More

    ಬುಡುಕಟ್ಟುಗಳ ವಿಸ್ತ್ರತ ಅಧ್ಯಯನ ನಡೆಯಲಿ

    ರಿಪ್ಪನ್‌ಪೇಟೆ: ಭಾರತ ಬಹುಸಂಸ್ಕೃತಿಯ ದೇಶ. ಬುಡಕಟ್ಟು ಪರಂಪರೆ ಈ ನೆಲದ ಮೂಲ ಸಂಸ್ಕೃತಿಯ ಕುರುಹು. ಬುಡಕಟ್ಟುಗಳ ಬದುಕಿನ ಕ್ರಮದಿಂದ ನಾಗರಿಕರೆನಿಸಿಕೊಂಡ ನಾವು ಕಲಿಯಬೇಕಾದ ಮೌಲ್ಯಗಳು ಸಾಕಷ್ಟಿವೆ ಎಂದು ಜಾರ್ಖಂಡ್‌ನ ರಾಂಚಿ ವಿವಿ ಪ್ರಾಧ್ಯಾಪಕ ಪ್ರೊ. ನಾಗ ಎಚ್.ಹುಬ್ಳಿ ತಿಳಿಸಿದರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ಜನಪದ ಪರಂಪರೆ-ಬುಡಕಟ್ಟು ಸಂಸ್ಕೃತಿ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲೇ ನೂರಾರು ವಿಭಿನ್ನ ಬುಡಕಟ್ಟುಗಳಿದ್ದು ಅವುಗಳ ವಿಸ್ತೃತ ಅಧ್ಯಯನ ಬಾಕಿ ಇದೆ ಎಂದರು.
    ಬುಡಕಟ್ಟು ವಾಸಿಗಳ ಹಾಡಿಯ ಪ್ರದೇಶಗಳಲ್ಲಿ ಕಳ್ಳತನ, ಕೊಲೆ, ಅತ್ಯಾಚಾರಗಳಂತಹ ವಿಕೃತಿಗಳನ್ನು ಕಾಣಲು ಸಾಧ್ಯವಿಲ್ಲ. ಪ್ರಕೃತಿಯೊಂದಿಗೆ ಸಹಬಾಳ್ವೆಯ ಬದುಕು ಅವರದ್ದಾಗಿದೆ. ಅವರನ್ನು ಅವರಿರುವಂತೆಯೇ ಸ್ವತಂತ್ರವಾಗಿ ಬಿಟ್ಟುಬಿಡುವುದು ಉತ್ತಮ. ಮುಖ್ಯವಾಹಿನಿಗೆ ತರುವ ನಮ್ಮ ಪ್ರಯತ್ನ ಅವರ ಪಾಲಿಗೆ ಸಂಕಷ್ಟವಾಗಿ ಪರಿಣಮಿಸಬಹುದು ಎಂದು ತಿಳಿಸಿದರು.
    ಪ್ರಾಚಾರ್ಯ ಟಿ.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್.ಎಸ್.ವಿರೂಪಾಕ್ಷಪ್ಪ, ಐಕ್ಯೂಎಸಿ ಸಂಚಾಲಕ ಡಾ. ಆರ್.ಕೆ.ರಾಜು, ಗ್ರಂಥಪಾಲಕ ಡಾ. ರಜನಿಕಾಂತ್, ಪ್ರಾಧ್ಯಾಪಕ ಡಾ. ರತ್ನಾಕರ ಕುನುಗೋಡು, ಡಾ. ಶಿವಾಜಿ ರಾವ್, ಸುರೇಶ್ ಶಿಕಾರಿಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts