More

    ಜೆಎನ್​ಯುಗೆ ನುಗ್ಗಿದ ಉದ್ರಿಕ್ತರ ಗುಂಪಿನಿಂದ ಹಲ್ಲೆ; ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಗಾಯ

    ನವದೆಹಲಿ: ಬಟ್ಟೆಯಿಂದ ಮುಖ ಮುಚ್ಚಿಕೊಂಡ ಕೆಲವರು ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯಕ್ಕೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದಾರೆ.

    ಘಟನೆಯಲ್ಲಿ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿ ಸೇರಿ ಹಲವು ವಿದ್ಯಾರ್ಥಿಗಳ ಗಾಯಗೊಂಡಿದ್ದಾರೆ.

    ಸಂಜೆ 6.30ರ ಸುಮಾರಿಗೆ ಮುಖ ಮುಚ್ಚಿಕೊಂಡಿದ್ದ ಅಂದಾಜು 50 ಜನರ ಗುಂಪು ವಿವಿ ಆವರಣಕ್ಕೆ ನುಗ್ಗಿತು. ಈ ಗುಂಪು ಹಾಸ್ಟೆಲ್​ಗೆ ನುಗ್ಗಿ ಕಲ್ಲು ತೂರಾಟ ನಡೆಸಿತು ಎಂದು ಪ್ರತ್ಯಕ್ಷದರ್ಶಿ ಪ್ರೊಫೆಸರ್​ ಅತುಲ್​ ಸೂದ್​ ತಿಳಿಸಿದ್ದಾರೆ.

    ಮುಖ ಮುಚ್ಚಿಕೊಂಡ ಗುಂಪು ನನ್ನ ಮೇಲೆ ಹಲ್ಲೆ ಮಾಡಿತು. ಮನ ಬಂದಂತೆ ಥಳಿಸಿದ್ದು, ರಕ್ತ ಸುರಿಯುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ತಿಳಿಸಿದ್ದಾರೆ.

    ನಮ್ಮನ್ನು ರಕ್ಷಿಸಲು ಬಂದ ಉಪನ್ಯಾಸಕರ ಮೇಲೆಯೂ ಹಲ್ಲೆ ನಡೆದಿದೆ. ಇವರೆಲ್ಲ ಅಪರಿಚತ ಎಬಿವಿಪಿ ಗುಂಡಾಗಳು. ಅವರಲ್ಲಿ ಎಲ್ಲರೂ ವಿದ್ಯಾರ್ಥಿಗಳಲ್ಲ. ಅವರು ಪಶ್ಚಿಮ ದ್ವಾರದ ಹೊಟೇಲ್​ ​ಕಡೆಗೆ ನುಗ್ಗುತ್ತಿದ್ದಾರೆ. ಎಚ್ಚರದಿಂದಿರಿ, ಮಾನವ ಸರಪಳಿ ರಚಿಸಿ ನಿಮ್ಮನ್ನು ರಕ್ಷಿಸಿಕೊಳ್ಳಿ ಎಂದು ವಿದ್ಯಾರ್ಥಿ ಸಂಘಟನೆ ಟ್ವೀಟ್​ ಮಾಡಿದೆ.

    ಎಬಿವಿಪಿಯ ಜೆಎನ್​ಯು ಘಟಕದ ಅಧ್ಯಕ್ಷ ದುರ್ಗೇಶ್​, ಪ್ರತಿಕ್ರಿಯಿಸಿ, ಎಡಪಂಥದ ಸುಮಾರು ನಾಲ್ಕರಿಂದ ಐನೂರು ಸದಸ್ಯರು ಪೆರಿಯಾರ್ ಹಾಸ್ಟೆಲ್ ಸುತ್ತಲೂ ಜಮಾಯಿಸಿದ್ದರು. ಹಾಸ್ಟೆಲ್ ಅನ್ನು ಧ್ವಂಸಗೊಳಿಸಿದರು. ಮತ್ತು ಅವರೇ ಎಬಿವಿಪಿ ಕಾರ್ಯಕರ್ತರನ್ನು ಒಳಗೆ ತಳ್ಳಲು ಪ್ರಯತ್ನಿಸಿದರು ಎಂದಿದ್ದಾರೆ.

    ಅಲ್ಲದೆ ಎಬಿವಿಪಿಯ ಅಧ್ಯಕ್ಷೀಯ ಅಭ್ಯರ್ಥಿ ಮಂಗೀಶ್​ ಜಂಗಿದ್​ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಮೇಲೆಯೂ ಹಲ್ಲೆಯಾಗಿದ್ದು ಕೈ ಮುರಿದಿದೆ ಎಂದು ತಿಳಿಸಿದ್ದಾರೆ.

    ಜೆಎನ್​ಯು ಗಲಭೆ ಮಾಹಿತಿ ತಿಳಿದು ಅಲ್ಲಿಗೆ 7 ಆಂಬುಲೆನ್ಸ್​ಗಳನ್ನು ಕಳುಹಿಸಲಾಗಿದೆ. ವಿವಿ ಸುತ್ತ ಅಲ್ಲದೆ ಹೆಚ್ಚವರಿ ಪೊಲೀಸರನ್ನು ನಿಯೋಜಿಸಲಾಗಿದೆ.

    ಪೊಲೀಸರು ತಕ್ಷಣ ಕ್ರಮ ಜರುಗಿಸಬೇಕು. ಅಲ್ಲಿನ ಹಿಂಸೆಯನ್ನು ತಡೆಯಬೇಕು. ವಿವಿ ಆವರಣದಲ್ಲೇ ವಿದ್ಯಾರ್ಥಿಗಳು ಸುರಕ್ಷಿತ ಅಲ್ಲವೆಂದಾದರೆ ದೇಶ ಉದ್ಧಾರ ಹೇಗೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್​ ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts