More

    ಜನ ಸೇರಿಸಲು ಖಾಕಿಪಡೆ ಹರಸಾಹಸ

    ಸುರಪುರ: ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಮಾಡಲು ಸರ್ಕಾರ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಆದರೆ ಭಾನುವಾರ ನಗರದಲ್ಲಿ ಕರೆದಿದ್ದ ಜನಸಂಪರ್ಕ ಸಭೆಯಲ್ಲಿ ಜನರನ್ನು ಸೇರಿಸಲು ಖಾಕಿಪಡೆ ಹರಸಾಹಸ ಪಡಬೇಕಾಯಿತು.

    ಇಲಾಖೆಯಲ್ಲಿ ಖಡಕ್ ಅಧಿಕಾರಿಗಳಿದ್ದರೂ ಸಾರ್ವಜನಿಕರ ಸಲಹೆ ಪಡೆಯುವಲ್ಲಿ ವಿಫಲರಾದರು. ಕಾರ್ಯಕ್ರಮದುದ್ದಕ್ಕೂ ಇಲಾಖೆ ಕಾರ್ಯ ಮತ್ತು ಭಾಷಣಗಳೇ ವಿಜೃಂಭಿಸಿದ್ದನ್ನು ಬಿಟ್ಟರೆ ಆಮೂಲಾಗ್ರ ಬದಲಾವಣೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಯಾವೋಬ್ಬ ಅಧಿಕಾರಿ ತುಟಿ ಬಿಚ್ಚಲಿಲ್ಲ.

    ಅಚ್ಚರಿ ಎಂದರೆ, ಈ ಸಭೆಗೆ ನಗರದ ಕೆಲ ವಸತಿನಿಲಯ ವಿದ್ಯಾರ್ಥಿಗಳನ್ನು ಇಲಾಖೆ ವಾಹನದಲ್ಲಿ ಕರೆ ತಂದದ್ದು ವಿಪರ್ಯಾಸ. ಸಭೆ ಆಯೋಜಿಸುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಎಲ್ಲೆಡೆ ಅರಿವು ಮೂಡಿಸಿದ್ದರೆ ಇಷ್ಟೊಂದು ಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗುತ್ತಿರುಲಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದು ಕೇಳಿಸಿತು.

    ನಗರದಲ್ಲಿ ಟ್ರಾಫಿಕ್ ಸಮಸ್ಯೆ, ಅಕ್ರಮ ಮರಳು ಸಾಗಣೆ, ಮಟಕಾ, ಜೂಜು ಇತರ ಅಕ್ರಮ ಚಟುವಟಿಕೆ ಹತ್ತಿಕಲು ಕ್ರಮ ಕೈಗೊಳ್ಳಬೇಕು. ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಜನರು ಸಲಹೆಗಳನ್ನು ನೀಡಿದರು. ಇದಕ್ಕೆ ಎಸ್ಪಿ ಋಷಿಕೇಶ ಭಗವಾನ ಸೋನವಾಣೆ, ಅಕ್ರಮ ಚಟುವಟಿಕೆ ನಡೆಸುವವರ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಇತ್ತೀಚೆಗೆ ಆಗಮಿಸಿರುವ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಕೈಗೊಂಡಿರುವ ದಿಟ್ಟ ಕ್ರಮಗಳಿಂದಾಗಿ ಮಟಕಾ, ಜೂಜು ಸೇರಿ ಅಕ್ರಮ ದಂಧೆಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ಬಿದ್ದಿದೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿಪಿಐ ಆನಂದರಾವ, ಪಿಎಸ್ಐ ಶರಣಪ್ಪ ಹವಾಲ್ದಾರ, ವೆಂಕೋಬ ದೊರೆ, ಚಂದ್ರಶೇಖರ ಜೆಡಿಮರಳ, ರಾಹುಲ್ ಹುಲಿಮನಿ, ಉಸ್ತಾದ್ ವಜಾಹತ್ ಹುಸೇನ್, ಭೀಮಾಶಂಕರ ಬಿಲ್ಲವ್, ಭೀಮರಾಯ ಸಿಂದಗಿರಿ, ಶರಣಪ್ಪ, ಅಫ್ಸರ್ ಹುಸೇನ್, ಖಾಲೀದ್ ಅಹ್ಮದ್ ತಾಳಿಕೋಟಿ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts