More

    ಕೆಸರು ಗದ್ದೆಯಲ್ಲಿ ಮಿಂದೆದ್ದ ದೇವಳಮಕ್ಕಿಯ ಮಕ್ಕಳು, ಮಹಿಳೆಯರು, ವೃದ್ದರು

    ಕಾರವಾರ: ತಾಲೂಕಿನ ದೇವಳಮಕ್ಕಿಯಲ್ಲಿ ಭಾನುವಾರ ಸ್ಥಳೀಯ ಕ್ರೀಡಾಕೂಟ ಕಮಿಟಿಯಿಂದ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟ ಗಮನ ಸೆಳೆಯಿತು.
    ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಎಲ್ಲರೂ ಕೆಂಪು ಮಣ್ಣಿನಿಂದ ರಾಡಿಯಾದ ಕೆಸರು ಗದ್ದೆಯಲ್ಲಿ ಬಿದ್ದು, ಹೊರಳಾಡಿದರು. ಸ್ಪರ್ಧಾ ಮನೋಭಾವದಿಂದ ಆಡಿ ಮೆಡಲ್ ಗೆದ್ದರು, ಸೋತವರೂ ಬೇಸರಗೊಳ್ಳದೇ ಗದ್ದೆಯಲ್ಲಿ ಬಿದ್ದು ಮತ್ತಷ್ಟು ಕುಣಿದಾಡಿ ಖುಷಿಪಟ್ಟರು.Rural-Sports.

    ಪುರುಷರು, ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ವಾಲಿಬಾಲ್ ಮುಂತಾದ ಗುಂಪು ಕ್ರೀಡೆ ಹಾಗೂ ವೈಯಕ್ತಿಕ ಪಂದ್ಯಗಳನ್ನೂ ಆಯೋಜಿಸಲಾಗಿತ್ತು. ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವನಶ್ರೀ ಕುಲಕರ್ಣಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

    ಗ್ರಾಪಂ ಸದಸ್ಯ ಸಂತೋಷ ಗೌಡ, ಗ್ರಾಮಸ್ಥರಾದ ಗುರುದಾಸ್ ಫಾಯ್ದೆ, ದೀಪಕ ಹಳದೀಪುರ, ಸುನೀಲ ಶೇಟ್, ಕೃಷ್ಣಾನಂದ ಕೋಳಂಬಕರ,ಮರಿ ಗೌಡ, ನಾಗರಾಜ್ ನಾಯ್ಕ,ಗಣೇಶ ಪೋಕಳೆ ಮತ್ತಿತರು ಇದ್ದರು.

    ಇದನ್ನೂ ಓದಿನುಣುಚಿಕೊಂಡ ಅಧಿಕಾರಿಗಳು, ಗುತ್ತಿಗೆದಾರ-ಅಪಘಾತಕ್ಕೊಳಗಾದ ಹೆಸ್ಕಾಂ ಹೊರಗುತ್ತಿಗೆ ನೌಕರನ ಗೋಳು
    ಕ್ರೀಡಾಕೂಟದ ಅಂಗವಾಗಿ ನಾಗರಾ ನಾಯ್ಕ ಅವರು ಪುರಾತನ ಶೈಲಿಯಲ್ಲಿ ಚಪ್ಪರ ಹಾಕಿದ್ದರು. ಅದರಲ್ಲಿ ನೇಗಿಲು, ಬೆತ್ತದ ಬುಟ್ಟಿಗಳು ಮುಂತಾದ ಪುರಾತನ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸಾಂಪ್ರದಾಯಿಕ ಶೈಲಿಯ ಊಟದ ವ್ಯವಸ್ಥೆಯೂ ಇತ್ತು. ಒಟ್ಟಿನಲ್ಲಿ ಕ್ರೀಡಾಕೂಟ ಹಳ್ಳಿಯ ಜನ ಪಟ್ಟಣದ ಕನಸು ಕಾಣುವ ಹೊತ್ತಿನಲ್ಲಿ ಗ್ರಾಮೀಣ ಸೊಗಡು ಬಿಂಬಿಸುವಲ್ಲಿ ಯಶಸ್ವಿಯಾಯಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts