More

    ರಿಸರ್ಚ್, ಮೆಥಡಾಲೋಜಿ ರಾಷ್ಟ್ರೀಯ ಸೆಮಿನಾರ್ ನಾಳೆ

    ಹುಬ್ಬಳ್ಳಿ: ಆಯುರ್ವೇದ ಮಹಾವಿದ್ಯಾಲಯ ಹಾಗೂ ಬಿಎನ್‌ಆರ್‌ಎಸ್ ಸಹಯೋಗದೊಂದಿಗೆ ಜು. 8ರಂದು ಬೆಳಗ್ಗೆ 9ಕ್ಕೆ ಗೋಕುಲ ರಸ್ತೆಯ ಕಾಟನ್ ಕೌಂಟಿ ಕ್ಲಬ್‌ನಲ್ಲಿ ರಾಷ್ಟ್ರೀಯ ಮಟ್ಟದ ರಿಸರ್ಚ್ ಹಾಗೂ ಮೆಥಡಾಲೋಜಿ ಸೆಮಿನಾರ್ ಏರ್ಪಡಿಸಲಾಗಿದೆ ಎಂದು ಆಯುರ್ವೇದ ಸೇವಾ ಸಮಿತಿ ಸಭಾಪತಿ ಗೋವಿಂದ ಜೋಶಿ ಹೇಳಿದರು.


    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ, ಪದ್ಮಶ್ರೀ ಡಾ.ಎಂ.ಎಂ. ಜೋಶಿ ಅವರ ಅಧ್ಯಕ್ಷತೆಯಲ್ಲಿ ಸೆಮಿನಾರ್ ಉದ್ಘಾಟನೆಯಾಗಲಿದೆ.

    ಖ್ಯಾತ ನ್ಯೂರೋ ಸರ್ಜನ್ ಡಾ. ಸುರೇಶ ದುಗಾಣಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.


    ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಆಯೋಜಿಸಿರುವ ಸೆಮಿನಾರ್‌ನಲ್ಲಿ ಆಯುರ್ವೇದ ಸೇವಾ ಸಮಿತಿ ಕಾರ್ಯದರ್ಶಿ ಸಂಜೀವ ಜೋಶಿ, ಎಸ್.ಆರ್. ಮಾಮಲೇದೇಶಪಾಂಡೆ, ಪ್ರಾಚಾರ್ಯ, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಯುಷ್ ವಿಭಾಗದ ಡೀನ್ ಡಾ. ಪ್ರಶಾಂತ ಎ.ಎಸ್., ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯ ಡಾ.ಜೆ.ಆರ್. ಜೋಶಿ ಉಪಸ್ಥಿತರಿರುವರು ಎಂದರು.


    ರಾಜ್ಯವಲ್ಲದೆ ಗೋವಾ, ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ 150ಕ್ಕೂ ಹೆಚ್ಚು ವೈದ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸುವರು. ಡಾ. ಪ್ರಶಾಂತ ಜಾಡರ್ ಇಂಪಾರ್ಟನ್ಸ್ ಆಫ್ ಜರ್ನಲ್ ಪಬ್ಲಿಕೇಷನ್ ಇನ್ ಪಿಜಿ ಸ್ಟಡೀಸ್ ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು. ಡಾ. ಶ್ರೀವತ್ಸ, ಡಾ. ಸಂದೇಶಕುಮಾರ ಶೆಟ್ಟಿ, ಡಾ. ಖಾಲಿದ್‌ಬಿ.ಎಂ., ಉತ್ತರ ಪ್ರದೇಶದ ಫರೂಕಾಬಾದಿನ ಡಾ. ರವೀಂದ್ರ ವರ್ಮಾ ಅವರು ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲುವರು ಎಂದರು.


    ಸಂಜೆ 4 ಗಂಟೆಗೆ ಡಾ.ಎಂ.ಎಂ. ಜೋಶಿ ನೇತ್ರ ಸಂಶೋಧನಾ ಕೇಂದ್ರದ ಡಾ. ಕೃಷ್ಣಪ್ರಸಾದ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. 2022-23ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಪಡೆದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶಿಷ್ಯೋಪನೀಯ ಕಾರ್ಯಕ್ರಮ ನೆರವೇರಿಸಲಾಗುವುದು. ಶಾಸಕ ಮಹೇಶ ಟೆಂಗಿನಕಾಯಿ ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದರು.


    ಪ್ರಾಚಾರ್ಯ ಡಾ. ಎ.ಎಸ್. ಪ್ರಶಾಂತ ಮಾತನಾಡಿ, ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಸಂಶೋಧನೆಗಳನ್ನು ಮುಂದುವರಿಸಿದ್ದಾರೆ. ಹಳೇ ಪದ್ಧತಿಯಲ್ಲಿ ಆಧುನಿಕತೆ ಜೋಡಿಸಿ ಸಮಾಜಕ್ಕೆ ಪರಿಚಯಿಸಲು ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಬೋಧಕ ವರ್ಗವೂ ಔಷಧ, ಚಿಕಿತ್ಸೆ, ಶಸ್ತ್ರ ಚಿಕಿತ್ಸೆಯಲ್ಲಿ ಹೆಸರು ಮಾಡುತ್ತಿದೆ. ಕೊಟೇಕಲ್ ಆರ್ಯುವೇದಿಕ್‌ಶಾಲಾ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಸಂಶೋಧನೆಗೆ ಇನ್ನಷ್ಟು ಮೆರುಗು ಬರಲಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಡಾ. ಪ್ರಶಾಂತ ಎ.ಎಸ್., ಡಾ. ಮಹೇಶ ಸಾಲಿಮಠ, ಡಾ.ಜೆ.ಆರ್. ಜೋಶಿ, ಡಾ. ಎಸ್.ಆರ್. ಮಾಮಲೇದೇಶಪಾಂಡೆ ಇತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts