More

    ಪೂಜೆ, ಪ್ರಾರ್ಥನೆ ಏಕೆ ಮಾಡಬೇಕು- ನಿತ್ಯದ ದಿನಚರಿಯಲ್ಲಿ ಸಮಯ ಮೀಸಲಿರಿಸಬೇಕೇಕೆ?

    |ಸಿ.ಜಿ.ವೆಂಕಟೇಶ್ವರ, ಚಿತ್ರದುರ್ಗ

    ಪ್ರಪಂಚದ ಬಹುತೇಕ ಎಲ್ಲ ಧರ್ಮಗಳ ಜನರು ತಮ್ಮ ದಿನಚರಿಯಲ್ಲಿ ಪೂಜೆ ಮತ್ತು ಪ್ರಾರ್ಥನೆಗೆ ಸ್ವಲ್ಪವಾದರೂ ಸಮಯ ಮೀಸಲಿಟ್ಟಿರುತ್ತಾರೆ. ಪೂಜೆ ಮತ್ತು ಪ್ರಾರ್ಥನೆಯಿಂದ ಏನು ಸಿಗುತ್ತದೆ ಎಂದು ಪ್ರಶ್ನೆ ಕೇಳುವವರಿಗೆ ಅದರಿಂದ ಅವ್ಯಕ್ತ ಆನಂದ, ನೆಮ್ಮದಿಯನ್ನು ಪಡೆದವರ ಜೀವನವೇ ಉತ್ತರ.ಸಿ.ಜಿ. ವೆಂಕಟೇಶ್ವರ, ಚಿತ್ರದುರ್ಗಭಾರತದ ಸನಾತನ ಪರಂಪರೆಯ ಆಧಾರದ ಮೇಲೆ ಹೇಳುವುದಾದರೆ ಪೂಜೆ ಎನ್ನುವುದು ಯೋಗ ಶಾಸ್ತ್ರದ ಒಂದು ಪದ್ಧತಿ.

    ಸಾಧನೆಗೆ ಅನುಸಂಧಾನ ಪ್ರಕ್ರಿಯೆ. ಸೃಷ್ಟಿ ಸ್ಥಿತಿ ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ಸವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ವಿುಕ ವಿಧಾನವೇ ಪೂಜೆ ಮತ್ತು ಪ್ರಾರ್ಥನೆ.ಶಂಕರಾಚಾರ್ಯರು ಪೂಜೆಯನ್ನು ಎರಡು ವಿಧಗಳಾಗಿ ವಿಂಗಡಿಸಿ ಅರ್ಥೈಸಿದ್ದಾರೆ. ಮೊದಲನೆಯದರಲ್ಲಿ ನಾವು ಮಾಡುವ ಶಾಸ್ತ್ರೋಕ್ತವಾದ ಕರ್ಮ ಅಥವಾ ಕೆಲಸಗಳನ್ನು ಪೂಜೆ ಎಂದಿದ್ದಾರೆ. ಇದು ನಾವು ಮಾಡುವ ಸ್ನಾನದಿಂದ ಹಿಡಿದು ಸಂಧ್ಯಾವಂದನೆ, ಭೋಜನ, ಯಾತ್ರೆ,ಪರೋಪಕಾರ, ಅಂತ್ಯಸಂಸ್ಕಾರ ಇತ್ಯಾದಿ ನಾವು ಬಹುತೇಕರು ತಿಳಿದೋ ತಿಳಿಯದೆಯೋ ಒಂದಲ್ಲ ಒಂದು ರೀತಿಯಲ್ಲಿ ಈ ವಿಧವಾದ ಪೂಜೆಯನ್ನು ಮಾಡುತ್ತಲೇ ಇರುತ್ತೇವೆ. ಎರಡನೇ ರೀತಿಯಲ್ಲಿ ಪೂಜೆಯೆಂದರೆ ನಿಯಮಬದ್ಧವಾಗಿ ಸಾಲಿಗ್ರಾಮ, ಕಳಶ, ವಿಗ್ರಹಗಳಿಗೆ ಮಾಡುವ ಶೋಡಶೋಪಚಾರ. ಕೆಲವು ನಾಸ್ತಿಕರಿಗೆ ದೇವರು ಮತ್ತು ಪೂಜೆಯ ಬಗ್ಗೆ ನಂಬಿಕೆ ಇಲ್ಲದಿರಬಹುದು. ಅದು ಅವರ ವೈಯಕ್ತಿಕ ವಿಚಾರವಾದರೂ ಪೂಜೆಯಿಂದ ಹಲವಾರು ಉಪಯೋಗಗಳಿವೆ ಎಂಬುದು ಸಾರ್ವತ್ರಿಕ ಸತ್ಯ. ಪೂಜೆ ಮಾಡುವುದರಿಂದ ನಮ್ಮಲ್ಲಿರುವ ನಕಾರಾತ್ಮಕ ಭಾವನೆಗಳು ಕ್ರಮೇಣ ಕಡಿಮೆಯಾಗಿ, ಸಕಾರಾತ್ಮಕ ಗುಣಗಳು ಬೆಳೆದು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಪೂಜೆಯ ಬಲದಿಂದ ದೇವರ ಅನುಗ್ರಹ ನಮ್ಮ ಮೇಲಿದೆ ಎಂಬ ಭಾವನೆ ಬೆಳೆಯುತ್ತದೆ.

    ಈ ಭಾವನಾತ್ಮಕ ಅಂಶದಿಂದಲೇ ಕೆಲವೊಮ್ಮೆನಮ್ಮ ಕೆಲಸದಲ್ಲಿ ನಮಗೆ ಹೆಚ್ಚು ಆಸಕ್ತಿ ಬೆಳೆಯುತ್ತದೆ. ದೇಹ ಮತ್ತು ಆತ್ಮದ ಶುದ್ಧಿಗಾಗಿಯೂ ಪೂಜೆ ಅತ್ಯಗತ್ಯ. ನಾವೆಲ್ಲರೂ ನಮ್ಮ ಶಕ್ಱಾನುಸಾರ ಪೂಜೆ, ಪ್ರಾರ್ಥನೆ, ಸತ್ಸಂಗ, ಯೋಗಾಸನ, ಪ್ರಾಣಾಯಾಮ, ಧ್ಯಾನ ಮುಂತಾದವುಗಳನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ತನ್ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವುದಲ್ಲದೆ, ಅದರಿಂದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬೇಕು.ಬಿಳಿಯ ಚೀಲ ಮತ್ತು ಇದ್ದಿಲಿನ ಪುಡಿ.

    ಪೂಜೆ, ಪ್ರಾರ್ಥನೆ ಮುಂತಾದವು ಕೇವಲ ಸಮಯ ಹಾಳು ಮಾಡುವ ವ್ಯರ್ಥ ಕಸರತ್ತು ಎನ್ನುವವರಿಗೇನೂ ಕಡಿಮೆಯಿಲ್ಲ. ಅಂಥವರಿಗೆ ಈ ಘಟನೆ ಉತ್ತರವಾಗಬಹುದು. ಒಮ್ಮೆ ಒಬ್ಬ ಶಿಷ್ಯ ತನ್ನ ಗುರುಗಳ ಬಳಿ ಬಂದ. ‘ಗುರುಗಳೇ, ಈ ಪೂಜೆ, ಪ್ರಾರ್ಥನೆ, ಭಗವದ್ಗೀತೆ ಓದುತ್ತಾ ಇಷ್ಟು ದಿನ ಕಳೆದರೂ ನನಗೇನೂ ಉಪಯೋಗವಾಗಲಿಲ್ಲ. ನಾನೇಕೆ ಪೂಜೆ ಮಾಡಬೇಕು’ ಎಂದು ಕೇಳಿದ. ಗುರುಗಳು ಒಂದು ಬಿಳಿ ಬಟ್ಟೆಯ ಚೀಲವನ್ನು ಇದ್ದಿಲಿನ ಪುಡಿಯಲ್ಲಿ ಅದ್ದಿ, ಕಪ್ಪಾದ ಆ ಚೀಲವನ್ನು ಶಿಷ್ಯನಿಗೆ ಕೊಟ್ಟು, ಒಂದು ವಾರ ಅದರಲ್ಲಿ ಹತ್ತಿರದ ಕೊಳದಿಂದ ನೀರು ತುಂಬಿಸಿಕೊಂಡು ಬಾ ಎಂದು ಹೇಳಿದರು. ಶಿಷ್ಯ ಅದರಲ್ಲಿ ನೀರು ತುಂಬಿಕೊಂಡು ಗುರುಗಳ ಆಶ್ರಮ ತಲುಪುವ ಮೊದಲೇ ನೀರು ಸೋರಿ ಹೋಗಿತ್ತು. ಗುರುಗಳಿಗೆ ಈ ವಿಷಯ ತಿಳಿಸಿದ. ಆದರೂ ‘ಚಿಂತಿಸದಿರು ನಾಳೆ ಮತ್ತೆ ಅದೇ ಚೀಲದಲ್ಲಿ ನೀರು ತೆಗೆದುಕೊಂಡು ಬಾ’ ಎಂದರು. ಒಂದು ವಾರ ಹೀಗೆಯೇ ಕಳೆಯಿತು. ಗುರುಗಳು ಶಿಷ್ಯನನ್ನು ಕರೆದು ಚೀಲವನ್ನು ಗಮನವಿಟ್ಟು ನೋಡಲು ಹೇಳಿದರು. ಇದ್ದಿಲಿನ ಪುಡಿಯಿಂದ ಕಪ್ಪಾಗಿದ್ದ ಚೀಲ ಒಂದು ವಾರದಲ್ಲಿ ಬಿಳಿಯಾಗಿ ಪರಿವರ್ತನೆ ಆಗಿತ್ತು. ಆಗ ಗುರುಗಳು, ‘ನಾವು ಪ್ರತಿದಿನ ಮಾಡುವ ಪೂಜೆ, ಪ್ರಾರ್ಥನೆ ಕ್ರಮೇಣ ನಮ್ಮಲ್ಲಿ ಶಾಂತಿ, ನೆಮ್ಮದಿ ತರುತ್ತವೆ. ನಾವು ಮಾಡಿದ ಪಾಪ ಕಾರ್ಯಗಳು ಕ್ರಮೇಣ ನಾಶವಾಗುತ್ತವೆ. ಅದಕ್ಕಾಗಿ ಎಲ್ಲರೂ ಪೂಜೆ-ಪ್ರಾರ್ಥನೆ ಮಾಡಬೇಕು’ ಎಂದು ಹೇಳಿದರು. ಗುರುಗಳ ಮಾತಿಗೆ ಶಿಷ್ಯ ತಲೆದೂಗಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts