More

    ನೂರು ಕೋಟಿ ಲಂಚದ ಆರೋಪ: ಸಿಬಿಐ ತನಿಖೆ ಕುರಿತು ಬುಧವಾರ ಸುಪ್ರೀಂಕೋರ್ಟ್​ ವಿಚಾರಣೆ

    ಮುಂಬೈ: ‘ಮಹಾರಾಷ್ಟ್ರ ಗೃಹ ಮಂತ್ರಿ ಅನಿಲ್ ದೇಶಮುಖ್ ಅವರು ತಿಂಗಳಿಗೆ ನೂರು ಕೋಟಿ ರೂಪಾಯಿ ಲಂಚ ವಸೂಲಿ ಮಾಡಿ ಕೊಡಬೇಕು ಎಂದು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂಬ ಮುಂಬೈ ಮಾಜಿ ಪೊಲೀಸ್ ಕಮೀಷನರ್ ಪರಮ್​ ಬೀರ್ ಸಿಂಗ್ ಹೇಳಿಕೆ ಕುರಿತಂತೆ ಪರಮ್ ಬೀರ್ ಸಿಂಗ್ ಅವರೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದಾರೆ.

    ಇದರ ವಿಚಾರಣೆ ಬುಧವಾರ 11 ಗಂಟೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕೃಷ್ಣಾ ಕೌಲ್ ಹಾಗೂ ಸುಭಾಸ್ ರೆಡ್ಡಿ ಅವರ ಪೀಠದ ಮುಂದೆ ಬರಲಿದೆ.

    ಅಲ್ಲದೇ ಪರಮ್​ ಬೀರ್ ಸಿಂಗ್ ಅವರು ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯೂ ಕೂಡ ಇದೇ ಪೀಠದ ಮುಂದೆ ವಿಚಾರಣೆಗೆ ಬರಲಿದೆ. ಹೀಗಾಗಿ ಮಹಾರಾಷ್ಟ್ರದ ಕಣ್ಣು ನಾಳೆ ಸುಪ್ರೀಂಕೋರ್ಟ್​ ಮೇಲೆ ನೆಟ್ಟಿದೆ.

    ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆಯಾಗಿದ್ದರ ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಆರೋಪಿಸಿ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅವರನ್ನು ಮಹಾರಾಷ್ಟ್ರ ಗೃಹ ರಕ್ಷಕ ದಳದ ಮುಖ್ಯಸ್ಥರಾಗಿ ವರ್ಗಾಯಿಸಲಾಗಿತ್ತು.

    ಇದರ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು ಆರೋಪ ಮಾಡಿರುವ ಪರಮ್ ಬೀರ್ ಸಿಂಗ್, ‘ಒಂದು ತಿಂಗಳಿಗೆ ನೂರು ಕೋಟಿ ರೂ ಲಂಚ ಸಂಗ್ರಹಿಸುವಂತೆ ಗೃಹ ಸಚಿವ ಅನಿಲ್ ದೇಶಮುಖ್ ಅವರು ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ಸೂಚನೆ ನೀಡಿದ್ದರು. ಈ ಗುರಿ ತಲುಪಲು ಮುಂಬೈನಲ್ಲಿ 1750 ಬಾರ್ ರೆಸ್ಟೋರಂಟ್​ಗಳಿವೆ. ಸರಿಯಾಗಿ ಕೆಲಸ ಮಾಡಿದರೆ 100 ಕೋಟಿ ಬರುತ್ತೆ. ಪ್ರತಿಯೊಂದರಿಂದಲೂ 2 ರಿಂದ 3 ಲಕ್ಷ ಸಂಗ್ರಹಿಸಿದರೆ 45 ರಿಂದ 50 ಕೋಟಿ ರೂಪಾಯಿ ಆಗುತ್ತದೆ. ಉಳಿದಿದ್ದನ್ನು ಇನ್ನಿತರ ಮೂಲಗಳಿಂದ ಸಂಗ್ರಹಿಸಬಹುದು ಎಂದು ವಾಜೆಗೆ ಸೂಚನೆ ನೀಡಿದ್ದರು’ ಎಂದು ಪತ್ರದಲ್ಲಿ ಸಿಂಗ್ ಉಲ್ಲೇಖಿಸಿದ್ದಾರೆ. ಅಲ್ಲದೇ ಸಿಂಗ್ ಅವರು ಪತ್ರವನ್ನು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ರಾಜ್ಯಪಾಲ ಭಗತ್​ಸಿಂಗ್ ಕೋಶಾಯಾರಿ ಅವರಿಗೂ ತಲುಪಿಸಿದ್ದರು.

    ಎಲ್ಲೆಲ್ಲೋ ಹೋಗಿ ಬಟ್ಟೆ ಬಿಚ್​ತಿರೋರಿಗೆ ದಾನ ಮಾಡ್ತೇನೆ- ಇನ್ನೂ 19 ಸಿಡಿ ಇವೆಯಂತೆ…ಜೋಕೆ!

    ಪರಮ್ ಬೀರ್ ಸಿಂಗ್ 100 ಕೋಟಿ ಹೇಳಿಕೆ: ‘ಮಹಾ’ ರಾಜಕಾರಣದಲ್ಲಿ ಎದ್ದಿದೆ ಮಹಾ ಬಿರುಗಾಳಿ! ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts