More

    ಮನವಿ ಈಡೇರಿಸದಿದ್ದಕ್ಕೆ ಕಚೇರಿಯೊಳಗೆ ಉಡ ತಂದು ಬಿಟ್ಟ

    ಭೋಪಾಲ್​: ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯೋರ್ವ ಮನೆ ನಿರ್ಮಾಣ ಮಾಡುವುದಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಮಾಡುಬೇಕೆಂದು ಒತ್ತಾಯಿಸಿ ಮುನ್ಸಿಪಾಲ್​ ಆಫೀಸರ್​ ಕಚೇರಿಯೊಳಗೆ ಉಡವನ್ನು ಬಿಟ್ಟಿರುವ ಘಟನೆ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಚಂದೇರಿಯಲ್ಲಿ ನಡೆದಿದೆ.

    ತೋತಾರಾಮ್​ ಎಂಬ ವ್ಯಕ್ತಿಯೂ ಸರ್ಕಾರದಿಂದ ನೀಡಿರುವ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ಹಣ ಮಂಜೂರು ಮಾಡುವಂತೆ ಹಲವು ದಿನಗಳಿಂದ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದು, ಅಧಿಕಾರಿಗಳು ಇವರ ಮಾತಿಗೆ ಯಾವುದೇ ಕಿಮ್ಮತ್ತನ್ನು ನೀಡಿಲ್ಲ.

    ಅಧಿಕಾರಿಗಳ ವರ್ತನೆಯಿಂದ ತೀವ್ರವಾಗಿ ಬೇಸತ್ತಿದ್ದ ತೋತಾರಾಮ್​ ವೃತ್ತಿಯಲ್ಲಿ ಉರಗ ತಜ್ಞನಾಗಿದ್ದು, ಉಡವನ್ನು ತಂದು ನೇರವಾಗಿ ಮುಖ್ಯ ಅಧಿಕಾರಿಯ ಕಚೇರಿ ಒಳಗೆ ಬಿಟ್ಟಿದ್ದಾನೆ. ಬಳಿಕ ತನ್ನ ಮನವಿಯನ್ನು ಪುರಸ್ಕರಿಸದಿದ್ದರೆ ವಿಷಕಾರಿ ಹಾವುಗಳನ್ನು ಬಿಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ.

    Monitor Lizard

    ಇದನ್ನೂ ಓದಿ: ಶ್ವಾನಪ್ರೇಮಿ ರಜನಿ ಶೆಟ್ಟಿ ಮೇಲೆ ನೆರೆಮನೆ ನಿವಾಸಿಯಿಂದ ಹಲ್ಲೆ

    ನಾವು ಹೆದರುವುದಿಲ್ಲ

    ಈ ಕುರಿತು ಪ್ರತಿಕ್ರಿಯಿಸಿರುವ ಮುನ್ಸಿಪಾಲ್​ ಅಧಿಕಾರಿ ತೋತರಾಮ್​​ ಹೆಸರಿನಲ್ಲಿ ಇರುವ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ 1 ಲಕ್ಷ ರೂಪಾಯಿ ಹಣವನ್ನು ಮಂಜೂರು ಮಾಡಲಾಗಿತ್ತು. ಆದರೆ, ಮಂಜೂರಾದ ಹಣದಲ್ಲಿ ತೋತರಾಮ್​ 90 ಸಾವಿರ ರೂಪಾಯಿಯನ್ನು ಖರ್ಚು ಮಾಡಿಕೊಂಡಿದ್ದಾನೆ.

    ಹಣ ಸಂಪೂರ್ಣ ಖರ್ಚಾದ ಬಳಿಕ ಪುನಃ ಮಂಜೂರು ಮಾಡಿಸುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾನೆ. ಅಧಿಕಾರಿಗಳು ಯಾವಾಗ ಆತನ ಮಾತಿಗೆ ಸರಿಯಾದ ಉತ್ತರ ಕೊಡದಿದ್ದಾಗ ಆತ ಸಿಟ್ಟಿಗೆದ್ದು ಈ ರೀತಿ ಮಾಡುವ ಮೂಲಕ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಮುನ್ಸಿಪಾಲ್​ ಅಧಿಕಾರಿಯೂ ಅರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts