More

    ಲಂಚ ಪಡೆಯುವಾಗ ಸಿಕ್ಕಿಬಿದ್ದ ದ್ವಿತೀಯ ದರ್ಜೆ ಗುಮಾಸ್ತ

    ಪಾಂಡವಪುರ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ನಿವೃತ್ತ ಶಿಕ್ಷಕರೊಬ್ಬರ ಜೀವನಾಂಶ ಪರಿಹಾರದ ದಾಖಲೆಗಳನ್ನು ಸಿದ್ಧಪಡಿಸುವ ವಿಚಾರವಾಗಿ ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ಶುಕ್ರವಾರ ನಡೆಸಿದ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ.

    ಬಿಇಒ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ತಾಲೂಕಿನ ಬನ್ನಂಗಾಡಿ ಗ್ರಾಮದ ವೆಂಕಟೇಶ್ ಅವರು ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಸುರೇಶ್‌ಬಾಬು ಅವರಿಂದ 12 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿನಡೆಸಿದ್ದಾರೆ.

    ತಾಲೂಕಿನ ಚಿನಕುರಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಸುರೇಶ್‌ಬಾಬು 2022ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯಾಗಿ ಒಂದೂವರೆ ವರ್ಷ ಕಳೆದರೂ ಸರ್ಕಾರದಿಂದ ದೊರೆಯಬೇಕಿದ್ದ ಜೀವನಾಂಶ ಪರಿಹಾರದ ಮೊತ್ತ ಹಾಗೂ ಕೋಲಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅಮಾನತುಗೊಂಡಿದ್ದ ಸಂದರ್ಭದ ಕೆಲ ತಿಂಗಳುಗಳ ಸಂಬಳ, ಭತ್ಯೆ ಪಡೆಯುವುದಕ್ಕಾಗಿ ಕೆಲವು ತಿಂಗಳಿನಿಂದ ಬಿಇಒ ಕಚೇರಿಗೆ ಅಲೆಯುತ್ತಿದ್ದರು. ಈ ಕೆಲಸಕ್ಕಾಗಿ ಕಳೆದ ಎರಡು ತಿಂಗಳ ಹಿಂದೆಯೂ 30 ಸಾವಿರ ರೂ.ಗಳನ್ನು ಫೋನ್ ಪೇ ಮೂಲಕ ವರ್ಗಾಯಿಸಿದ್ದರು ಎನ್ನಲಾಗಿದೆ. ಆದರೂ ಶಿಕ್ಷಣ ಇಲಾಖೆಯ ಗುಮಾಸ್ತ ವೆಂಕಟೇಶ್ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕೆಲಸ ಮಾಡಿಕೊಡದೆ ಸತಾಯಿಸಿದಲ್ಲದೆ, ಮತ್ತೆ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

    ಗುಮಾಸ್ತನ ಹಣದ ವ್ಯಾಮೋಹಕ್ಕೆ ಬೇಸತ್ತ ನಿವೃತ್ತ ಶಿಕ್ಷಕ ಸುರೇಶ್ ಬಾಬು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ್ವಯ ಲೋಕಾಯುಕ್ತ ಪೊಲೀಸರು ಶುಕ್ರವಾರ ಬಿಇಒ ಕಚೇರಿಗೆ ತೆರಳಿ ಲಂಚ ನೀಡುವಾಗ ದಾಳಿ ನಡೆಸಿದ ಸಿಬ್ಬಂದಿ ವೆಂಕಟೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts