More

    ಅತಿಯಾದ ಸೆಕ್ಸ್​ನಿಂದಲೂ ಬರುತ್ತೆ ಈ ಕಾಯಿಲೆ! ಪ್ರಾಣಘಾತುಕ ರೋಗದ ಬಗ್ಗೆ ವೈದ್ಯರ ಎಚ್ಚರಿಕೆ

    ಮನುಷ್ಯನ ಆರೋಗ್ಯವನ್ನು ಹಂತ ಹಂತವಾಗಿ ಕಾಡುವ ರೋಗಗಳಲ್ಲಿ ಅಸ್ತಮಾ ಕಾಯಿಲೆಯು ಒಂದು. ಕಫ ಎಂದು ಕರೆಯಲ್ಪಡುವ ಈ ರೋಗವು ಮಳೆಗಾಲ ಮತ್ತು ಮೋಡದ ವಾತಾವರಣ ಇದ್ದಾಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿರ್ಲಕ್ಷ್ಯ ಮಾಡಿದ್ದಲ್ಲಿ ಇದು ಪ್ರಾಣಘಾತುಕವೂ ಹೌದು.

    ಅಸ್ತಮಾ ಕಾಯಿಲೆ ಬಗ್ಗೆ ಆಯುರ್ವೇದಿಕ್​ ಡಾಕ್ಟರ್​ ಮಹಾಂತೇಶ್​ ಬಿ ರುದ್ರಾಪುರಿ ಅವರು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿ ಬಹಳ ಉಪಯುಕ್ತ ಮಾಹಿತಿಗಳನ್ನು ನೀಡಿದ್ದಾರೆ.

    ನಮ್ಮ ಶರೀರದಲ್ಲಿ ಕಫ ಮತ್ತು ವಾತದೋಷವನ್ನು ಹೆಚ್ಚಿಗೆ ಮಾಡುವಂತಹ ಆಹಾರಗಳಿಂದ ಅಸ್ತಮಾ ಉಂಟಾಗುತ್ತದೆ. ಮೊಸರು, ಉದ್ದಿನ ಕಾಳು, ಅತಿ ತಂಪಾದ ಪಾನೀಯ, ಕರಿದ ಪದಾರ್ಥಗಳು, ಹಸಿ ಹಾಲು, ಮಾಂಸಾಹಾರ, ಅತಿ ಬಿಸಿಲು ಅಥವಾ ಅತಿ ಗಾಳಿಯಲ್ಲಿ ಅಡ್ಡಾಡುವುದು ಮತ್ತು ಅತಿಯಾದ ಭಾರವನ್ನು ಹೊರುವುದು ಹಾಗೂ ಅತಿ ತಂಪಾದ ನೀರಿನಲ್ಲಿ ಸ್ನಾನ ಮಾಡುವುದು ಮಾಡುವುದರಿಂದ ಅಸ್ತಮಾ ರೋಗ ಕಾಣಿಸಿಕೊಳ್ಳಲಿದೆ.

    ಇನ್ನು ವಿಶೇಷವಾಗಿ ಅತಿಯಾದ ಲೈಂಗಿಕತೆಯಿಂದಲೂ ಅಸ್ತಮಾ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

    ರೋಗದ ಲಕ್ಷಣಗಳು ಯಾವುವು?
    ಅಸ್ತಮಾ ರೋಗಿಗಳಲ್ಲಿ ಮೊದಲನೆಯದಾಗಿ ಉಸಿರಾಟದ ತೊಂದರೆ. ವಿಶೇಷವಾಗಿ ಮೋಡದ ವಾತಾವರಣ ಇದ್ದಾಗ ಇಂತಹ ರೋಗಿಗಳಲ್ಲಿ ಉಸಿರಾಟದ ತೊಂದರೆ ಉಲ್ಬಣಗೊಳ್ಳುತ್ತದೆ. ಇಂತವರು ಎದ್ದು ಕುಳಿತಾಗ ಮತ್ತು ಕಫ ಶರೀರದಿಂದ ಹೊರಗೆ ಹೋದಾಗ ಸ್ವಲ್ಪ ಸಮಾಧಾನ ದೊರೆಯುತ್ತದೆ. ಇದರೊಂದಿಗೆ ಸತತವಾದ ನೆಗಡಿ, ಕೆಮ್ಮು, ತಲೆ ಸುತ್ತುವುದು ಮತ್ತು ನಿದ್ರಾಹೀನತೆಯು ಅಸ್ತಮಾ ರೋಗದ ಮುಖ್ಯ ಲಕ್ಷಣಗಳು.

    ಅಸ್ತಮಾ ನಿರ್ವಹಣೆ ಹೇಗೆ?
    ಅಸ್ತಮಾ ಹೆಚ್ಚಾದಾಗ ಮೊದಲನೆಯದಾಗಿ ಸೈದವ ಲವಣವನ್ನು ಎಳ್ಳೆಣ್ಣೆಯಲ್ಲಿ ಬಿಸಿ ಮಾಡಿ ಎದೆಗೆ ಸವರಿ ಅಂದರೆ ಕಾವು ಕೊಡುವುದರಿಂದ ಕಫ ಕರಗಿ ರಿಲೀಫ್​ ಸಿಗುತ್ತದೆ. ಪುಷ್ಕರ ಮೂಲ, ಶುಂಠಿ, ಅರಿಶಿನ ಮುಂತಾದವುಗಳನ್ನು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅಲ್ಲದೆ, ಅಸ್ತಮಾ ಹೋಗಲಾಡಿಸಲು ಆಯುರ್ವೇದದಲ್ಲಿ ಸಾಕಷ್ಟು ಔಷಧಿಗಳು ಸಹ ಇವೆ ಎಂದು ವೈದ್ಯರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts