More

    100 ರೂಪಾಯಿ ಆಸುಪಾಸಿನಲ್ಲಿ ಪೆಟ್ರೋಲ್ ದರ

    ರಾಜಸ್ಥಾನದಲ್ಲಿ ಶತಕದ ಗಡಿ ದಾಟಿದ ಪೆಟ್ರೋಲ್ ಬೆಲೆ | ಮಧ್ಯಪ್ರದೇಶದಲ್ಲಿ ನೂರಕ್ಕೆ 10 ಪೈಸೆ ಕಮ್ಮಿ

    ನವದೆಹಲಿ: ಇಂಧನ ದರ ರಾಕೆಟ್ ವೇಗದಲ್ಲಿ ಏರತೊಡಗಿದ್ದು, ದೇಶದ ಬಹುತೇಕ ನಗರಗಳಲ್ಲಿ -ಠಿ; 100ರ ಆಸುಪಾಸಿಗೆ ತಲುಪಿದೆ. ಬುಧವಾರ ಪೆಟ್ರೋಲ್, ಡೀಸೆಲ್ ದರ ಲೀಟರಿಗೆ ಸರಾಸರಿ ತಲಾ 25 ಪೈಸೆ ಹೆಚ್ಚಳವಾಗಿದೆ. ಪ್ರೀಮಿಯಂ ಪೆಟ್ರೋಲ್ ದರ ಕೆಲವು ನಗರಗಳಲ್ಲಿ ಕಳೆದ ವಾರವೇ -ಠಿ; 100ರ ಗಡಿದಾಟಿದೆ.

    ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ 89.54 ರೂ.ಮತ್ತು. ಮುಂಬೈನಲ್ಲಿ -ಠಿ;96 ಆಗಿದ್ದರೆ, ಬೆಂಗಳೂರಿನಲ್ಲಿ -ಠಿ;92.54ಕ್ಕೆ ಮುಟ್ಟಿದೆ. ಕೋಲ್ಕತ, ಚೆನ್ನೈ, ಭುವನೇಶ್ವರ, ಹೈದರಾಬಾದ್, ಜೈಪುರ, ಪಟನಾ, ತಿರುವನಂತಪುರಗಳಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ -ಠಿ; 90ರ ಗಡಿ ದಾಟಿದೆ. ಇದೇ ಮೊದಲ ಬಾರಿಗೆ ರಾಜಸ್ಥಾನದಲ್ಲಿ ಪೆಟ್ರೋಲ್ ದರ ಲೀಟರಿಗೆ 100 ರೂ. ಗಡಿ ದಾಟಿದೆ. ಇಲ್ಲಿನ ಶ್ರೀಗಂಗಾನಗರ ಪಟ್ಟಣದಲ್ಲಿ ಪೆಟ್ರೋಲ್ ಬೆಲೆ 100.13 ರೂ. ಆಗಿದೆ. ಮಧ್ಯಪ್ರದೇಶದ ಅನುಪು್ಪರದಲ್ಲಿ ಪೆಟ್ರೋಲ್ ದರ ಲೀಟರಿಗೆ 99.90 ರೂ. ಆಗಿದೆ. ಸ್ಥಳೀಯ ತೆರಿಗೆ, ವ್ಯಾಟ್ ಮತ್ತು ಇತರೆ ಶುಲ್ಕ ಸೇರಿ ದರ ಈ ಮಟ್ಟಕ್ಕೆ ಏರಿಕೆಯಾಗಿದೆ. ಡೀಸೆಲ್ ಬೆಲೆ ದೆಹಲಿಯಲ್ಲಿ 79.95 ರೂ., ಮುಂಬೈನಲ್ಲಿ 86.98 ರೂ., ಮಧ್ಯಪ್ರದೇಶದ ಅನುಪ್ಪುರದಲ್ಲಿ 90.35 ರೂ. ಆಗಿದೆ.

    ಬಿಟ್​ಕಾಯಿನ್ ಮೌಲ್ಯ 51,000 ಡಾಲರ್

    ಜಗತ್ತಿನಾದ್ಯಂತ ಹೆಚ್ಚು ಪ್ರಚಲಿತದಲ್ಲಿರುವ ಕ್ರಿಪ್ಟೋಕರೆನ್ಸಿ ಬಿಟ್​ಕಾಯಿನ್​ನ ದರ ಬುಧವಾರ ಮೊದಲ ಬಾರಿಗೆ 51,000 ಡಾಲರ್ ದಾಟಿದೆ. ಟೆಸ್ಲಾ ಕಂಪನಿ ಇತ್ತೀಚೆಗೆ 1.5 ಶತಕೋಟಿ ಡಾಲರ್ ಮೌಲ್ಯದ ಬಿಟ್​ಕಾಯಿನ್ ಖರೀದಿಸಿದ್ದು ಮತ್ತು ಮೈಕ್ರೋಸ್ಟ್ರಾಟಜಿ ಕಂಪನಿ 600 ದಶಲಕ್ಷ ಡಾಲರ್ ಮೌಲ್ಯದ ಬಿಟ್​ಕಾಯಿನ್ ಖರೀದಿಗೆ ಪರಿವರ್ತಿಸಬಹುದಾದ ಬಾಂಡ್​ಗಳನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ. ಈ ಬೆಳವಣಿಗೆಯ ಕಾರಣ ಬಿಟ್​ಕಾಯಿನ್ ಮೌಲ್ಯ ಹೆಚ್ಚಾಗಿದ್ದು, ಬುಧವಾರ 51,431 ಡಾಲರ್ (37,45,380 ರೂ.) ಆಗಿದೆ.

    ಸೆನ್ಸೆಕ್ಸ್ 400 ಅಂಶ ಕುಸಿತ

    ಭಾರತೀಯ ಷೇರುಪೇಟೆ ಸೂಚ್ಯಂಕಗಳು ಬುಧವಾರ ಕುಸಿದಿವೆ. ಬಿಎಸ್​ಇ ಸೆನ್ಸೆಕ್ಸ್ 400.34 ಅಂಶ, ಎನ್​ಎಸ್​ಇ ನಿಫ್ಟಿ50 ಸೂಚ್ಯಂಕ 104.55 ಅಂಶ ಕುಸಿದಿವೆ. ಜಾಗತಿಕ ಮಾರುಕಟ್ಟೆ ವಿದ್ಯಮಾನಗಳಿಗೆ ಅನುಗುಣವಾಗಿ ಎಚ್​ಡಿಎಫ್​ಸಿ ಎರಡು ಕಂಪನಿಯ ಷೇರುಗಳು, ಕೊಟಾಕ್ ಬ್ಯಾಂಕ್, ಟಿಸಿಎಸ್ ಕಂಪನಿ ಷೇರುಗಳ ಮೌಲ್ಯ ಕುಸಿದುದೇ ಇದಕ್ಕೆ ಕಾರಣ. ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇಕಡ 0.77 ಕುಸಿದು 51,703.83ರಲ್ಲೂ, ನಿಫ್ಟಿ ಶೇಕಡ 0.68 ಅಂಶ ಕುಸಿದು 15,208.90ಯಲ್ಲೂ ದಿನದ ವಹಿವಾಟು ಮುಗಿಸಿವೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ನೆಸ್ಲೆ ಇಂಡಿಯಾ ಷೇರು ಗರಿಷ್ಠ ಶೇಕಡ 3 ಕುಸಿದರೆ, ಬಜಾಜ್ ಫಿನ್​ಸರ್ವ್, ಏಷ್ಯನ್ ಪೇಂಟ್ಸ್, ಇಂಡಸ್​ಇಂಡ್ ಬ್ಯಾಂಕ್, ಮಾರುತಿ, ಎಚ್​ಡಿಎಫ್​ಸಿ, ಎಚ್​ಡಿಎಫ್​ಸಿ ಬ್ಯಾಂಕ್, ಡಾ.ರೆಡ್ಡೀಸ್ ಕಂಪನಿ ಷೇರುಗಳು ಕೂಡ ನಷ್ಟ ಅನುಭವಿಸಿವೆ. ಇನ್ನೊಂದೆಡೆ, ಎಸ್​ಬಿಐ, ಪವರ್​ಗ್ರಿಡ್, ಎನ್​ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಷೇರುಗಳು ಲಾಭ ಗಳಿಸಿವೆ.

    8 ತಿಂಗಳ ಕನಿಷ್ಠಕ್ಕೆ ಚಿನ್ನದ ಬೆಲೆ

    ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿದೆ. ಕಳೆದ ಆಗಸ್ಟ್​​ನಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ಬೆಲೆ ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ಬುಧವಾರ ತಲುಪಿದೆ. ಸತತ ಐದನೇ ದಿನವೂ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಕುಸಿದಿದ್ದು, 10 ಗ್ರಾಂಗೆ 717 ರೂಪಾಯಿ ಕುಸಿತ ಕಂಡಿದ್ದು, 46,102 ರೂಪಾಯಿ ಆಗಿದೆ. ಬೆಳ್ಳಿದರ ಒಂದು ಕಿಲೋಗೆ 1,274 ರೂಪಾಯಿ ಇಳಿದು 68,239 ರೂಪಾಯಿಗೆ ತಲುಪಿದೆ. ಇದೇ ವೇಳೆ ಮಲ್ಟಿಕಮೋಡಿಟಿ ಎಕ್ಸ್​ಚೇಂಜ್ (ಎಂಸಿಎಕ್ಸ್)ನಲ್ಲಿ ಚಿನ್ನದ ಏಪ್ರಿಲ್ ಫ್ಯೂಚರ್ಸ್ ವಹಿವಾಟು 10 ಗ್ರಾಂಗೆ 147 ರೂಪಾಯಿ (ಶೇ.0.31) ಕಡಿಮೆಯಾಗಿದ್ದು 46,752 ರೂಪಾಯಿಯಲ್ಲಿ ವಹಿವಾಟು ನಡೆದಿತ್ತು. ಬೆಳ್ಳಿಗೆ ಸಂಬಂಧಿಸಿದ ಮಾರ್ಚ್ ತಿಂಗಳ ಫ್ಯೂಚರ್ಸ್ ವಹಿವಾಟಿನಲ್ಲಿ ಬೆಳ್ಳಿ ಒಂದು ಕಿಲೋಗೆ 84 ರೂಪಾಯಿ ಮೇಲೇರಿದ್ದು -ಠಿ;69,456 ರೂಪಾಯಿ ತಲುಪಿತ್ತು. ಅಮೆರಿಕದ ಟ್ರೆಷರಿ ಲಾಭಾಂಶ ಏರುತ್ತಿರುವ ಕಾರಣ ಚಿನ್ನದ ಬೆಲೆ ಜಾಗತಿಕ ಮಟ್ಟದಲ್ಲಿ ಎರಡುವಾರಗಳಿಂದ ಕುಸಿಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts