More

    ಸೌಕರ್ಯ ಕಲ್ಪಿಸದಿದ್ದರೆ ಮತದಾನ ಬಹಿಷ್ಕಾರ: ಜನಶಕ್ತಿ ಸಂಘಟನೆಯ ಕಾರ್ಯದರ್ಶಿ ಎಂ.ಸಿದ್ದರಾಜು ಎಚ್ಚರಿಕೆ

    ಮಂಡ್ಯ: ಮದ್ದೂರು ಪುರಸಭೆ 15ನೇ ವಾರ್ಡ್ ವ್ಯಾಪ್ತಿಯ ಗಾಂಧಿ ಉದ್ಯಾನದ ಶ್ರಮಿಕನಗರವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಅಧಿಕೃತವಾಗಿ ಸ್ಲಂ ಪ್ರದೇಶವೆಂದು ಘೋಷಿಸುವುದರ ಜತೆಗೆ ಮೂಲಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯದರ್ಶಿ ಎಂ.ಸಿದ್ದರಾಜು ಎಚ್ಚರಿಸಿದರು.
    ಕೊಳಚೆ ಪ್ರದೇಶಗಳ(ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ-1973ರನ್ವಯ ಸೆಕ್ಷನ್ 3ರಡಿ ಯಾವುದೇ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಿದ ವರ್ಷದೊಳಗೆ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ಮೂಲಸೌಕರ್ಯ ಕಲ್ಪಿಸಬೇಕು. ಬಹುತೇಕ ಸ್ಲಂಗಳು ಇನ್ನೂ ಅಧಿಕೃತವಾಗಿ ಕೊಳಚೆ ಪ್ರದೇಶವೆಂದು ಘೋಷಿಸಿಲ್ಲ. ಘೋಷಿಸಲ್ಪಟ್ಟ ಸ್ಲಂಗಳಿಗೆ ಮೂಲಸೌಕರ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಗಾಂಧಿ ಉದ್ಯಾನದ ಶ್ರಮಿಕನಗರದಲ್ಲಿ 70 ವರ್ಷಗಳಿಂದ ಜನರು ವಾಸವಿದ್ದಾರೆ. ಆದಾಗ್ಯೂ ಈವರೆಗೆ ಅದನ್ನು ಕೊಳಚೆ ಪ್ರದೇಶವನ್ನು ಘೋಷಿಸಿಲ್ಲ. ಜಿಲ್ಲಾಡಳಿತ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಈ ಪ್ರದೇಶವನ್ನು ಸ್ಲಂ ಎಂದು ಘೋಷಿಸಿ ಅಲ್ಲಿನ ನಿವಾಸಿಗಳಿಗೆ ಪರಿಚಯ ಪತ್ರ ಅಥವಾ ಹಕ್ಕುಪತ್ರ ನೀಡಬೇಕು. ಮೂಲಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಚುನಾವಣೆಯನ್ನು ಬಹಿಷ್ಕರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಮುಖಂಡರಾದ ರವಿ, ಪ್ರಶಾಂತ್, ದೊಡ್ಡತಾಯಮ್ಮ, ಆಶಾ, ಸಣ್ಣಮ್ಮ, ರಾಜಣ್ಣ, ಕರ್ನಾಟಕ ಜನಶಕ್ತಿ ಮುಖಂಡರಾದ ವೈದುನ, ನಗರಕೆರೆ ಜಗದೀಶ್, ಮಹಿಳಾ ಮನ್ನಡೆ ಸಂಚಾಲಕಿ ಶಿಲ್ಪಾ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts