More

    ಐಟಿಐ ಆಗಿದೆಯಾ? ಬೆಂಗಳೂರಿನಲ್ಲಿವೆ ಮ್ಯಾನೇಜರ್​ ಹುದ್ದೆಗಳು

    ಬೆಂಗಳೂರಿನಲ್ಲಿರುವ ಐಟಿಐ ಲಿಮಿಟೆಡ್ ವಿವಿಧ ಉದ್ಯಮ ವಿಭಾಗಗಳಲ್ಲಿ ಆಧುನಿಕ ಉತ್ಪಾದನಾ ಸೌಲಭ್ಯ, ಉತ್ಪಾದನೆ, ಉಪಕರಣ, ತಂತ್ರಜ್ಞಾನ, ಪರಿಹಾರ ಮತ್ತು ಸೇವೆ ಒದಗಿಸುತ್ತದೆ. ಪ್ರಸ್ತುತ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಒಟ್ಟು 14 ಹುದ್ದೆಗಳ ಇವೆ.

    ಐಟಿಐ ಲಿಮಿಟೆಡ್‍ನಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳಿಗೆ ಅನುಗುಣವಾಗಿ ಕೌಶಲ ಹೊಂದಿರಬೇಕು. ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ದೈಹಿಕ ದೃಢತೆಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

    ಹುದ್ದೆ, ಸಂಖ್ಯೆ ವಿವರ
    * ಅಡಿಷನಲ್ ಜನರಲ್ ಮ್ಯಾನೇಜರ್/ ಜನರಲ್ ಮ್ಯಾನೇಜರ್ ಮಾರ್ಕೇಟಿಂಗ್ – 4
    * ಅಡಿಷನಲ್ ಜನರಲ್ ಮ್ಯಾನೇಜರ್/ ಜನರಲ್ ಮ್ಯಾನೇಜರ್ ಎಚ್‍ಆರ್ – 1
    * ಮ್ಯಾನೇಜರ್/ ಚೀï ಮ್ಯಾನೇಜರ್/ ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಂಎಂ) – 3
    * ಮ್ಯಾನೇಜರ್/ ಚೀï ಮ್ಯಾನೇಜರ್/ ಡೆಪ್ಯುಟಿ ಜನರಲ್ ಮ್ಯಾನೇಜರ್ (ಪಿಆರ್) – 1
    * ಅಸಿಸ್ಟೆಂಟ್ ಮ್ಯಾನೇಜರ್/ ಡೆಪ್ಯೂಟಿ ಮ್ಯಾನೇಜರ್ (ಆರ್ ಆ್ಯಂಡ್ ಡಿ) – 2
    * ಸೀನಿಯರ್ ಮ್ಯಾಥಮೆಟಿಷಿಯನ್ – 2
    * ಮ್ಯಾನೇಜರ್/ ಚೀï ಮ್ಯಾನೇಜರ್ ಆರ್ ಆ್ಯಂಡ್ ಡಿ – 1

    ಶೈಕ್ಷಣಿಕ ಅರ್ಹತೆ: ಮೆಟಿರಿಯಲ್ ಮ್ಯಾನೇಜ್‍ಮೆಂಟ್/ ಸ್ಟೋರ್ಸ್ ಮ್ಯಾನೇಜ್‍ಮೆಂಟ್/ ಪರ್ಚೇಸ್‍ನಲ್ಲಿ ಡಿಪ್ಲೋಮಾ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಎಲೆಕ್ಟ್ರಿಕಲ್/ ಟೆಲಿಕಮ್ಯುನಿಕೇಷನ್‍ನಲ್ಲಿ ಇಂಜಿನಿಯರಿಂಗ್ ಪದವಿ, ಎಂಬಿಎ-ಎಚ್‍ಆರ್/ ಎಂಎಸ್‍ಡಬ್ಲುೃ-ಎಚ್‍ಆರ್, ಪಬ್ಲಿಕ್ ರಿಲೇಷನ್ಸ್, ಜರ್ನಲಿಸಂ, ಮಾಸ್‍ಕಮ್ಯುನಿಕೇಷನ್/ ಅಡ್ವಟೈಸಿಂಗ್‍ನಲ್ಲಿ ಸ್ನಾತಕೋತ್ತರ ಪದವಿ, ಮ್ಯಾಥಮೆಟಿಕ್ಸ್ ಎಂಎಸ್ಸಿ. ಸಾಮಾನ್ಯವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ.60 ಅಂಕ, ಎಸ್ಸಿ, ಎಸ್ಟಿ. ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇ.58 ಅಂಕ ಪಡೆದಿರಬೇಕು. ಹುದ್ದೆಗೆ ಅನುಗುಣವಾಗಿ ವೃತ್ತಿ ಅನುಭವ ಅವಶ್ಯ.

    ವಯೋಮಿತಿ: ಜನರಲ್ ಮ್ಯಾನೇಜರ್​ಗೆ ಗರಿಷ್ಠ 52 ವರ್ಷ, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್​ಗೆ 50, ಚೀಫ್​ಮ್ಯಾನೇಜರ್ ಆರ್‍ಗೆ 45, ಮ್ಯಾನೇಜರ್​ಗೆ 42, ಡೆಪ್ಯುಟಿ ಮ್ಯಾನೇಜರ್‍ಗೆ 40, ಅಸಿಸ್ಟೆಂಟ್ ಮ್ಯಾನೇಜರ್​ಗೆ ಗರಿಷ್ಠ 36 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

    ವೇತನ: ಹುದ್ದೆ ಹಾಗೂ ಸ್ಥಾನಕ್ಕೆ ಅನುಗುಣವಾಗಿ ಮಾಸಿಕ 49,224 ರೂ. ನಿಂದ 96,104 ರೂ. ಇದೆ.

    ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಕೊನೇ ದಿನ: 15.1.2021
    ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ 19.1.2021

    ಅಂಚೆ ವಿಳಾಸ: DDL. GENERAL MANAGER-HR ITI LIMITED, REGD & CORPORATE OFFICE ITI BHAVAN, DOORAVANI NAGAR, BENGALURU – 560016
    ಅಧಿಸೂಚನೆಗೆ: https://bit.ly/3q2lJIf
    ಮಾಹಿತಿಗೆ: https://www.itiltd.in/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts