಿಯಿದೆ. ಇವರು ವಿದ್ಯಾಗಮ ಯೋಜನೆಯಲ್ಲಿಯೂ ಪಾಠ ಮಾಡಿದ್ದರು. ಆದರೆ, ಯಾವುದೇ ಮಕ್ಕಳಿಗೆ ಈವರೆಗೂ ಜಿಲ್ಲೆಯಲ್ಲಿ ಕರೊನಾ ಸೋಂಕು ತಗುಲಿಲ್ಲ.

    | ಅಂದಾನೆಪ್ಪ ವಡಿಗೇರಿ, ಡಿಡಿಪಿಐ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts