More

    ಭೂಮಿ ಉಳಿಯಬೇಕಾದರೆ ಸಹಜ ಕೃಷಿ ಅನಿವಾರ್ಯ

    ಚಾಮರಾಜನಗರ: ರೈತರು ಮತ್ತು ಭೂಮಿ ಉಳಿಯಬೇಕಾದರೆ ಎಲ್ಲರೂ ಅನಿವಾರ್ಯವಾಗಿ ಸಹಜ ಕೃಷಿ ಮಾಡಬೇಕಾಗುತ್ತದೆ ಎಂದು ಸಹಜ ಬೇಸಾಯ ತಜ್ಞ ಡಾಕ್ಟರ್ ಮಂಜುನಾಥ್ ಹೇಳಿದರು.


    ಗುಂಡ್ಲುಪೇಟೆ ತಾಲೂಕಿನ ಕಮರಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.


    ರೈತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಬದುಕಲು ಸಾಧ್ಯವಾಗುತ್ತದೆ. ತಮ್ಮ ಉಳಿವು ಹಾಗೂ ಸರ್ಕಾರದಿಂದ ದೊರಕಬೇಕಾದ ಎಲ್ಲ ಸವಲತ್ತುಗಳನ್ನು ಪಡೆಯಲು ಇಂದು ರೈತರು ಸಂಘಟನೆಯ ಜತೆಗೆ ಸಹಜ ಕೃಷಿ ಬೇಸಾಯ ಮಾಡಬೇಕಾಗುತ್ತದೆ ಎಂದು ತಿಳಿಸಿದರು.


    ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಸರ್ಕಾರಗಳು ರೈತರನ್ನು ಗುಲಾಮರನ್ನಾಗಿಸುವ ಕಾಯ್ದೆಗಳನ್ನು ಜಾರಿಗೆ ತರಲು ಹುನ್ನಾರ ನಡೆಸುತ್ತಿವೆ. ಹಾಗಾಗಿ, ಕೂಡಲೇ ರೈತರು ಎಚ್ಚತ್ತುಕೊಳ್ಳಬೇಕಾಗಿದೆ. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಾ ಬೇಸಾಯ ತಜ್ಞರಾದ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಕೃಷಿ ಮಾಡಬೇಕು. ಜತೆಗೆ ನಮ್ಮ ಉತ್ಪನ್ನಗಳ ಮಾರಾಟಕ್ಕೆ ನಮ್ಮದೇ ಆದ ಮಾರುಕಟ್ಟೆ ನಿರ್ಮಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಸಂಘಟನೆಯನ್ನು ಬಲಿಷ್ಟಗೊಳಿಸಲಾಗುತ್ತಿದೆ ಎಂದು ತಿಳಿಸಿದರು.


    ಸಭೆಯಲ್ಲಿ ವೀರಪುರ ನಾಗಪ್ಪ, ಬೆಟ್ಟದಮಾದಳ್ಳಿ ಷಣ್ಮುಖಸ್ವಾಮಿ, ಅಗತಗೌಡನಹಳ್ಳಿ ಜಗದೀಶ್, ಉತ್ತುಂಗೇರಿಹುಂಡಿ ಮಹೇಶ್, ಮಂಚಳ್ಳಿ ಮಣಿ, ವೀರನಪುರದ ವಸಂತ್, ಕಮರಹಳ್ಳಿ ಗ್ರಾಮಸ್ಥರು ಹಾಗೂ ಮುಖಂಡರುಗಳು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts