More

    ಸಮಾಜ ಸುಧಾರಣೆಗೆ ಸಂಘಟನೆ ಮುಖ್ಯ

    ಸೊರಬ: ಸಮಾಜ ಸುಧಾರಣೆಗೆ ಸಂಘಟನೆ ಬಹುಮುಖ್ಯ. ಈ ನಿಟ್ಟಿನಲ್ಲಿ ವೀರಶೈವ ಸಮಾಜ ಒಗ್ಗಟ್ಟಿನಿಂದ ಮುನ್ನಡೆಯಬೇಕಿದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ವೀರಶೈವ ಸಹ್ಯಾದ್ರಿ ಪತ್ತಿನ ಸಹಕಾರ ಸಂಘದ 5ನೇ ವಾರ್ಷಿಕ ಸರ್ವಸದ್ಯಸರ ಮಹಾಸಭೆ ಹಾಗೂ 175 ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜ ಮತ್ತು ಸಂಘಟನೆ ಜತೆಗೆ ನಿರಂತರ ಸಂಪರ್ಕವಿರುವ ಜನರು ಸಂಸ್ಕಾರವಂತರಾಗಿ ಯಶಸ್ಸಿನ ಬದುಕು ನಡೆಸುತ್ತಾರೆ ಎಂದರು.

    ವೀರಶೈವ ಸಹ್ಯಾದ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಇಂದೂಧರ ಒಡೆಯರ್ ಮಾತನಾಡಿ, ಸಹಕಾರ ಸಂಘಗಳ ಬೆಳವಣಿಗೆಗೆ ಜನರ ಸ್ಪಂದನೆ ಮುಖ್ಯ. ಸಮಾಜ ಆರ್ಥಿಕವಾಗಿ ಸದೃಢಗೊಳ್ಳಬೇಕಾದರೆ ಷೇರುದಾರರು ಸಂಘದಲ್ಲಿ ನಿಧಿ ಹೂಡಿಕೆ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕಿದೆ ಎಂದರು.

    ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಕೆ.ವಿ.ಗೌಡ, ಎಸ್.ಎಂ.ರೇವಣಪ್ಪ, ಕೆ.ಬಿ.ಜಯಶೀಲಗೌಡ, ಮಲ್ಲೇಶಪ್ಪ, ಸುನೀಲ್ ಗೌಡ, ಟಿ.ಎಸ್.ಬಂಗಾರಸ್ವಾಮಿ, ಎಂ.ನಿರಂಜನ, ಕೆ.ಜಿ.ಲೋಲಾಕ್ಷಮ್ಮ, ಎಚ್.ಪಿ.ಪ್ರೇಮಾ, ಲತಾ, ಸಿ.ಎನ್.ಕೊಟ್ರೇಶ್, ಸಿ.ಪಿ.ವಿನಾಯಕ, ಟಿ.ಆರ್.ಬಸವನಗೌಡ, ಆರ್.ಸಿ.ಪಾಟೀಲ್, ಪ್ರಿಯಾಂಕಾ, ಮಲ್ಲಿಕಾರ್ಜುನ ಗುತ್ತೇರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts