More

    ಆಮ್​ ಆದ್ಮಿ ಪಕ್ಷ ಸೇರಿದ ಮಿಸ್ ಇಂಡಿಯಾ ದೆಹಲಿ

    ನವದೆಹಲಿ: 2019 ನೇ ಸಾಲಿನ ‘ಮಿಸ್ ಇಂಡಿಯಾ ದೆಹಲಿ’ ಮಾನಸಿ ಸೇಹಗಲ್, ಆಮ್ ಆದ್ಮಿ ಪಾರ್ಟಿ(ಎಎಪಿ) ಸೇರುವ ಮೂಲಕ ಪಕ್ಷಕ್ಕೆ ಗ್ಲಾಮರ್ ಟಚ್ ನೀಡಿದ್ದಾರೆ. ಮಿಸ್​ ಇಂಡಿಯಾ ದೆಹಲಿ ಆಡಿಷನ್ಸ್​ನಲ್ಲಿ ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದ ಸೆಹಗಲ್, ಈಗ ಎಎಪಿ ಮೂಲಕ ಸಾರ್ವಜನಿಕ ಸೇವೆಯನ್ನು ಕೈಗೆತ್ತಿಕೊಳ್ಳಲು ಅಪೇಕ್ಷಿಸಿದ್ದಾರೆ ಎನ್ನಲಾಗಿದೆ.

    ನೇತಾಜಿ ಸುಭಾಷ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ.ಟೆಕ್. ಪದವಿ ಗಳಿಸಿರುವ ಮಾನ್ಸಿ ಸೆಹಗಲ್, ದ್ವಾರಕಾದ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದವರು. ಸೇಹಗಲ್ ತಮ್ಮದೇ ಒಂದು ಐಟಿ ಸ್ಟಾರ್ಟ್​ಅಪ್​ ಅನ್ನು ಸಹ ನಡೆಸುತ್ತಾರೆ. ಅವರ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಬಗ್ಗೆ ಟೆಡ್​ಎಕ್ಸ್​ ಸ್ಪೀಕರ್, ಇಂಜಿನಿಯರ್ ಮತ್ತು ಎಂಟ್ರೆಪ್ರೆನರ್ ಎಂದು ಬಣ್ಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: “ನೀವು ಬೆಸ್ಟ್ ಮದರ್ ಇನ್ ಲಾ, ನಾನು ಅದೃಷ್ಟವಂತೆ”

    ದೆಹಲಿ ಜಲ್ ಬೋರ್ಡ್​ ಉಪಾಧ್ಯಕ್ಷ ಮತ್ತು ಎಎಪಿ ನಾಯಕ ರಾಘವ್ ಛಡ್ಡ ಅವರ ಸಮ್ಮುಖದಲ್ಲಿ ಮಾನಸಿ ಸೆಹಗಲ್ ಎಎಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಛಡ್ಡ, ಪಕ್ಷದ ಸಿದ್ಧಾಂತ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಭಿವೃದ್ಧಿ ಕಾರ್ಯಗಳಿಂದ ಪ್ರೇರಿತರಾಗಿ ಮಾನಸಿ ಅವರು ಎಎಪಿ ಸೇರುತ್ತಿದ್ದಾರೆ ಎಂದರು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪ್ರಿಯಾಂಕಾರ ಆತ್ಮಚರಿತ್ರೆಯಲ್ಲಿದೆ … ‘ಪ್ಲಾಸ್ಟಿಕ್ ಚೋಪ್ರಾ’ ಆದ ಗುಟ್ಟು !

    ‘ಕ್ರಾಂತಿಕಾರಿ ಚಂದ್ರಶೇಖರ ಆಜಾದ್​ರ ಸಾವಿಗೆ ನೆಹರೂ ಕಾರಣ’ : ಬಿಜೆಪಿ ಶಾಸಕ

    ಈ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕರೊನಾ ಲಸಿಕೆ ಉಚಿತ!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts