More

    ಪುನೀತ್ ಪುಣ್ಯಸ್ಮರಣೆ, ಕಟೌಟ್‌ಗಳಿಗೆ ಪುಷ್ಪನಮನ

    ಶಿವಮೊಗ್ಗ: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆಯನ್ನು ಶಿವಮೊಗ್ಗದಲ್ಲಿ ಅಪ್ಪು ಅಭಿಮಾನಿಗಳು ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಭಾವಚಿತ್ರ, ಕಟೌಟ್‌ಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವಪೂರ್ವಕವಾಗಿ ಆಚರಿಸಿದರು.
    ಶರಾವತಿನಗರ, ದುರ್ಗಿಗುಡಿ, ವಿನೋಬನಗರ, ವಿದ್ಯಾನಗರ, ಗೋಪಾಳ ಸೇರಿದಂತೆ ಹಲವೆಡೆ ಅಪ್ಪು ಭಾವಚಿತ್ರದ ಕಟೌಟ್‌ಗಳಿಗೆ ಹೂವಿನ ಹಾರ ಹಾಕಿದರು. ಜತೆಗೆ ಬಾಡೂಟ ಹಾಕಿಸುವ ಮೂಲಕ ನೆಚ್ಚಿನ ನಟನಿಗೆ ಗೌರವ ಸಲ್ಲಿಸಿದರು.
    ಶರಾವತಿನಗರದ ಪುನೀತ್ ಅಭಿಮಾನಿ ಬಳಗದಿಂದ 1,500 ಜನರಿಗೆ ಮಟನ್ ಊಟ ಹಾಕಲಾಯಿತು. ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆರ್.ಕಿರಣ್, ನವೀನ್ ಮತ್ತು ಉದ್ಯಮಿ ಬಸವರಾಜ್ ಶಿವಮೊಗ್ಗ, ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.
    ದುರ್ಗಿಗುಡಿ ಕನ್ನಡ ಸಂಘದಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘದ ಅಧ್ಯಕ್ಷ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸ.ನ.ಮೂರ್ತಿ, ಗೌರವ ಕಾರ್ಯದರ್ಶಿ ವಿ.ರಾಜು, ನಿರ್ದೇಶಕರಾದ ಎಂ.ಮನೋಜ್‌ಕುಮಾರ್, ಎಸ್.ಸಿ.ಸುಧೀರ್, ಎಸ್.ಡಿ.ಗುರುಮೂರ್ತಿ ಮತ್ತಿತರರಿದ್ದರು.
    ಗಮನ ಸೆಳೆದ ಸಾಮೂಹಿಕ ನೃತ್ಯ: ನಗರದ ಸ್ಟೈಲ್ ಡ್ಯಾನ್ಸ್ ಕ್ರಿವ್‌ವಿದ್ಯಾರ್ಥಿಗಳಿಂದ ಅಪ್ಪು ಅವರ ಹಾಡಿಗೆ ಸಾಮೂಹಿಕ ನೃತ್ಯ ಗಮನ ಸೆಳೆಯಿತು. ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಶುಕ್ರವಾರ ಸಂಜೆ ಪುನೀತ್ ರಾಜ್‌ಕುಮಾರ್ ಅವರ ಗಂಧದ ಗುಡಿ ಸಾಕ್ಷೃಚಿತ್ರ ಶುಕ್ರವಾರವಷ್ಟೇ ತೆರೆ ಕಂಡಿದ್ದು ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಾಕ್ಷೃಚಿತ್ರ ಬಿಡುಗಡೆಗೊಂಡ ಮರುದಿನವೇ ಮೊದಲ ವರ್ಷದ ಪುಣ್ಯ ಸ್ಮರಣೆ ಆಚರಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಕಣ್ಣೀರು ಹಾಕಿದರು. ಅದರಲ್ಲೂ ಪುಟಾಣಿಗಳು ಕೂಡ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಬಳಿಕ ಅಪ್ಪು ಸ್ಮರಣಾರ್ಥ ಅಭಿಮಾನಿಗಳಿಂದ ಮೌನಾಚರಣೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts