More

    ಮೈನಿಂಗ್​ ಮಾಫಿಯಾ ಬೆನ್ನಟ್ಟುವಾಗ ಗುಂಡಿನ ಚಕಮಕಿ: ಪೊಲೀಸರ ಗುಂಡೇಟಿಗೆ ಬಿಜೆಪಿ ನಾಯಕನ ಪತ್ನಿ ಬಲಿ

    ಡೆಹ್ರಾಡೂನ್: ಮೈನಿಂಗ್​ ಮಾಫಿಯಾವನ್ನು ಬೆನ್ನಟ್ಟಿ ಹೋಗುವಾಗ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದು, ಓರ್ವ ಮಹಿಳೆ ಸಾವಿಗೀಡಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಗುರುಪ್ರೀತ್​ ಕೌರ್​ ಎಂದು ಗುರುತಿಸಲಾಗಿದೆ. ಇವರು ಬಿಜೆಪಿ ನಾಯಕ ಗುರ್ತಾಜ್​ ಭುಲ್ಲರ್ ಅವರು ಪತ್ನಿ. ಮೈನಿಂಗ್​ ಮಾಫಿಯಾ ಮತ್ತು ಉತ್ತರ ಪ್ರದೇಶ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಗುರುಪ್ರೀತ್​ ಕೌರ್​ ಅವರಿಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ.

    ಜಫರ್​ ಎಂಬ ಮೈನಿಂಗ್​ ಮಾಫಿಯಾದ ಆರೋಪಿಯನ್ನು ಬಂಧಿಸಲು ಉತ್ತರ ಪ್ರದೇಶದ ಮೊರಾದಾಬಾದ್​ ಪೊಲೀಸ್​ ತಂಡವು ಉತ್ತರಾಖಂಡದ ಜಾಸ್ಪುರ್​ಗೆ ತೆರಳಿತ್ತು. ಈ ವೇಳೆ ಆರೋಪಿ ಮತ್ತು ಆತನ ಸಹಚರರೊಂದಿಗೆ ನಡೆದ ಫೈರಿಂಗ್​ನಲ್ಲಿ ಇಬ್ಬರು ಪೊಲೀಸರು ಗುಂಡೇಟಿಗೆ ಗಾಯಗೊಂಡರೆ, ಮೂವರು ಪೊಲೀಸ್​ ಸಿಬ್ಬಂದಿ ಬೇರೆ ಕಾರಣಗಳಿಂದ ಗಾಯಗೊಂಡಿದ್ದಾರೆ.

    ಪೊಲೀಸರ ಪ್ರಕಾರ ಆರೋಪಿ ಜಫರ್ ವಾಂಟೆಡ್​ ಕ್ರಿಮಿನಲ್​ ಆಗಿದ್ದು, ಆತನ ಸುಳಿವು ನೀಡಿದರೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಜಾಸ್ಪುರ್​ನ ಭುಲ್ಲಾರ್ ಎಂಬುವರ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎಂಬ ಸುಳಿವು ಸಿಕ್ಕ ಮೇರೆಗೆ ಅವರನ್ನು ಬಂಧಿಸಲು ಪೊಲೀಸ್​ ತಂಡ ತೆರಳಿತ್ತು. ಪೊಲೀಸರನ್ನು ನೋಡಿ ಪರಾರಿಯಾಗುವಾಗ ಮೈನಿಂಗ್​ ಮಾಫಿಯ ಮತ್ತು ಪೊಲೀಸರ ನಡುವೆ ಫೈರಿಂಗ್​ ನಡೆದಿದೆ.

    ಇದೀಗ ಶೂಟೌಟ್​ನಲ್ಲಿ ಬಿಜೆಪಿ ನಾಯಕನ ಪತ್ನಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ನಾಲ್ವರು ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಅಲ್ಲದೆ, ಪೊಲೀಸರ ಮೇಲೆ ಉತ್ತರಾಖಂಡದಲ್ಲಿ ಕೊಲೆ ಪ್ರಕರಣ ಸಹ ದಾಖಲಾಗಿದೆ. ಗಾಯಗೊಂಡಿರುವ ಐವರು ಪೊಲೀಸರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. (ಏಜೆನ್ಸೀಸ್​)

    ಹಾಸನಾಂಬೆ ಜಾತ್ರಾ ಮಹೋತ್ಸವ: ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದಂತೆ ಮೊಳಗಿತು ಜಯಘೋಷ…

    ಹಿಜಾಬ್​ ಬ್ಯಾನ್​ ಕುರಿತು ಸುಪ್ರೀಂಕೋರ್ಟ್​ನಲ್ಲೇ ವಿಭಿನ್ನ ತೀರ್ಪು! 10 ದಿನಗಳ ಸುದೀರ್ಘ ವಿಚಾರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ಪ್ರೊ ಕಬಡ್ಡಿ ಲೀಗ್​ ಸೀಸನ್​ 9: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಡಿಸೆಂಬರ್​ 17ಕ್ಕೆ ಫೈನಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts