More

    2.23 ಲಕ್ಷ ರೂ. ಮೌಲ್ಯದ ಮದ್ಯ ವಶ

    ಶಿವಮೊಗ್ಗ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಸಾಗರ ಮಾರ್ಗವಾಗಿ ಬರುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನದಲ್ಲಿದ್ದ 2.23 ಲಕ್ಷ ರೂ. ಮೌಲ್ಯದ ಪರವಾನಗಿ ಇಲ್ಲದ 51.84 ಲೀ. ಮದ್ಯ ಜಪ್ತಿ ಮಾಡಿದ್ದು ಚಾಲಕ ಪರಾರಿಯಾಗಿದ್ದಾನೆ.

    ಸಾಗರ ತಾಲೂಕು ಕಾನಲೆ ಕ್ರಾಸ್ ಬಳಿ ಚೆಕ್‌ಪೋಸ್ಟ್ ಸಿಬ್ಬಂದಿ ವಾಹನಗಳ ತಪಾಸಣೆ ಮಾಡುತ್ತಿದ್ದರು.ಈ ವೇಳೆ ತಾಳಗುಪ್ಪ ಕಡೆಯಿಂದ ಸಾಗರ ಮಾರ್ಗವಾಗಿ ಟಾಟಾ ಏಸ್ ಗೂಡ್ಸ್ ಬರುತ್ತಿತ್ತು. ಚೆಕ್‌ಪೋಸ್ಟ್ ಸಿಬ್ಬಂದಿ ವಾಹನ ನಿಲುಗಡೆಗೆ ಸೂಚಿಸುತ್ತಿದ್ದಂತೆ ಚಾಲಕ ಗೂಡ್ಸ್ ಅನ್ನು ತಿರುಗಿಸಿ ಕೊಂಡೊಯ್ಯಲು ಯತ್ನಿಸಿದ್ದ. ಈ ವೇಳೆ ವಾಹನ ಬಂದ್ ಆಗಿದ್ದು ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದ.
    ನಂತರ ತಾಳುಗುಪ್ಪದ ಎಫ್‌ಎಸ್‌ಟಿ-4ಸಿ ತಂಡ ಗೂಡ್ಸ್ ತಪಾಸಣೆ ಮಾಡಿದಾಗ 90 ಮಿ.ಲೀ.ನ 288 ಟೆಟ್ರಾ ಪ್ಯಾಕ್ ಒರಿಜಿನಲ್ ಛಾಯ್ಸ್ ವಿಸ್ಕಿ ಹಾಗೂ ಮತ್ತೊಂದು ಚೀಲದಲ್ಲಿ 90 ಮಿ.ಲೀ.ನ 288 ಟೆಟ್ರಾ ಪ್ಯಾಕ್ ಕ್ಯಾಪ್ಟನ್ ಮಾರ್ಟಿನ್ ವಿಸ್ಕಿ ಪತ್ತೆಯಾಗಿದೆ. ಪರವಾನಗಿ ಇಲ್ಲದೆ 51.84 ಲೀ. ಮದ್ಯವನ್ನು ವಶಕ್ಕೆ ಪಡೆಯಾಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts