More

    ಕೆಎಲ್​ಇ ಸುಚಿರಾಯು ಆಸ್ಪತ್ರೆ ವೈದ್ಯರ ಸಾಧನೆ

    ಹುಬ್ಬಳ್ಳಿ: ಹೊಟ್ಟೆ ಉಬ್ಬುವಿಕೆ ಹಾಗೂ ನೋವಿನಿಂದ ಬಳಲುತ್ತಿದ್ದ 55 ವರ್ಷದ ಮಹಿಳೆಯೊಬ್ಬರ ದೇಹದಲ್ಲಿ 9 ಕೆಜಿ ತೂಕದ ಗಡ್ಡೆಯನ್ನು, ನಗರದ ಕೆಎಲ್​ಇ ಸುಚಿರಾಯು ಆಸ್ಪತ್ರೆಯ ವೈದ್ಯರು ಶಸ್ತ್ರ-ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

    ತಜ್ಞವೈದ್ಯ ಡಾ. ಜಯಪ್ರಭು ಉತ್ತೂರ ಅವರು ಸತತ ಮೂರು ಗಂಟೆಗಳ ಕಾಲ ಶಸ್ತ್ರ-ಚಿಕಿತ್ಸೆ ನಡೆಸಿದರು. 38 ಸೆಂ.ಮೀ. ಉದ್ದ, 26 ಸೆಂ.ಮೀ. ಅಗಲವಿರುವ 9 ಕೆಜಿ ತೂಕದ ಮಾಂಸದ ಗಡ್ಡೆಯನ್ನು ಹೂಟ್ಟೆಯಿಂದ ಹೊರ ತೆಗೆದರು.

    ಮಹಿಳೆಯ ಹೊಟ್ಟೆಯಲ್ಲಿ ದುರ್ವಂಸ ಬೆಳೆದು ಗಡ್ಡೆಯಾಗಿ ರೂಪ ಪಡೆದು ಬೆಳೆಯುತ್ತಲೇ ಇತ್ತು. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಸೈಟಸ್ ಇನವರ್ಸಸ್ ಟೂಟ್ಯಾಲಿಸ್’ ಸಮಸ್ಯೆ ಎನ್ನಲಾಗುತ್ತದೆ. ಮಹಿಳೆಗೆ ಈ ತೊಂದರೆ ಕಾಡಿರುವುದು ಸ್ಕ್ಯಾನಿಂಗ್​ನಲ್ಲಿ ಕಂಡುಬಂದಿತ್ತು. ಇದು ವಿರಳಾತಿವಿರಳ ಪ್ರಕರಣ ಎಂದು ಡಾ. ಜಯಪ್ರಭು ಉತ್ತೂರ ತಿಳಿಸಿದ್ದಾರೆ.

    ಅರವಳಿಕೆ ತಜ್ಞರಾದ ಡಾ. ತೇಜಸ್ ಕುಲಕರ್ಣಿ, ಡಾ. ಸಾಗರ ಕೂಳ್ಳಿ ಹಾಗೂ ವೈದ್ಯಕೀಯ ತಂಡ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿತ್ತು ಎಂದು ವೈದ್ಯಕೀಯ ಅಧೀಕ್ಷಕಿ ಡಾ. ವಿಶಾಖಾ ಮಧುರಕರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts