More

    ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ ಆರಂಭ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸರಕು ನಿರ್ವಹಣೆ ಸೌಲಭ್ಯ

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲನ್ನು ಮೇ 1ರಂದು ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗಿದೆ.

    1,891 ಚದರ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿರುವ ಐಸಿಟಿ ವಾರ್ಷಿಕ 9,000 ಟನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಸರಕುಗಳನ್ನು ನಿರ್ವಹಿಸಬಹುದು. ಆರಂಭಿಕ ದಿನದಿಂದಲೇ ದೇಶೀಯ ಒಳಬರುವ ಮತ್ತು ಹೊರಹೋಗುವ ಸರಕುಗಳನ್ನು ನಿರ್ವಹಿಸುವ ಮೂಲಕ ವಿಮಾನ ನಿಲ್ದಾಣವು ಐಸಿಟಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ.

    ಹೊಸ ಐಸಿಟಿ ಎಲ್ಲ ಪಾಲುದಾರರಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಕಲ್ಪಿಸಿದೆ. ಒಳಬರುವ ಮತ್ತು ಹೊರಹೋಗುವ ಸರಕುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು 10 ಟ್ರಕ್ ಬೇಗಳು, ಎರಡು ಡಾಕ್ ಲೆವೆಲ್ಲರ್‌ಗಳು ಮತ್ತು ಫೋರ್ಕ್ ಲಿಫ್ಟ್ ಸೌಲಭ್ಯ ಕಲ್ಪಿಸಿದೆ. ವಿಮಾನಯಾನ ಮತ್ತು ಕಸ್ಟಮ್ಸ್‌ಗೆ ಪ್ರತ್ಯೇಕ ಕಚೇರಿ ಸ್ಥಳವಿದೆ. ಕೇಂದ್ರೀಕೃತ ಎಸಿ, ವಾಯುಯಾನ ಸರಕು ನಿಯಂತ್ರಕರು ಸೂಚಿಸಿದ ಮಾನದಂಡಗಳ ಪ್ರಕಾರ ಸ್ಟ್ರಾಂಗ್ ರೂಮ್, ಕೋಲ್ಡ್ ಸ್ಟೋರೇಜ್ ಮತ್ತು ಅಪಾಯಕಾರಿ ಸರಕು ಶೇಖರಣಾ ಸೌಲಭ್ಯವನ್ನೂ ಹೊಂದಿದೆ.

    ಇಡೀ ಐಸಿಟಿ ಸೌಲಭ್ಯವು ಸಿಸಿಟಿವಿ ಕಣ್ಗಾವಲಿನಲ್ಲಿದೆ. ತರಬೇತಿ, ದಾಖಲೀಕರಣ, ಸಮ್ಮೇಳನ ಮತ್ತು ಬೋರ್ಡ್ ಕೋಣೆಗೆ ಪ್ರತ್ಯೇಕ ಸ್ಥಳವಿದೆ. ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪಾಸ್ ವಿತರಣೆ ಮತ್ತು ತಪಾಸಣೆ ಬೂತ್ ಸ್ಥಾಪಿಸಿದ್ದು, ಸಿಐಎಸ್‌ಎಫ್‌ನ ಎಎಸ್‌ಜಿ ಸಿಬ್ಬಂದಿಯ ಕಣ್ಗಾವಲಿನಲ್ಲಿದೆ. ಐಸಿಟಿ 1000*100 ಮತ್ತು 145*185 ಎಕ್ಸ್-ರೇ ಬ್ಯಾಗೇಜ್ ತಪಾಸಣಾ ವ್ಯವಸ್ಥೆ, ಸ್ಫೋಟಕ ಪತ್ತೆ ಸಾಧನಗಳನ್ನು ಹೊಂದಿದೆ.

    ಹಣ್ಣು-ತರಕಾರಿ, ಆಹಾರ ಪದಾರ್ಥಗಳು, ಶೀತಲ / ಹೆಪ್ಪುಗಟ್ಟಿದ ಮೀನು, ಬಿಡಿಭಾಗಗಳು ಮತ್ತು ಜವಳಿಗಳನ್ನು ಐಸಿಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸುತ್ತದೆ. ದೇಶೀಯವಾಗಿ ಸರಕು ಪೋಸ್ಟ್ ಆಫೀಸ್ (ಪಿಒ) ಮೇಲ್ ಒಳಗೊಂಡಿದೆ. ಕೊರಿಯರ್ ಐಟಮ್ಸ್, ಹಾಳಾಗುವ ವಸ್ತುಗಳು, ಬೆಲೆಬಾಳುವ ವಸ್ತುಗಳು (ಆಭರಣಗಳು), ಔಷಧಕ್ಕಾಗಿ ರಕ್ತದ ಮಾದರಿಗಳು, ಮಾನವ ಅವಶೇಷಗಳು, ದಾಖಲೆಗಳು / ಸಾಮಾನ್ಯ ಮತ್ತು ಇ-ಕಾಮರ್ಸ್ ವಸ್ತುಗಳು ಮತ್ತು ಅಪಾಯಕಾರಿ ಸರಕುಗಳು, ಬ್ಯಾಂಕುಗಳಿಗೆ ಚೆಕ್ ಪುಸ್ತಕಗಳು ಮತ್ತು ಇತರ ಸರ್ಕಾರಿ ಭದ್ರತಾ ದಾಖಲೆಗಳಂತಹ ವಸ್ತುಗಳನ್ನು ಒಳಗೊಂಡಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts