More

    ಫಿಟ್​​ನೆಸ್​ ಗುಟ್ಟು ಬಿಚ್ಚಿಟ್ಟ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ನೀಡಿದ ಸಂದೇಶ ಹೀಗಿದೆ…; ನೀವೂ ಟ್ರೈ ಮಾಡಬಹುದು..!

    ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರೋಗ್ಯ, ಫಿಟ್​ನೆಸ್​ ಬಗ್ಗೆ ನಿನ್ನೆ ಮನ್​ ಕೀ ಬಾತ್​ನಲ್ಲಿ ಕೆಲವರು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ನರೇಂದ್ರ ಮೋದಿಯವರು, ನನ್ನ ಫಿಟ್​ನೆಸ್​ ಬಗ್ಗೆ ಹೇಳಲು ತುಂಬ ವಿಷಯವಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಅಪ್​​ಲೋಡ್ ಮಾಡುತ್ತೇನೆ. ನೀವದನ್ನು ನಮೋ ಆ್ಯಪ್​ನಲ್ಲೂ ನೋಡಬಹುದು ಎಂದು ತಿಳಿಸಿದ್ದರು.

    ಮಾತಿನಂತೆ ಪ್ರಧಾನಿ ಮೋದಿ ಇಂದು ಟ್ವಿಟರ್​​ನಲ್ಲಿ ತಮ್ಮ ಆರೋಗ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಯೋಗಾಭ್ಯಾಸದ ವಿಡಿಯೋವನ್ನು ಪೋಸ್ಟ್ ಮಾಡಿ, ನಿನ್ನೆಯ ಮನ್​ ಕೀ ಬಾತ್​ನಲ್ಲಿ ಕೆಲವರು ನನ್ನ ಫಿಟ್​ನೆಸ್​ ಬಗ್ಗೆ ಕೇಳಿದ್ದರು. ಅದರಲ್ಲೂ ಕರೊನಾ ವೈರಸ್​ ದಾಳಿಯಿಟ್ಟಿರುವ ಈ ದಿನಗಳಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಪ್ರಶ್ನಿಸಿದ್ದರು. ಹಾಗಾಗಿ ನಾನು ಈ ಯೋಗದ ವಿಡಿಯೋಗಳನ್ನು ಅಪ್ಲೋಡ್​ ಮಾಡುತ್ತಿದ್ದೇನೆ. ನೀವೂ ಕೂಡ ಇನ್ನು ಮುಂದೆ ಪ್ರತಿದಿನ ಯೋಗಾಭ್ಯಾಸ ಮಾಡಿ, ಆರೋಗ್ಯವಂತರಾಗಿರುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

    ಯೋಗಾಸನಗಳ ವಿಡಿಯೋಗಳು ಬೇರೆಬೇರೆ ಭಾಷೆಗಳಲ್ಲಿ ಲಭ್ಯವಿದೆ, ನೋಡಿ ಎಂದು ಹೇಳಿರುವ ಪ್ರಧಾನಿ ಮೋದಿ, ನಾನು ಫಿಟ್​ನೆಸ್​ ತಜ್ಞನಾಗಲೀ, ವೈದ್ಯಕೀಯ ವಿಚಾರಗಳನ್ನು ತುಂಬ ಅರಿತುಕೊಂಡವನಾಗಲೀ ಅಲ್ಲ. ಅದೆಷ್ಟೋ ವರ್ಷಗಳಿಂದ ಯೋಗಾಭ್ಯಾಸ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಅದರಿಂದ ನನಗೆ ತುಂಬ ಉಪಯೋಗವಾಗಿದೆ. ನಿಮ್ಮಲ್ಲಿ ಅನೇಕರು ಫಿಟ್​ನೆಸ್​ ಕಾಪಾಡಿಕೊಳ್ಳಲು ಯೋಗ ಬಿಟ್ಟು ಬೇರೆ ಏನಾದರೂ ಮಾರ್ಗ ಕಂಡುಕೊಂಡಿರಬಹುದು. ಈ ಸಮಯದಲ್ಲಿ ನೀವದನ್ನು ಉಳಿದವರೊಂದಿಗೆ ಹಂಚಿಕೊಳ್ಳಿ ಎಂದು ಪ್ರಧಾನಿ ಸಂದೇಶ ನೀಡಿದ್ದಾರೆ. 

    ನಿನ್ನೆಯ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೊನಾ ವೈರಸ್​ ನಿಯಂತ್ರಣದ ವಿಚಾರಗಳನ್ನು ಮಾತನಾಡಿದ್ದರು. ಲಾಕ್​ಡೌನ್​ನಂತಹ ಕಠಿಣ ಕ್ರಮ ತೆಗೆದುಕೊಂಡಿದ್ದರಿಂದ ನಿಮಗೆಲ್ಲರಿಗೂ ಕಷ್ಟವಾಗಿದೆ ಎಂದು ನನಗೆ ಗೊತ್ತು. ಅದರಲ್ಲೂ ಬಡ ಜನರಿಗೆ ತುಂಬ ತೊಂದರೆಯಾಗಿದೆ. ಅನೇಕರಿಗೆ ನನ್ನ ಮೇಲೆ ಸಿಟ್ಟು ಬಂದಿದೆ. ಆದರೆ ಕರೊನಾ ವಿರುದ್ಧದ ಹೋರಾಟಕ್ಕೆ ಲಾಕ್​ಡೌನ್​ನಂತಹ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಹೇಳಿದ್ದ ಅವರು, ದೇಶದ ಜನರಲ್ಲಿ ಕ್ಷಮೆ ಕೂಡ ಯಾಚಿಸಿದ್ದರು.
    ಹಾಗೇ ಲಾಕ್​ಡೌನ್​ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಗೆ ಬರದೆ, ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಒಳ್ಳೆಯ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts