More

    ಪೋಲಿಯೋ ಮುಕ್ತ ಭಾರತ ನಿರ್ಮಿಸಿ

    ಮೊಳಕಾಲ್ಮೂರು: ಪೋಲಿಯೋ ಮುಕ್ತ ಭಾರತದ ನಿರ್ಮಾಣಕ್ಕೆ ಸದಾ ಶ್ರಮಿಸಬೇಕು ಎಂದು ವಿಭಾಗಮಟ್ಟದ ಆರೋಗ್ಯ ನೋಡಲ್ ಅಧಿಕಾರಿ ಡಾ.ಶ್ರೀ ಧರ್ ಹೇಳಿದರು.

    ರಾಷ್ಟ್ರೀಯ ಪಲ್ಸ್ ಪೋಲಿಯೋ ಅಂಗವಾಗಿ ತಾಲೂಕು ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಪೋಲಿಯೋ ಮುಕ್ತ ದೇಶದ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿಟ್ಟ ನಿಲವು ಕೈಗೊಂಡಿದ್ದು, ಕಳೆದ 9 ವರ್ಷಗಳಿಂದ ಒಂದು ಪ್ರಕರಣ ದೃಢಪಟ್ಟಿಲ್ಲ. ಇದಕ್ಕೆ ಸಾರ್ವಜನಿಕ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಕಾರ್ಯ ಕಾರಣ ಎಂದರು.

    ಸದಾ ಜಾಗೃತರಾಗಿ ಕೆಲಸ ಮಾಡಬೇಕು. ಪಕ್ಕದ ಪಾಕಿಸ್ತಾನ ಮತ್ತ ಅಫಘಾನಿಸ್ಥಾನದಲ್ಲಿ ಸೂಕ್ತ ಆರೋಗ್ಯ ಸೇವೆ ಕೊರತೆಯಿಂದ 156 ಪೋಲಿಯೋ ಪ್ರಕರಣ ಕಾಣಿಸಿಕೊಂಡಿರುವುದು ವರದಿಯಾಗಿದೆ ಎಂದು ತಿಳಿಸಿದರು.

    ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ ಮಾತನಾಡಿ, ಆರೈಕೆ ಕೊರತೆಯಿಂದ ಮಕ್ಕಳು ಪೋಲಿಯೋಗೆ ತುತ್ತಾಗುವ ಸಂದರ್ಭ ಹೆಚ್ಚು. ಆದ್ದರಿಂದ ತಪ್ಪದೇ ಲಸಿಕೆ ಹಾಕಿಸಬೇಕು ಎಂದರು.

    ತಹಸೀಲ್ದಾರ್ ಎಂ.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾ, ಡಾ.ಶಿವಶಂಕರ್, ಡಾ.ಗೋವಿಂದರಾಜ್, ಸಿಡಿಪಿಒ ಸವಿತಾ, ಇಸಿಒ ಓಂಕಾರಪ್ಪ, ಕಂದಾಯ ಅಧಿಕಾರಿ ಉಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts