More

    13 ರಂದು ಸ್ವಚ್ಛತಾ ಕಾರ್ಯಕ್ಕೆ ಚಾಲನೆ

    ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಗೆ ಹೊಂದಿಕೊಂಡಿರುವ ಅಂದಾಜು 10 ಎಕರೆ ವಿಸ್ತೀರ್ಣದ ಎರಡು ಕೆರೆಯ ಆವರಣಕ್ಕೆ ಮಂಗಳವಾರ ಪುರಸಭೆ ಅಧಿಕಾರಿಗಳು ಹಾಗೂ ಹಸಿರು ತೋರಣ ಗೆಳೆಯರ ಬಳಗದ ಪದಾಧಿಕಾರಿಗಳು ಭೇಟಿ ನೀಡಿದರು.
    ಮುಖ್ಯಾಧಿಕಾರಿ ಗೋಪಾಲ ಕಾಸೆ ಮಾತನಾಡಿ, ಕೆರೆಯ ಸ್ವಚ್ಛತೆಗೆ ಕ್ರಮೇಣ ಎಲ್ಲ ರೀತಿಯ ಆದ್ಯತೆ ನೀಡುವುದಾಗಿ ತಿಳಿಸಿದರು.
    ಬಳಗದ ಅಧ್ಯಕ್ಷ ಅಶೋಕ ರೇವಡಿ, ಸಂಚಾಲಕ ಎಂ.ಎಸ್. ಗಡೇದ ಮಾತನಾಡಿ, ಕೆರೆಯ ಸುತ್ತಮುತ್ತಲಿನ ವಾತಾವರಣ ಅಧೋಗತಿಗಿಳಿದಿದೆ. ಕೆರೆಯ ಸುತ್ತಲೂ ಹಾಕಿದ್ದ ಕಬ್ಬಿಣದ ತಂತಿಯ ಜಾಲರಿಯ ತಡೆ ಶಿಥಿಲಗೊಂಡಿದೆ. ಫುಟ್‌ಪಾತ್ ಕೂಡ ಅಲ್ಲಲ್ಲಿ ಹಾಳಾಗಿದೆ. ಕೂಡಲೇ ಇದನ್ನು ಪರಿಸರ ಸ್ನೇಹಿಯನ್ನಾಗಿಸಬೇಕು ಎಂದರು.
    ಪುರಸಭೆ ಸದಸ್ಯ ಮಹಿಬೂಬ್ ಗೊಳಸಂಗಿ, ಸಿಬ್ಬಂದಿ ರಮೇಶ ಮಾಡಬಾಳ ಅವರೊಂದಿಗೆ ಚರ್ಚೆ ನಡೆಸಿದರು. ಕೆರೆಗಳ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ನೀಡುವ ಅಭಿವೃದ್ಧಿ ಅನುದಾನ ಸೇರಿದಂತೆ ಪುರಸಭೆಯ ಅನುದಾನವನ್ನೂ ಬಳಸಿಕೊಂಡು ಕೆರೆಯಂಗಳ ಸ್ವಚ್ಛತೆಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
    ಮಾ.13ರಂದು ಪುರಸಭೆ ಸಿಬ್ಬಂದಿ ಜತೆಗೆ ಹಸಿರು ತೋರಣ ಗೆಳೆಯರ ಬಳಗ ಸೇರಿ ಪಟ್ಟಣದ ವಿವಿಧ ಸಂಘ, ಸಂಸ್ಥೆಗಳ ಸಹಯೋಗ ಪಡೆದು ಸ್ವಚ್ಛತೆ ಕೆಲಸ ಮಾಡಲು ನಿರ್ಧರಿಸಲಾಯಿತು. ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಸಿಬ್ಬಂದಿ ಆರ್.ವೈ. ನಾರಾಯಣಿ, ಮಹಾಂತೇಶ ಕಟ್ಟಿಮನಿ, ಹಸಿರು ತೋರಣ ಬಳಗದ ಮಾಜಿ ಅಧ್ಯಕ್ಷ ಕೆ.ಆರ್. ಕಾಮಟೆ, ನಾಗಭೂಷಣ ನಾವದಗಿ, ಉಪಾಧ್ಯಕ್ಷ ಬಿ.ಎಸ್. ಮೇಟಿ, ಕಾರ್ಯದರ್ಶಿ ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಡಾ. ವೀರೇಶ ಇಟಗಿ, ಸುರೇಶ ಕಲಾಲ, ಅಮರೇಶ ಗೂಳಿ, ರವಿ ತಡಸದ, ಬಿ.ಎ. ನಾಡಗೌಡ, ಕಿರಣ ಕಡಿ, ಡಾ.ಚಂದ್ರಶೇಖರ ಶಿವಯೋಗಿಮಠ, ಬಸವರಾಜ ಹುಲಗಣ್ಣಿ, ವೀರೇಶ ಹಂಪನಗೌಡರ, ಮುಷ್ತಾಕ್ ಬಾಗವಾನ, ಆರ್.ಐ. ಬಿರಾದಾರ, ಸಾಥಪ್ಪ ಗುರುಬಟ್ಟಿ ಮತ್ತಿತರರಿದ್ದರು.

    13 ರಂದು ಸ್ವಚ್ಛತಾ ಕಾರ್ಯಕ್ಕೆ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts