More

    ಗಲ್ಲು ಶಿಕ್ಷೆ ಪ್ರಕರಣಗಳಲ್ಲಿ ಸಂತ್ರಸ್ತರು, ಸಮಾಜ ಕೇಂದ್ರಿತವಾದ ಮಾರ್ಗದರ್ಶಿ ರಚನೆಗಾಗಿ ಸುಪ್ರೀಂ ಕೋರ್ಟ್​ ಮೊರೆ ಹೋದ ಕೇಂದ್ರ ಸರ್ಕಾರ

    ನವದೆಹಲಿ: ಮರಣದಂಡನೆ ಪ್ರಕರಣಗಳಿಗೆ ಸಂಬಂಧಿಸಿ ಸಂತ್ರಸ್ತರು ಮತ್ತು ಸಮಾಜ ಕೇಂದ್ರಿತ ಮಾರ್ಗದರ್ಶಿ ರಚನೆಗೆ ಮಾರ್ಗದರ್ಶನ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿ ನೀಡಿದೆ.

    ಸುಪ್ರೀಂ ಕೋರ್ಟ್​ಗೆ ಜನವರಿ 22ರಂದು ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ಸರ್ಕಾರ, ಪ್ರಚಲಿತ ಚಾಲ್ತಿಯಲ್ಲಿರುವ ಮಾರ್ಗದರ್ಶಿ ಸೂತ್ರಗಳು ಕೇವಲ ಆರೋಪಿಗಳು ಮತ್ತು ಅಪರಾಧಿಗಳಿಗೆ ಮಾತ್ರ ಸಂಬಂಧಿಸಿದ್ದಾಗಿದೆ. ಮರಣದಂಡನೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರವನ್ನು 2014ರಲ್ಲಿ ರಚಿಸಲಾಗಿತ್ತು. ಅದು ಶತ್ರುಘ್ನ ಚೌಹಾಣ್​ ಕೇಸ್​ನಲ್ಲಿ ಸುಪ್ರೀಂ ಕೋರ್ಟ್​ ಹಾಕಿಕೊಟ್ಟ ಮಾರ್ಗದರ್ಶಿ ಸೂತ್ರ ಎಂಬ ಅಂಶದತ್ತ ಗಮನಸೆಳೆದಿದೆ.

    ಈ ಅರ್ಜಿ ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ, ಸಂಬಂಧಪಟ್ಟವರ ಪ್ರತಿಕ್ರಿಯೆಯನ್ನು ಕೋರಿದೆ. ಶತ್ರುಘ್ನ ಚೌಹಾಣ್ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದವರಿಗೆಲ್ಲರಿಗೂ ನೋಟಿಸ್ ಕಳುಹಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts