More

    ಓಬವ್ವ ಕ್ರೀಡಾಂಗಣದ ಅವ್ಯವಸ್ಥೆಯ ವಿರುದ್ಧ ಶಾಸಕ ತಿಪ್ಪಾರೆಡ್ಡಿ ಗರಂ

    ಚಿತ್ರದುರ್ಗ: ನಗರದ ಜಿಲ್ಲಾ ಒನಕೆ ಓಬವ್ವ ಕ್ರೀಡಾಂಗಣದ ಅವ್ಯವಸ್ಥೆಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಗರಂ ಆಗಿ ಸಂಬಂಧಿಸಿದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

    ಶುಕ್ರವಾರ ಬೆಳಗ್ಗೆ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು,ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಶಾಸಕರು,ಕ್ರೀಡಾಂಗಣದ ಸ್ವಚ್ಛತೆಗೆ ಗಮನ ಕೊಡದ ಅಧಿಕಾರಿ-ಸಿಬ್ಬಂದಿ ವಿರುದ್ಧ ಹರಿಹಾಯ್ದರು. ನಗರಸಭೆಯಿಂದ ಕಸದ ಬುಟ್ಟಿಗಳನ್ನು ಇಡಬೇಕು.
    ಕ್ರೀಡಾಂಗಣ ಸುತ್ತ ಎಲ್‌ಇಡಿ ದೀಪಗಳನ್ನು ಹಾಕಬೇಕು.

    ಬಿಡಾಡಿ ಪ್ರಾಣಿಗಳು ಬಾರದಂತೆ ನಿಗಾ ವಹಿಸಬೇಕು. ತುರ್ತಾಗಿ ಶೌಚ ಗೃ ಹ ನವೀಕರಿಸಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೂಡಲೇ ಕೊಳವೆ ಬಾವಿ ಕೊರೆಸಲಾಗುವುದು. ಡ್ರೇಸಿಂಗ್ ರೂಂ.ಸರಿ ಪಡಿಸುವುದರೊಂದಿಗೆ ಗುಣಮಟ್ಟದ ಕ್ರೀಡಾ ಉಪಕರಣಗಳ ಸರಬರಾಜಿಗೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಸರಿಯಾಗಿ ಕರ್ತವ್ಯ ನಿರ್ವಹಿಸದ ಸಿಬ್ಬಂದಿ ವಜಾ ಮಾಡ ಬೇಕೆಂದ ಅವರು,ಕ್ರೀಡಾ ಇಲಾಖೆಯಲ್ಲಿರುವ 4 ಲಕ್ಷ ರೂ.ಗಳೊಂದಿಗೆ 20 ಲಕ್ಷ ರೂ.ನಗರಸಭೆ ಅನುದಾನ ಬಳಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಅನೇಕ ಕ್ರೀಡಾಪಟುಗಳು,ಸಾರ್ವಜ ನಿಕರು ಕ್ರೀಡಾಂಗಣದ ಅವ್ಯವಸ್ಥೆ ವಿವರಿಸಿದರು.

    ಹಾಸ್ಟೆಲ್
    ಕ್ರೀಡಾ ಇಲಾಖೆ ಹಾಸ್ಟೆಲ್ ಮಕ್ಕಳಿಗೆ ಮೆನು ಪ್ರಕಾರವೇ ಊಟ ನೀಡಬೇಕು. ಮೊಟ್ಟೆ,ಚಿಕನ್,ಬಾಳೆಹಣ್ಣು,ಜ್ಯೂಸ್,ಹಾಲು,ತರಕಾರಿ ಸಹಿತ ಪೌಷ್ಠಿಕ ಆಹಾರ ನೀಡಬೇಕು ಎಂದರು. ಮಧ್ಯ ಸೇವಿಸಿ ಪುಂಡಾಟಿಕೆ ಮಾಡುವವರನ್ನು ಮಟ್ಟ ಹಾಕುವಂತೆ ಪೊಲೀಸರಿಗೆ ಸೂಚಿಸಿ ದ್ದೇನೆ ಎಂದರು.

    ಜಿಪಂ ಸಿಇಒ ಎಂ.ಎಸ್.ದಿವಾಕರ್ ಮಾತನಾಡಿ,ಕ್ರೀಡಾಂಗಣದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದರು. ಕ್ರೀಡಾಂಗಣ ಸ್ವಚ್ಛತೆಗೆ ಸಿಬ್ಬಂದಿಗೆ ವಾರದ ಗಡುವು ನೀಡಿದರು. ನಾಯಿ,ದನಗಳು ಕ್ರೀಡಾಂಗಣದಲ್ಲಿದ್ದರೆ ಸೇವೆಯಿಂದ ವಜಾಗೊಳಿಸುವುದಾಗಿ ಎಚ್ಚರಿಸಿದರು.
    ಮನವಿ

    ಸತತ 12 ವರ್ಷಗಳಿಂದ ಅಭಿವೃದ್ಧಿ ಕಾಣದೇ ಹಾಳಾಗಿರುವ ಖೋಖೋ ಅಂಕಣ ನವೀಕರಣಕ್ಕೆ ಅನುದಾನ ನೀಡುವಂತೆ ಶಾಸಕರಿಗೆ ಖೋಖೋ ಕ್ರೀಡಾಪಟುಗಳು ಮನವಿ ಸಲ್ಲಿಸಿದರು. ಅಂಕಣಕ್ಕೆ ಬೆಳಕಿನ ವ್ಯವಸ್ಥೆ ಕಲ್ಪಿಸ ಬೇಕು. ಜಿಲ್ಲೆಯಿಂದ ಕನಿಷ್ಠ ಮೂವರು ಕ್ರೀಡಾ ಪಟುಗಳು ರಾಷ್ಟ್ರಮಟ್ಟದಲ್ಲಿ ರಾಜ್ಯತಂಡವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಈಗ ಸಾಧ್ಯವಾಗುತ್ತಿಲ್ಲ. ಅಭ್ಯಾಸಕ್ಕೆ ಇರುವ ಸೌಲಭ್ಯಗಳ ಕೊರ ತೆ ಇದಕ್ಕೆ ಕಾರಣವೆಂದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts