More

    ಮುದ್ದೇಬಿಹಾಳ ಹುಡ್ಕೋದ ಮೂರು ಕ್ರಾಸ್ ಸೀಲ್‌ಡೌನ್

    ಮುದ್ದೇಬಿಹಾಳ: ಪಟ್ಟಣದ ಹುಡ್ಕೋದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆ ಹುಡ್ಕೋದ ಮೂರು ಕ್ರಾಸ್‌ಗಳ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಲಾಗಿದೆ.

    ಏತನ್ಮಧ್ಯೆ ಆರೋಗ್ಯ ಇಲಾಖೆಯಿಂದ ಸೀಲ್‌ಡೌನ್ ಪ್ರದೇಶದಲ್ಲಿ ಕೋವಿಡ್-19 ಸಮೀಕ್ಷೆ ಕಾರ್ಯವನ್ನು ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಸ್ಕ್ರೀನಿಂಗ್ ಮಾಡಲಾಯಿತು. ಅಲ್ಲದೆ ಕೋವಿಡ್ 19 ಕುರಿತು ಜನರಿಗೆ ಮಾಹಿತಿ ನೀಡಲಾಯಿತು. ಪುರಸಭೆಯಿಂದ ಹೈಪೋಕ್ಲೋರಾಯಿಡ್ ರಾಸಾಯನಿಕ ದ್ರಾವಣವನ್ನು ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡುವ ಮೂಲಕ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಯಿತು.

    ತಹಸೀಲ್ದಾರ್ ಜಿ.ಎಸ್. ಮಳಗಿ, ಡಾ. ಸತೀಶ ತಿವಾರಿ, ಸಿಪಿಐ ಆನಂದ ವಾಘಮೋಡೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಸೀಲ್ ಡೌನ್ ಪ್ರದೇಶದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮೀಕ್ಷೆಯಲ್ಲಿ ನಗರ ಕೋವಿಡ್ 19 ತಂಡದ ಮೇಲ್ವಿಚಾರಕ ಎಂ.ಎಸ್. ಗೌಡರ, ಲ್ಯಾಬ್ ಟೆಕ್ನಿಷಿಯನ್ ಈರಣ್ಣ ಚಿನಿವಾರ, ಎಸ್.ಸಿ. ರುದ್ರವಾಡಿ, ವೀರೇಶ ಭಜಂತ್ರಿ, ಎಸ್.ಆರ್. ಸಜ್ಜನ, ಆಶಾ ಕಾರ್ಯಕರ್ತೆಯರಾದ ಸುನಂದ ಕ್ಯಾತಣ್ಣವರ, ಕವಿತಾ ಅರಳದಿನ್ನಿ ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು.

    ಶುರುವಾದ ಆತಂಕ
    ಪಟ್ಟಣದ ಹುಡ್ಕೋದ ಮೂರು ಕ್ರಾಸ್‌ಗಳನ್ನು ಸೀಲ್‌ಡೌನ್ ಮಾಡುತ್ತಿದ್ದಂತೆ ಪಟ್ಟಣದ ಜನತೆಯಲ್ಲಿ ಆತಂಕ ಶುರುವಾಗಿದೆ. ಕರೊನಾ ಪಾಸಿಟಿವ್ ಕೇಸ್ ಬಂದವರು ಪಟ್ಟಣದ ಎರಡ್ಮೂರು ಪ್ರದೇಶಗಳಲ್ಲಿ ಸಂಚರಿಸಿದ್ದರಿಂದ ಅವರ ಸಂಪರ್ಕಕ್ಕೆ ಯಾರ‌್ಯಾರು ಬಂದಿದ್ದಾರೆ ಎಂದು ಪತ್ತೆ ಹಚ್ಚುವುದೇ ತಾಲೂಕಾಡಳಿತಕ್ಕೆ ತಲೆನೋವಾಗಿದೆ. ಏತನ್ಮಧ್ಯೆ ಪಟ್ಟಣದ ಖಾಸಗಿ ಕ್ಲಿನಿಕ್‌ವೊಂದರ ವೈದ್ಯರನ್ನು ಸೇರಿ 10ಕ್ಕೂ ಹೆಚ್ಚು ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಸ್ಪಷ್ಪಪಡಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts