More

  ಶಾಸಕ ಯತ್ನಾಳ್ ವಿರುದ್ಧ ದೂರು ದಾಖಲಿಸುವಂತೆ ಕುರುಗೋಡು ಸಿಪಿಐಎಂ ಪದಾಧಿಕಾರಿಗಳ ಮನವಿ

  ಕುರುಗೋಡು: ವಾಲ್ಮೀಕಿ ಮಹರ್ಷಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಳ್ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿ ಪಟ್ಟಣದ ಸಿಪಿಐಎಂ ಪದಾಧಿಕಾರಿಗಳು ಬುಧವಾರ ಶಿರಸ್ತೇದಾರ್ ಆರ್.ವಿಜಯಕುಮಾರ್‌ಗೆ ಮನವಿ ಸಲ್ಲಿಸಿದರು.

  ಸಂಘದ ಕಾರ್ಯದರ್ಶಿ ಗಾಳಿ ಬಸವರಾಜ ಮಾತನಾಡಿ, ಬಜೆಟ್ ಅಧಿವೇಶನದಲ್ಲಿ ಸಂವಿಧಾನ ಕುರಿತು ಮಾತನಾಡುವಾಗ ಶಾಸಕ ಯತ್ನಾಳ್, ವಾಲ್ಮೀಕಿ ಕೀಳು ಜಾತಿ ಎನ್ನುವ ಮೂಲಕ ಸಮುದಾಯ ಹಾಗೂ ವಾಲ್ಮೀಕಿ ಅನುಯಾಯಿಗಳಿಗೆ ನೋವಾಗಿದೆ. ಕೂಡಲೆ ಶಾಸಕ ಯತ್ನಾಳ್ ಕ್ಷಮೆಯಾಚಿಸಬೇಕು. ಅಲ್ಲದೆ, ರಾಜ್ಯ ಸರ್ಕಾರ ಅವರ ವಿರುದ್ಧ ಎಸ್ಸಿ, ಎಸ್ಟಿ ನಿಂದನೆ ಕಾಯ್ದೆಯಡಿ ದೂರು ದಾಖಲಿಸುವಂತೆ ಒತ್ತಾಯಿಸಿದರು. ಪ್ರಮುಖರಾದ ಎನ್.ಸೋಮಪ್ಪ, ದೊಡ್ಡಬಸವ ನಾಯಕ, ಬಿ.ಹನುಮಂತಪ್ಪ, ಹುಚ್ಚಪ್ಪ, ಮಂಜುನಾಥ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts