ಭಾವೈಕ್ಯತೆ ಬಿತ್ತಿದ ಸಂತ ಬಾವಾಸಾಹೇಬ ಖಾದ್ರಿ

blank

ಗೊಳಸಂಗಿ: ಗ್ರಾಮದಲ್ಲಿ ಶಾಂತಿ ಸಂದೇಶ ಸಾರಿದ್ದ ಸಂತ ಹಜರತ್ ಅಬ್ದುಲ್ ರಹೀಮ್ ಖಾದ್ರಿ ಅಲ್ ಸಿದ್ದಿಖಿ ಬಾವಾಸಾಹೇಬ ಖಾದ್ರಿ ಅವರ 336 ನೇ ಗಂಧ-ಉರುಸು ಕಾರ್ಯಕ್ರಮ ಮಾ. 9, 10 ಮತ್ತು 11ರಂದು ಹಿಂದು-ಮುಸ್ಲಿಂ ಭಾವೈಕ್ಯತೆಯಲ್ಲಿ ನೆರವೇರಲಿದೆ.
ಬಾವಾಸಾಹೇಬ ಖಾದ್ರಿ ಅವರ ಪರಂಪರೆಯಲ್ಲಿ ಪ್ರಸ್ತುತ 12 ನೇ ಪೀಠಾಧಿಪತಿಯಾದ ಹಜರತ್ ಸೈಯದ್ ಷಾ ಮುಲ್ತಾನಿ ಖಾದ್ರಿ ಮತ್ತು ಬಿರಾದರೆ ಸಜ್ಜಾದೇ ನಷೀನ್ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಹಜರತ್ ಅಬ್ದುಲ್ ರಹೀಮ್ ಖಾದ್ರಿ ಅಲ್ ಸಿದ್ದಿಖಿ ಬಾವಾಸಾಹೇಬ ಖಾದ್ರಿ ಅವರು ಗೊಳಸಂಗಿ ಗ್ರಾಮದಲ್ಲಿ 17 ನೇ ಶತಮಾನದಲ್ಲಿ ಶಾಂತಿ-ಸಂದೇಶ ಸಾರಿದ ಪುಣ್ಯ ಪುರುಷರು. ಗುಜರಾತ್ ರಾಜ್ಯದ ಡೋಲಕಾದಿಂದ ಇಸ್ಲಾಂ ಧರ್ಮದ ಪ್ರಚಾರಕ್ಕಾಗಿ ವಿಜಯಪುರದ ಕಡೆಗೆ ಬಂದಿದ್ದ ಸಂತ ಬಾವಾಸಾಹೇಬ ಖಾದ್ರಿ ಸಾವಿರಾರು ಜನರಿಗೆ ಮಾರ್ಗದರ್ಶಕರಾಗಿದ್ದರು.

ವಿಜಯಪುರವನ್ನು ಔರಂಗಜೇಬ ವಶಪಡಿಸಿಕೊಂಡಾಗ ಖಾದ್ರಿ ಅವರ ಕೀರ್ತಿಯ ಬಗ್ಗೆ ಕೇಳಿ ಆಸ್ಥಾನಕ್ಕೆ ಆವ್ಹಾಣಿಸಿದ. ಖಾದ್ರಿ ಅವರಲ್ಲಿದ್ದ ಅಪಾರ ಜ್ಞಾನ, ಸಾಮಾಜಿಕ ಕಳಕಳಿ, ಧರ್ಮದಲ್ಲಿ ಅವರು ಹೊಂದಿದ್ದ ಅಚಲವಾದ ನಂಬಿಕೆ ಔರಂಗಜೇಬನನ್ನು ಆಕರ್ಷಿಸಿದವು. ಕೂಡಲೇ ರಾಜನು ಬಾವಾಸಾಹೇಬ ನಿಮಗೇನು ಬೇಕು ಕೇಳಿ.? ಎಂದು ಪ್ರಶ್ನಿಸಿದ.

ಆಗ ಸಂತ ಬಾವಾಸಾಹೇಬರು, ನನಗೆ ಐದು ಹೊತ್ತು ನಮಾಜ್ ಮಾಡಲು ನೀರಿನ ವ್ಯವಸ್ಥೆ ಇರುವ ಪ್ರಶಾಂತವಾದ ಪ್ರದೇಶವನ್ನು ನೀಡಿ ಎಂದು ಕೇಳಿದರಂತೆ. ಆಗ ಔರಂಗಜೇಬನು 1686 ರಲ್ಲಿ ಗೊಳಸಂಗಿ ಗ್ರಾಮದ 210 ಸಂಖ್ಯೆಯ ಸಹಸ್ರಾರು ಎಕರೆ ವಿಶಾಲವಾದ ಪ್ರದೇಶವನ್ನು ಜಹಗೀರಾಗಿ ನೀಡಿದನು. ಅಂದಿನಿಂದ ಗ್ರಾಮದಲ್ಲಿ ಬಂದು ನೆಲೆಸಿದ ಸಂತರು, ನಿತ್ಯ ಪ್ರಾರ್ಥನೆಯಲ್ಲಿ ತೊಡಗಿ ಜನರ ಕಲ್ಯಾಣಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟರು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ಅಂದಿನಿಂದ ಇಂದಿನವರೆಗೆ ಬಾವಾಸಾಹೇಬ ಖಾದ್ರಿ ಅವರ ಚಿಂತನೆಗಳು. ಕೈಗೊಂಡ ಸಮಾಜಮುಖಿ ಕಾರ್ಯಗಳು ಅಸಂಖ್ಯಾತ ಭಕ್ತರ ಮನದಾಳದಲ್ಲಿ ಮನೆ ಮಾಡಿವೆ. ಮಾನವೀಯ ಗುಣಗಳೇ ಮನುಕುಲದ ಅಡಿಪಾಯ ಎಂದು ಸಾರಿದ ಸಂತ ಬಾವಾಸಾಹೇಬ ಖಾದ್ರಿ 1677 ರಲ್ಲಿ ಇಹಲೋಕ ತ್ಯಜಿಸಿದರು. ಅಂದು ಇವರ ಅಂತಿಮ ವಿಧಿ-ವಿಧಾನಗಳನ್ನು ಭಕ್ತರು ಗೊಳಸಂಗಿ ಗ್ರಾಮದಲ್ಲಿಯೇ ನೆರವೇರಿಸಿದರು. ಇವರ ತತ್ವ-ಆದರ್ಶಗಳನ್ನೆಲ್ಲ ಪಾಲಿಸುತ್ತ ಬಂದಿರುವ ಗ್ರಾಮವೂ ಸೇರಿದಂತೆ ವಿಜಯಪುರ ಜಿಲ್ಲೆಯ ಅಸಂಖ್ಯಾತ ಭಕ್ತರು ಧರ್ಮ ಕಾರ್ಯಗಳನ್ನೇ ಬದುಕಿನ ಉಸಿರಾಗಿಸಿಕೊಂಡು ಮುನ್ನಡೆದಿದ್ದಾರೆ.

ಮಾ.9 ರಂದು ರಾತ್ರಿ 9 ಗಂಟೆಗೆ ಬಾದ್ ನಮಾಜೆ, 10 ರಂದು ಸಂಜೆ 5.30 ಗಂಟೆಗೆ ಸೈಯದಶಾ ಮುಲ್ತಾನಿ ಖಾದ್ರಿ ಸಾಹೇಬ ಜಾಗೀರದಾರ ಇವರ ಮನೆಯಿಂದ ಗಂಧ ಹೊರಟು ಹಜರತ್ ಬಾವಾಸಾಹೇಬ ಖಾದ್ರಿ (ರ.ಹ) ರವರ ಮುಜಾರೆ ಶರೀಪಕ್ಕೆ ಸಜ್ಜಾದೇ ನಸೀನ ಮತ್ತು ಬಿರಾದಾರೇ ಸಜ್ಜಾದೇ ನಶೀನರವರ ನೇತೃತ್ವದಲ್ಲಿ ಸಕಲ ವಾಧ್ಯಮೇಳದೊಂದಿಗೆ ಸಂಜೆ 6.30ಕ್ಕೆ ಗಂಧದ ಕಾರ್ಯಕ್ರಮ ನಂತರ ಅನ್ನ ಸಂತರ್ಪಣೆ ಇರುವುದು. ರಾತ್ರಿ 9.30 ಗಂಟೆಗೆ ದರ್ಗಾ ಆವರಣದಲ್ಲಿ ಹೈದರಾಬಾದ್ ತಂಡದಿಂದ ಖವ್ವಾಲಿ ಕಾರ್ಯಕ್ರಮ ಇರುವುದೆಂದು ದರ್ಗಾ ಕಮಿಟಿ ಅಧ್ಯಕ್ಷರಾದ ಮುಂತಜೀಬಖಾದರಿಸಾಹೇಬ ಜಾಗೀರದಾರ ಕಮಿಟಿ ಅಧ್ಯಕ್ಷ ತಜಮುಲಖಾದ್ರಿಸಾಹೇಬ ಜಾಗೀರದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…