More

    ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ಗೆ ಆಯ್ಕೆ

    ನಾಪೋಕ್ಲು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ನಿಲಯದ ಅಥ್ಲೆಟಿಕ್ಸ್ ವಿಭಾಗದ ಬಾಲಕ ಮತ್ತು ಬಾಲಕಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ಕ್ರೀಡಾನಿಲಯದ ವಿದ್ಯಾರ್ಥಿ ಎಸ್.ಡಿ.ನವೀನ 600 ಮೀಟರ್ ಓಟದ ಸ್ಪರ್ಧೆ ಹಾಗೂ 4100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಕೆ.ಎಲ್.ಚಿರಾಗ್ 400 ಮೀ.ಓಟದ ಸ್ಪರ್ದೆಯಲ್ಲಿ (ದ್ವಿ), ಬಾಲಾಜಿ 200 ಮೀಟರ್ ಓಟದ ಸ್ಪರ್ಧೆಯಲ್ಲಿ (ದ್ವಿ) 4100 ಮೀಟರ್ ರಿಲೇನಲ್ಲಿ (ಪ್ರ), ದರ್ಶನ ಹಾಗೂ ಮೇಘನ್ 4100 ಮೀಟರ್ ರೀಲೆಯಲ್ಲಿ (ಪ್ರ), ನಿಕ್ಷಿತ್ 80 ಮೀಟರ್ ಹಡಲ್ಸ್‌ನಲ್ಲಿ (ಪ್ರ), ಕೆ.ಸಿ.ಪೂರ್ವಿಕಾ 400 ಮೀಟರ್ ಓಟದಲ್ಲಿ (ಪ್ರ). 600 ಮೀ ನಲ್ಲಿ (ಪ್ರ), 4100 ಮೀಟರ್ ರಿಲೆಯಲ್ಲಿ ಬಿಸ್ಮಿತಾ, ಯೋಗೀಶ್ವರಿ, ಭೂಮಿಕಾ 4*100 ಮೀಟರ್ ರಿಲೇಯಲ್ಲಿ (ಪ್ರ), ಗಗನ್ 80 ಮೀಟರ್ ಹರ್ಡಲ್ಸ್‌ನಲ್ಲಿ (ದ್ವಿ) ಸ್ಥಾನ ಪಡೆದಿದ್ದಾರೆ.

    ಪ್ರಥಮ ಸ್ಥಾನ ಪಡೆದ ಕ್ರೀಡಾ ನಿಲಯದ ವಿದ್ಯಾರ್ಥಿಗಳು ನವೆಂಬರ್ ಮೊದಲ ವಾರದಲ್ಲಿ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಕ್ರೀಡಾ ನಿಲಯದ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಾ ಅಭಿನಂದಿಸಿದ್ದಾರೆ. ಇಲಾಖೆಯ ತರಬೇತುದಾರ ಮಹಾಬಲ ತರಬೇತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts