More

    ನಟಿ ಸಮಂತಾ, ನಾಗಚೈತನ್ಯ ಮತ್ತು ನಾಗಾರ್ಜುನರನ್ನು ನೋಡಿ ಈ ವಿಚಾರವನ್ನು ಕಲಿಯಬೇಕಂತೆ!

    ಹೈದರಾಬಾದ್​: ನಟ ನಾಗಚೈತನ್ಯ ತಮ್ಮ ಬಂಗಾರರಾಜು ಚಿತ್ರದ ಪ್ರಚಾರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೋದಲೆಲ್ಲ ಅವರ ಸಿನಿಮಾಗಿಂತ ವೈಯಕ್ತಿಕ ಬದುಕಿನ ಬಗ್ಗೆಯೇ ಪ್ರಶ್ನಿಸಲಾಗುತ್ತಿದೆ. ಬಂಗಾರರಾಜು ಚಿತ್ರದಲ್ಲಿ ಅವರ ತಂದೆ ನಾಗಾರ್ಜುನ ಕೂಡ ನಟಿಸಿದ್ದು, ಅವರು ಕೂಡ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ನಾಗಾರ್ಜುನ ಕೂಡ ಮಗನ ಡಿವೋರ್ಸ್​ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. ಗಮನಾರ್ಹವೆಂದರೆ ತಂದೆ-ಮಗ ಇಬ್ಬರು ಡಿವೋರ್ಸ್​ ಬಗ್ಗೆ ಪಾಸಿಟಿವ್​ ಮಾತುಗಳನ್ನಾಡುತ್ತಿದ್ದಾರೆ.

    ಸ್ವಇಚ್ಛೆಯಿಂದಲೇ ನಾವಿಬ್ಬರು ಡಿವೋರ್ಸ್​ ತೆಗೆದುಕೊಂಡಿದ್ದೇವೆ. ಇಲ್ಲಿ ಏನೂ ಮುಖ್ಯವಲ್ಲ ಮತ್ತು ನಮ್ಮ ನಿರ್ಧಾರವನ್ನು ಬಹಳ ಸಂತೋಷವೆಂದು ನಾವಿಬ್ಬರು ಪರಿಗಣಿಸಿದ್ದೇವೆ ಎಂದು ನಾಗಚೈತನ್ಯ ಹೇಳಿದರೆ, ಡಿವೋರ್ಸ್​ ಸಂದರ್ಭದಲ್ಲಿ ನನ್ನ ಮಗನ ಬಗ್ಗೆ ತುಂಬಾ ಚಿಂತಿಸುತ್ತಿದ್ದೆ. ಆದರೆ ಅವನು ತುಂಬಾ ಚೆನ್ನಾಗಿದ್ದನ್ನು ನೋಡಿ ಸುಮ್ಮನಾದೆ ಮತ್ತು ಪ್ರೌಢಾವಸ್ಥೆಯಲ್ಲಿ ಆತನ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ನಾಗಾರ್ಜುನ ಹೇಳಿದ್ದಾರೆ. ಆದರೆ, ಎಲ್ಲಿಯೂ ಇಬ್ಬರು ಸಮಂತಾ ಹೆಸರನ್ನು ಪ್ರಸ್ತಾಪಿಸಲಿಲ್ಲ.

    ಇನ್ನು ಸಮಂತಾ ವಿಚಾರಕ್ಕೆ ಬಂದರೆ, ಡಿವೋರ್ಸ್​ ಆದಾಗಿನಿಂದ ಆಕೆ ಸಾಮಾಜಿಕ ಜಾಲತಾಣದಲ್ಲಿ ಡಿವೋರ್ಸ್​ ಕುರಿತಾಗಿ ನೆಗಿಟಿವ್​ ಆಗಿ ಮಾತನಾಡುತ್ತಿದ್ದಾರೆ. ಕೆಲ ವೇದಿಕೆಯಲ್ಲಿ ಡಿವೋರ್ಸ್​ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ನಕಾರಾತ್ಮಕ ಮಾತುಗಳನ್ನೇ ಆಡುತ್ತಿದ್ದಾರೆ. ಅಲ್ಲದೆ, ನೆಟ್ಟಿಗರು ಕೇಳಿದ ಪ್ರಶ್ನೆಗಳಿಗೂ ಖಾರವಾಗಿಯೇ ಉತ್ತರ ನೀಡುವ ಮೂಲಕ ಡಿವೋರ್ಸ್​ ವಿಚಾರದಲ್ಲಿ ಸಮಂತಾ ಸೂಕ್ಷ್ಮತೆ ಮರೆಯುತ್ತಿಲ್ಲ ಎಂದು ಕೆಲವರು ಚರ್ಚಿಸುತ್ತಿದ್ದಾರೆ.

    ಹೀಗಾಗಿ ನಾಗಚೈತನ್ಯ ಮತ್ತು ಸಮಂತಾರನ್ನು ಹೋಲಿಸಿ, ನೆಟಿಜನ್‌ಗಳು, ವಿಶೇಷವಾಗಿ ಚೈತನ್ಯ ಅವರ ಅಭಿಮಾನಿಗಳು ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಮಂತಾ ನಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡುವುದನ್ನು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬ್ರೇಕ್ ಅಪ್ ಬಗ್ಗೆ ಉಲ್ಲೇಖಿಸುವುದನ್ನು ನಿಲ್ಲಿಸಿದರೆ ಉತ್ತಮ. ಏಕೆಂದರೆ, ಈ ಹೇಳಿಕೆಗಳು ಸಮಂತಾಗೆ ತೀವ್ರ ಸಂಕಟವನ್ನು ಉಂಟುಮಾಡಿವೆ ಎಂದು ಹೇಳಿದ್ದಾರೆ. ನಾಗಾರ್ಜುನ ಮತ್ತು ನಾಗಚೈತನ್ಯರಂತೆ ಪ್ರಬುದ್ಧರಾಗಿ ಹೇಳಿಕೆ ನೀಡುವುದನ್ನು ಕಲಿಯಬೇಕು ಎಂದಿದ್ದಾರೆ. (ಏಜೆನ್ಸೀಸ್​)

    ಪೈಲಟ್​ ದಿಗ್ಭ್ರಮೆ… ಸೇನಾ ಹೆಲಿಕಾಪ್ಟರ್​ ಪತನಕ್ಕೆ ನಿಖರ ಕಾರಣ ತಿಳಿಸಿದ ತನಿಖಾಧಿಕಾರಿಗಳು!

    ಹಾಲಿನ ದರ 3 ರೂ. ಏರಿಕೆ?: ಸಿಎಂ ಜತೆ ರ್ಚಚಿಸಿ ನಿರ್ಧಾರ; ಬಾಲಚಂದ್ರ ಜಾರಕಿಹೊಳಿ ಹೇಳಿಕೆ

    ಜಿಲ್ಲಾಧಿಕಾರಿಗಳಿಗೆ ಮತ್ತಷ್ಟು ಬಲ: ಹೊರೆ ಕಡಿಮೆ ಮಾಡಲು ಹೆಚ್ಚುವರಿ ಎಡಿಸಿಗಳ ನೇಮಕ; ಜವಾಬ್ದಾರಿಗಳ ವಿಕೇಂದ್ರೀಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts