More

    ಪ್ರವೀಣ್​ ನೆಟ್ಟಾರು ಹತ್ಯೆ: ಮತ್ತಿಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ 10 ಲಕ್ಷ ನಗದು ಬಹುಮಾನ ಘೋಷಿಸಿದ NIA

    ದಕ್ಷಿಣ ಕನ್ನಡ: ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಘೋಷಿಸಿದೆ.

    ಆರೋಪಿಗಳಾದ ಕೊಡಾಜೆ ಮೊಹಮ್ಮದ್ ಷರೀಫ್(53), ಮಸೂದ್ ಕೆ‌.ಎ.(40) ಅವರ ಸುಳಿವು ಕೊಟ್ಟವರಿಗೆ ಒಟ್ಟು 10 ಲಕ್ಷ ರೂ. ಬಹುಮಾನ ಘೋಷಿಸಿಲಾಗಿದೆ. ಒಬ್ಬ ಆರೋಪಿಯನ್ನ ಪತ್ತೆ ಮಾಡಿದರೂ 5 ಲಕ್ಷ ರೂ. ಬಹುಮಾನವಾಗಿ ಸಿಗಲಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಡಾಜೆಯ ಕೊಡಾಜೆ ಅದ್ದ ಎಂಬುವರ ಪುತ್ರ ಮೊಹಮ್ಮದ್ ಷರೀಫ್. ನೆಕ್ಕಿಲಾಡಿಯ ಅಗ್ನಾಡಿ ಹೌಸ್​ನ ಅಬೂಬಕರ್ ಎಂಬಾತನ ಪುತ್ರ ಮಸೂದ್. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಬೆಂಗಳೂರಿನ ದೊಮ್ಮಲೂರು ಬಳಿ ಇರೋ ಎನ್​ಐಎ ಎಸ್​ಪಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

    ಆರೋಪಿಗಳಿಬ್ಬರ ಮಾಹಿತಿ ತಿಳಿದವರು ದೂ: 080-29510900, 8904241100, ಇಮೇಲ್​ [email protected], ಅಂಚೆ ವಿಳಾಸ: ಪೊಲೀಸ್​ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್​ಐಎ), 8ನೇ ಮಹಡಿ ಸರ್​ ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಲೂರು, ಬೆಂಗಳೂರು-560071ಗೆ ಮಾಹಿತಿ ನೀಡಬಹುದು.

    ಕಳೆದ ಎರಡೂವರೆ ತಿಂಗಳ ಹಿಂದೆಯೂ ನಾಲ್ವರು ಪಿಎಫ್​ಐ ಸದಸ್ಯರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಘೋಷಿಸಿತ್ತು. ಬೆಳ್ಳಾರೆ ಬೂಡು ನಿವಾಸಿ ಮೊಹ್ಮದ್​ ಮುಸ್ತಫ ಎಸ್​. ಅಲಿಯಾಸ್​ ಮುಸ್ತಫ ಪೈಚಾರು ಹಾಗೂ ಮಡಿಕೇರಿ ಗದ್ದಿಗೆ ಮಸೀದಿ ಹಿಂಭಾಗದ ನಿವಾಸಿ ಎಂ.ಎಚ್​. ತುಫೈಲ್​ನನ್ನು ಹುಡುಕಿಕೊಟ್ಟವರಿಗೆ ತಲಾ 5 ಲಕ್ಷ ರೂ., ಸುಳ್ಯ ನಗರ ಕಲ್ಲುಮುಟ್ಟು ನಿವಾಸಿ ಉಮ್ಮರ್​ ಫಾರೂಕ್​ ಎಂ.ಆರ್​. ಅಲಿಯಾಸ್​ ಉಮ್ಮರ್​, ಬೆಳ್ಳಾರೆ ನಿವಾಸಿ ಅಬೂಬಕ್ಕರ್​ ಸಿದ್ದೀಕ್​ ಅಲಿಯಾಸ್​ ಪೈಂಟರ್​ ಸಿದ್ದೀಕ್​ ಅಲಿಯಾಸ್​ ಗುಜರಿ ಸಿದ್ದೀಕ್​ನನ್ನು ಹುಡುಕಿಕೊಟ್ಟವರಿಗೆ ತಲಾ 2 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಇದೀಗ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಲಾಗಿದೆ.

    ಬಾಳಿ ಬದುಕಬೇಕಿದ್ದ ತುಮಕೂರಿನ ಮೂವರು ಸಹೋದರಿಯರು ಒಂಟಿ ಮನೆಯಲ್ಲಿ ದುರಂತ ಅಂತ್ಯ! ಇವರ ಕಣ್ಣೀರ ಕಥೆ ಹೇಳತೀರದು…

    ಕಾಂಗ್ರೆಸ್​ನ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಕಳ್ಳರ ಕೈ ಚಳಕ! ವೃದ್ಧೆಯ ಸರ ಕಳವು ಮಾಡಿದ ಖದೀಮರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts