More

    ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಗೆ ಕಿಗ್ಗಾದ ಶ್ರೀಪ್ರಸಾದ

    ಬಾಳೆಹೊನ್ನೂರು: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮನ ವಿಗ್ರಹ ಪ್ರಾಣಪ್ರತಿಷ್ಠಾಪನೆ, ರಾಮಮಂದಿರ ಉದ್ಘಾಟನೆಗೆ ಮಳೆ ದೇವರೆಂದೇ ಖ್ಯಾತಿಯಾಗಿರುವ ಶೃಂಗೇರಿ ಸಮೀಪದ ಕಿಗ್ಗಾ ಶಾಂತಾ ಸಮೇತ ಋಷ್ಯ ಶೃಂಗೇಶ್ವರ ಸ್ವಾಮಿಯ ಪ್ರಸಾದವನ್ನು ಕಳುಹಿಸಲಾಗುವುದು ಎಂದು ಅರ್ಚಕರ ಮತ್ತು ಪುರೋಹಿತರ ಪರಿಷತ್ ಜಿಲ್ಲಾಧ್ಯಕ್ಷ ಮಾರ್ಕಾಂಡೇಯ ಭಟ್ ತಿಳಿಸಿದ್ದಾರೆ.

    ಹೇಳಿಕೆ ನೀಡಿರುವ ಅವರು, ಜ.14ರಂದು ಕಿಗ್ಗಾದ ಶ್ರೀ ಶಾಂತಾ ಸಮೇತ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪರಿಷತ್‌ನಿಂದ ವಿಶೇಷ ರುದ್ರ ಪಾರಾಯಣ ನಡೆಸಿ ಪೂಜೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
    ಶ್ರೀರಾಮನ ಅವತಾರಕ್ಕೂ ಮೊದಲು ದಶರಥ ಮಹಾರಾಜರ ಆಸ್ಥಾನದಲ್ಲಿ ನಡೆದ ಪುತ್ರಕಾಮೇಷ್ಠಿ ಯಾಗವನ್ನು ನಡೆಸಿ ಆ ಯಾಗವನ್ನು ಸಂಪನ್ನಗೊಳಿಸಿದ ಶ್ರೀ ಋಷ್ಯಶೃಂಗ ಮಹಾಮುನಿಗಳ ಚರಿತೆ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಈ ವಿಚಾರವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಅರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪರಿಷತ್‌ನ ಅರ್ಚಕರ ಇಚ್ಛೆಯಂತೆ ವಿಶೇಷ ಪೂಜೆ ಪುನಸ್ಕಾರಗಳು ಕಿಗ್ಗಾದಲ್ಲಿ ನೆರವೇರಲೇಬೇಕಿದೆ ಎಂದಿದ್ದಾರೆ.
    ಸಮಯದ ಅಭಾವದಿಂದ ಕಿಗ್ಗಾಕ್ಕೆ ಬರಲು ಅಸಾಧ್ಯವಾದ ಕಾರಣ, ಪರಿಷತ್ ಪದಾಧಿಕಾರಿಗಳು ಪೂಜೆ ಸಲ್ಲಿಸಿ ದೇವರ ಪ್ರಸಾದವನ್ನು ತಮಗೆ ತಲುಪಿಸಬೇಕು. ಕಿಗ್ಗಾದ ಶ್ರೀಪ್ರಸಾದವನ್ನು ಶ್ರೀರಾಮಚಂದ್ರ ಮೂರ್ತಿಯ ಪಾದತಳದಲ್ಲಿ ಸ್ಥಾಪನೆ ಮಾಡುವ ಯಂತ್ರಕ್ಕೆ ಸಮರ್ಪಣೆ ಮಾಡುತ್ತೇವೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 14ರಂದು ಕಿಗ್ಗಾ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದೆ. ಅರ್ಚಕ, ಪುರೋಹಿತರ ಪರಿಷತ್ ಪದಾಧಿಕಾರಿಗಳು ಭಾಗವಹಿಸುವರು ಎಂದು ಮಾರ್ಕಾಂಡೇಯ ಭಟ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts