More

    ಲಂಡನ್​ನಲ್ಲಿ ಅದ್ಧೂರಿಯಾಗಿ ನಡೆದ ಬಸವೇಶ್ವರ ಜಯಂತಿ- ಅಂಬೇಡ್ಕರ್​ ಪ್ರತಿಮೆಗೆ ಪುಷ್ಪ ನಮನ

    ಲಂಡನ್​: ಬಸವೇಶ್ವರರ 889ನೇ ಜನ್ಮದಿನವನ್ನು ಲಂಡನ್​ನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಭಾರತೀಯ ಹೈಕಮಿಷನರ್ ಗಾಯಿತ್ರಿ ಇಸ್ಸಾರ್ ಕುಮಾರ್ ಅವರು ಬಸವೇಶ್ವರ ಪ್ರತಿಮೆ ಜತೆಗೆ ಡಾ.ಬಿ.ಆರ್​.ಅಂಬೇಡ್ಕರ್​ ಅವರ ಪ್ರತಿಮೆಗೂ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    2015ರ ನವೆಂಬರ್​ 14ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬಸವೇಶ್ವರ ಮತ್ತು ಡಾ.ಬಿ.ಆರ್​.ಅಂಬೇಡ್ಕರ್​ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ದಿನದಿಂದ ಲ್ಯಾಂಬೆತ್​ ಬಸವೇಶ್ವರ ಫೌಂಡೇಷನ್​ ವತಿಯಿಂದ ಈ ಇಬ್ಬರು ಮಹಾನುಭಾವರ ಜಯಂತಿಯನ್ನು ಏಕಕಾಲದಲ್ಲಿ ಆಚರಿಸುತ್ತಿದೆ.

    ಲಂಡನ್​ನಲ್ಲಿ ಅದ್ಧೂರಿಯಾಗಿ ನಡೆದ ಬಸವೇಶ್ವರ ಜಯಂತಿ- ಅಂಬೇಡ್ಕರ್​ ಪ್ರತಿಮೆಗೆ ಪುಷ್ಪ ನಮನ

    ಇಂದು ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅನಿವಾರ್ಯ ಕಾರಣಗಳಿಂದ ಗೈರಾಗಿದ್ದರು. ಆದರೆ ಪ್ರಕಟಣೆಯ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದ ಸಚಿವರು, ಬಸವ ಮತ್ತು ಅಂಬೇಡ್ಕರ್​ ಇಬ್ಬರೂ ಸಮಾನತೆಯ ಹರಿಕಾರರು. ಇಬ್ಬರ ಕಾಲಾವಧಿಗಳು ಬೇರೆ ಬೇರೆ ಇದ್ದರೂ ಅವರ ಧ್ಯೇಯ ಮತ್ತು ಆಶಯಗಳು ಒಂದೇ ಆಗಿದ್ದವು. ಈ ಇಬ್ಬರೂ ಚೇತನಗಳು ಭಾರತಕ್ಕೆ ಮಾತ್ರವೇ ಸೇರದೇ ವಿಶ್ವಪಥದಲ್ಲಿ ಸಾಗಿದವರು. ಅಂಥ ಮಹಾನ್​ ಹರಿಕಾರರ ಸ್ಮರಣೆಯಲ್ಲಿ ಲಂಡನ್ನಿನ ಆಚರಿಸುತ್ತಾ ಬಂದಿರುವುದು ಶ್ಲಾಘನಾರ್ಹ ಎಂದಿದ್ದಾರೆ.

    ಕಾರ್ಯಕ್ರಮದಲ್ಲಿ ಇಂಗ್ಲೆಂಡ್​ ಮೂಲದ ಕನ್ನಡ ಸಂಘಟನೆಗಳಾದ ಕನ್ನಡ ಬಳಗ ಮತ್ತು ಕನ್ನಡಿಗ ಸಂಘಟನೆ ಯುಕೆ ಮುಖ್ಯಸ್ಥರಾದ ಡಾ.ಸ್ನೇಹಾ ಕುಲಕರ್ಣಿ ಮತ್ತು ಶ್ರೀ ಗಣಪತಿ ಭಟ್ ಉಪಸ್ಥಿತರಿದ್ದರು.

    ಲಂಡನ್​ನಲ್ಲಿ ಅದ್ಧೂರಿಯಾಗಿ ನಡೆದ ಬಸವೇಶ್ವರ ಜಯಂತಿ- ಅಂಬೇಡ್ಕರ್​ ಪ್ರತಿಮೆಗೆ ಪುಷ್ಪ ನಮನ

    ಬಸವೇಶ್ವರ ಪ್ರತಿಮೆಯು ಇಂಗ್ಲೆಂಡ್​ನಲ್ಲಿ ಭಾರತದ ಪ್ರಧಾನಿಯಿಂದ ಅನಾವರಣಗೊಂಡ ಮೊದಲ ಪ್ರತಿಮೆಯಾಗಿದೆ ಮತ್ತು ಸಂಸತ್ತಿನ ಸಮೀಪದಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಅನುಮೋದಿಸಿದ ಮೊದಲ ಪರಿಕಲ್ಪನಾ ಪ್ರತಿಮೆಯಾಗಿದೆ. 1921 ರಿಂದ 1922 ರವರೆಗೆ ಲಂಡನ್‌ನಲ್ಲಿ ಅಂಬೇಡ್ಕರ್​ ಅವರು ಉನ್ನತ ಶಿಕ್ಷಣವನ್ನು ಪಡೆಯುವಾಗ ವಾಸಿಸುತ್ತಿದ್ದ ಅಂಬೇಡ್ಕರ್ ಹೌಸ್​ ಅನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ ಎಂದು ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ, ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts