More

    ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲಿ-ಅಭಿನವ ರಾಚೋಟಿವೀರ ಸ್ವಾಮೀಜಿ ಸಲಹೆ

    ರಾಯಚೂರು: ಮಕ್ಕಳಲ್ಲಿ ಸಂಸ್ಕಾರ ಮರೆಯಾಗುತ್ತಿದ್ದು, ಉತ್ತಮ ಸಂಸ್ಕಾರ ನೀಡುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಎಲ್ಲ ಪಾಲಕರು ಮುಂದಾಗಬೇಕು ಎಂದು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಸ್ವಾಮೀಜಿ ಸಲಹೆ ನೀಡಿದರು.

    ಸ್ಥಳೀಯ ಸೋಮವಾರಪೇಟೆ ಹಿರೇಮಠದಲ್ಲಿ ಜಂಗಮ ವಟುಗಳಿಗಾಗಿ ಗುರುವಾರ ಹಮ್ಮಿಕೊಂಡಿದ್ದ ವೇದಾಧ್ಯಯನ ಹಾಗೂ ಸಂಸ್ಕೃತ ಪಾಠಶಾಲೆಗೆ ಚಾಲನೆ ನೀಡಿ ಮಾತನಾಡಿದರು. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ನಾವು ಸಂಸ್ಕಾರವನ್ನು ಕಲಿಸಿದರೆ ಅವರು ಮುಂದೆ ಸಮಾಜಕ್ಕೆ ಮಾದರಿಯಾಗುತ್ತಾರೆ. ವೇದಾಧ್ಯಯನದಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯಲಿದ್ದು, ಸಂಸ್ಕೃತ ಪಾಠಶಾಲೆಯನ್ನು ಮುನ್ನಡೆಸಲು ಮುಂದಾಗಿರುವ ಶಿವಯ್ಯಸ್ವಾಮಿ, ನಾಗಯ್ಯಸ್ವಾಮಿ ಕಾರ್ಯ ಶ್ಲಾಘನೀಯ ಎಂದರು.

    ಈ ಸಂದರ್ಭ ಮಠದ ಭಕ್ತರಾದ ಷಣ್ಮುಕಪ್ಪ ವೆಂಕಟಾಪುರ, ಗದ್ವಾಲ್ ಪಂಪಣ್ಣ, ವೀರಭದ್ರಪ್ಪ ಗದ್ವಾಲ್, ಜಂಗಮ ಸಮುದಾಯದ ಮುಖಂಡರಾದ ಪ್ರಕಾಶ ನಂದಿ, ಸಿದ್ದಯ್ಯಸ್ವಾಮಿ, ಪ್ರಭುದೇವ, ಪ್ರಭು ಶಾಸ್ತ್ರಿ, ಕಲ್ಲಯ್ಯಸ್ವಾಮಿ, ಮಹಾಂತಯ್ಯ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಶರಣಬಸವ ಹಿರೇಮಠ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts