More

    ಕಾನೂನು ಅರಿವಿಗೆ ನ್ಯಾಯಾಧೀಶರ ಸಲಹೆ

    ಚಿತ್ರದುರ್ಗ: ಕಾನೂನು ಅರಿವು ಇಲ್ಲವಾದಲ್ಲಿ ತಮ್ಮ ಹಕ್ಕನ್ನು ತಾವೇ ಮೊಟಕುಗೂಳಿಸಿಕೊಂಡಂತೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ‌್ಯದರ್ಶಿ, ನ್ಯಾಯಾ ಧೀಶ ಬಿ.ಕೆ ಗೀರೀಶ್ ನಾಗರಿಕರನ್ನು ಎಚ್ಚರಿಸಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಹಿಳಾ ಜ್ಞಾನ ವಿಕಾಸ ಕಾರ‌್ಯಕ್ರಮದಡಿ ಸೀಬಾರ ನಿಜಲಿಂಗಪ್ಪ ಸ್ಮಾರಕ ಪುಣ್ಯಭೂಮಿ ಬಳಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳೆ ಮತ್ತು ಕಾನೂನು ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅವರು,ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಎಲ್ಲರಿಗೂ ಸ ಮಾನ ಹಕ್ಕುಗಳನ್ನು ನೀಡಿದೆ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಕಾನೂನು,ಹಕ್ಕುಗಳ ಜಾಗೃತಿ ಪ್ರತಿಯೊಬ್ಬರಲ್ಲೂ ಇರ ಬೇಕೆಂದರು.

    ಕಾರ‌್ಯಕ್ರಮ ಉದ್ಘಾಟಿಸಿದ ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಕಾರ‌್ಯದರ್ಶಿ ಕೆಇಬಿ ಷಣ್ಮುಖಪ್ಪ ಮಾತನಾಡಿ,ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗೆ ಅವರು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಮಹಿಳೆಯರ ಸಬಲಿಕರಣಕ್ಕೆ ದಾರಿ ದೀಪವಾಗಿದ್ದಾರೆ. ಮಹಿಳೆಯರ ಅರ್ಥಿಕ ಪ್ರಗತಿಗೆ ಸಾಧ್ಯವಾಗುತ್ತಿದೆ ಎಂದರು.

    ಬಿ.ಸಿ.ಟ್ರಸ್ಟ್ ಕ್ಷೇತ್ರ ಯೋಜನಾಧಿಕಾರಿ ಎ.ಜೆ.ಪ್ರವೀಣ ಮಾತನಾಡಿ,ಶ್ರೀ ವಿರೇಂದ್ರ ಹೆಗ್ಗೆ ಅವರ ದೂರ ದೃಷ್ಟಿಯಿಂದಾಗಿ ಸ್ವಸಹಾಯ ಸಂಘಗಳು ರಾಜ್ಯದೆಲ್ಲೆಡೆ ಸ್ಥಾಪನೆ ಆಗಿವೆ. ರೈತರಿಗೆ ನೆರವು ಯೋಜನೆಗಳನ್ನು ಹೆಗ್ಡೆ ಅವರು ರೂಪಿಸಿದ್ದಾರೆ ಎಂದರು. ಐನಳ್ಳಿ ಗ್ರಾ.ಪಂ.ಅಧ್ಯಕ್ಷೆ ವೀಣಾ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ದಿನೇಶ್ ಪೂಜಾರಿ,ಮಂಜುಳಾ,ತಿಪ್ಪೇಸ್ವಾಮಿ, ಜಯಶೀಲಾ,ಶಾಂತಾ ಇತರರು ಇದ್ದರು. ಕಲಾವತಿ ತಂಡದವರು ಪ್ರಾರ್ಥಿಸಿದರು. ಅನುಷಾ ರೈ ಕಾರ‌್ಯಕ್ರಮ ನಿರೂಪಿಸಿದರು,ಸಾಕಮ್ಮ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts