More

    ಲೈಂಗಿಕ ಕಿರುಕುಳ ಹಗರಣದಲ್ಲಿ ನ್ಯೂಯಾರ್ಕ್ ಗವರ್ನರ್

    | ಬೆಂಕಿ ಬಸಣ್ಣ ನ್ಯೂಯಾರ್ಕ್

    ಕರ್ನಾಟಕದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಚರ್ಚೆಗೆ ಗ್ರಾಸವಾಗಿದ್ದರೆ, ಮತ್ತೊಂದೆಡೆ, ಅಮೆರಿಕದ ನ್ಯೂಯಾರ್ಕ್ ರಾಜ್ಯದ ಗವರ್ನರ್ ಆಂಡ್ರೂ್ಯ ಕೋಮೊ ಲೈಂಗಿಕ ಕಿರುಕುಳ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾರೆ.

    ಕಳೆದ ಹತ್ತು ವರ್ಷಗಳಿಂದ ನ್ಯೂಯಾರ್ಕ್ ಗವರ್ನರ್ ಆಗಿರುವ 63 ವರ್ಷದ ಆಂಡ್ರೂ್ಯ ಕೋಮೊ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುತ್ತಲೇ ಇದ್ದಾರೆ. ಕರೊನಾ ಸೋಂಕಿನಿಂದ ನರ್ಸಿಂಗ್​ಹೋಮ್ಳಲ್ಲಿ ಮೃತಪಟ್ಟವರ ಸಂಖ್ಯೆಯನ್ನು ತುಂಬ ಕಡಿಮೆ ದಾಖಲು ಮಾಡಿದ್ದಾರೆ ಮತ್ತು ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂಬ ಆರೋಪ ಕಳೆದ ವಾರವಷ್ಟೇ ಕೇಳಿ ಬಂದು, ಮೃತರ ಸಂಬಂಧಿಕರಿಂದ ಪ್ರತಿಭಟನೆಗಳು ನಡೆದಿದ್ದವು. ಈಗ ಕೇಂದ್ರ ತನಿಖಾ ದಳದಿಂದ ತನಿಖೆ ನಡೆಯುತ್ತಿದೆ. ಅಲ್ಲದೆ, ಮೂವರು ಮಹಿಳೆಯರು, ಕಳೆದ ಕೆಲ ದಿನಗಳಲ್ಲಿ ಒಬ್ಬೊಬ್ಬರಾಗಿ ಮುಂದೆ ಬಂದು ಗವರ್ನರ್ ಆಂಡ್ರೂ್ಯ ತಮಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಸಲಹೆಗಾರ್ತಿಯ ದೂರು: ಗವರ್ನರ್ ಆರೋಗ್ಯ ಪಾಲಿಸಿಯ ಸಲಹೆಗಾರ್ತಿ ಚಾರ್ಲೆಟ್ ಬೇನೆಟ್, ಫೆಬ್ರವರಿ 27ರಂದು ಕೋಮೊ ತನಗೆ ಮುದುಕರ ಜೊತೆ ಲೈಂಗಿಕಕ್ರಿಯೆ ಮಾಡಲು ಒಪ್ಪಿಗೆ ಇದೆಯೇ ಎಂದು ಕೇಳಿ, ಪರೋಕ್ಷವಾಗಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಲು ಪ್ರಯತ್ನ ಪಟ್ಟು ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಮದುವೆಯೊಂದರ ರಿಸೆಪ್ಷನ್ ಪಾರ್ಟಿಯಲ್ಲಿ ಕೋಮೊ ತನ್ನ ದೇಹವನ್ನು ಬಲವಂತದಿಂದ ಮುಟ್ಟಿದ್ದಾರೆ ಎಂದು ಅನ್ನಾ ರಚ್ ಎಂಬ ಮಹಿಳೆ ಮಾರ್ಚ್ 1ರಂದು ಆರೋಪ ಮಾಡಿದ್ದಾರೆ.

    ಈ ಘಟನೆಗಳಿಂದಾಗಿ ಕೋಮೊ ರಾಜೀನಾಮೆ ಕೊಡಬೇಕು ಎನ್ನುವ ಒತ್ತಾಯ ಹೆಚ್ಚಾಗುತ್ತಿದೆ. ಆದರೆ ಈ ಮೂವರು ಮಹಿಳೆಯರ ಆರೋಪಗಳನ್ನು ಕೋಮೊ ಸಂಪೂರ್ಣ ಸುಳ್ಳು ಎಂದಿದ್ದಾರೆ. ಡೆಮಾಕ್ರೆಟಿಕ್ ಪಕ್ಷದವರೇ ಆದ ನ್ಯೂಯಾರ್ಕ್ ಸೆನೆಟರ್​ಗಳಾದ ಚಕ್ ಸ್ಕೂಮರ್ ಮತ್ತು ಕ್ರಿಸ್ಟೆನ್ ಗಿಲ್ಲಿಬ್ರಾಂಡ್ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ. ಈ ವಿವಾದ ಶ್ವೇತಭವನ ಮುಟ್ಟಿದ್ದು, ಅಧ್ಯಕ್ಷ ಜೋ ಬೈಡೆನ್ ಸ್ವತಂತ್ರ ತನಿಖೆಗೆ ಒಪ್ಪಿಗೆ ಕೊಟ್ಟಿದ್ದಾರೆ.

    ಆಪ್ತಸಹಾಯಕಿ ಲಿಂಡ್ಸೆ ಬೋಯ್ಲಾನ್ ಆರೋಪ: ಗವರ್ನರ್ ಆಪ್ತಸಹಾಯಕಿಯಾಗಿದ್ದ ಲಿಂಡ್ಸೆ ಬೋಯ್ಲಾನ್- ‘ಕೋಮೊ ವಿಮಾನದಲ್ಲಿ ಹೋಗುತ್ತಿರುವಾಗ ಸ್ಟ್ರಿಪ್- ಪೊಕೆರ್ (ಬೆತ್ತಲೆಯಾಗಿ ಇಸ್ಪೀಟ್ ಆಟ) ಆಡಲು ಒತ್ತಾಯಿಸಿದ್ದಾರೆ ಮತ್ತು ಆಫೀಸ್​ನಲ್ಲಿ ಬಲವಂತವಾಗಿ ಕಿಸ್ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts