More

    ಮೂಡಲಗಿಯ ನಾಲ್ಕು ಕಡೆ ಚೆಕ್‌ಪೋಸ್ಟ್

    ಮೂಡಲಗಿ: ಪಟ್ಟಣದಲ್ಲಿ ಭಾನುವಾರ ಜನರು ಮನೆಯಿಂದ ಹೊರಗೆ ಬರಲಿಲ್ಲ. ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ಎಪಿಎಂಸಿ, ದನದ ಪೇಟೆ, ಕಲ್ಮೇಶ್ವರ ವೃತ್ತ ಬಿಕೋ ಎನ್ನುತ್ತಿದ್ದವು. ತಹಸೀಲ್ದಾರ್ ಕಾರ್ಯಾಲಯ, ಪುರಸಭೆ ಕಾರ್ಯಾಲಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಗುರ್ಲಾಪುರ ಬಸ್ ನಿಲ್ದಾಣ, ಶಿವಾಪುರ ರಸ್ತೆ, ಮಠದ ರಸ್ತೆ, ಎಪಿಎಂಸಿ ರಸ್ತೆಗಳಲ್ಲಿ ನಾಕಾಬಂದಿ ನಿರ್ಮಿಸಿದ್ದರು. ಜನರು ರಸ್ತೆಗಿಳಿಯದೆ ಮಹಾಮಾರಿ ಕರೊನಾ ವೈರಸ್ ನಿರ್ಮೂಲನೆಗೆ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

    ಕೌಜಲಗಿ ವರದಿ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆದ ನೀಡಿದ್ದ ಜನತಾ ಕರ್ಫ್ಯೂಗೆ ಕೌಜಲಗಿಯಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟು ಬಂದ್ ಮಾಡಿದ್ದರು.

    ಪಟ್ಟಣದ ಪ್ರಮುಖ ಬಸವೇಶ್ವರ ಪೇಟೆ, ರವಿವರ್ಮ ಚೌಕ್, ಟಿಪ್ಪು ಸುಲ್ತಾನ ಚೌಕ್, ಕೆವಿಜಿ ಬ್ಯಾಂಕ್ ರಸ್ತೆ, ಅಂಬೇಡ್ಕರ್ ಸರ್ಕಲ್ ರಸ್ತೆಯ ಎಲ್ಲ ಅಂಗಡಿಗಳನ್ನು ವ್ಯಾಪಾರಸ್ಥರು ಬಂದ್ ಮಾಡಿ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು. ವಾಹನ ಸಂಚಾರ ವಿರಳವಾಗಿತ್ತು. ಆಸ್ಪತ್ರೆ, ಔಷಧ ಅಂಗಡಿಗಳು ಮತ್ತು ಪೆಟ್ರೋಲ್ ಬಂಕ್‌ಗಳು ತೆರೆದಿದ್ದರೂ ಅಷ್ಟೊಂದು ಜನದಟ್ಟಣೆ ಕಂಡುಬರಲಿಲ್ಲ.

    ಬೆಟಗೇರಿ ವರದಿ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಗ್ರಾಮದ ಎಲ್ಲೆಡೆ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಎಲ್ಲ ಬೀದಿಗಳು ಬಿಕೋ ಎನ್ನುತ್ತಿದ್ದವು. ಆಸ್ಪತ್ರೆ, ಔಷಧ ಮಳಿಗೆಗಳು ಮಾತ್ರ ಬಾಗಿಲು ತೆರೆದಿದ್ದವು. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಯಾರೂ ಮನೆಯಿಂದ ಹೊರಗೆ ಬರಲಿಲ್ಲ. ಸಂಜೆ 5 ಗಂಟೆಗೆ ಮನೆಯ ಕಿಟಕಿ, ಬಾಲ್ಕನಿಯಿಂದಲೇ ಚಪ್ಪಾಳೆ ತಟ್ಟಿದರು. ಭಾನುವಾರದ ಸಂತೆ ರದ್ದಾಗಿದ್ದರಿಂದ ಜನರು ಸೇರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts