More

    ಹೆತ್ತ ತಂದೆ -ತಾಯಿ, ಕಲಿಸಿದ ಗುರು ಮರೆಯಬೇಡಿ: ಅರುಣ

    ವಿಜಯವಾಣಿ ಸುದ್ದಿಜಾಲ ಗದಗ
    ನಿಮ್ಮ ಬದುಕಿಗೆ ದಾರಿದೀಪವಾದ ತಂದೆ ತಾಯಿ, ವಿದ್ಯಾಭ್ಯಾಸ ಕಲಿಸಿದ ಗುರುಗಳು ಮತ್ತು ಕಲಿತ ಶಾಲೆಯನ್ನು ಎಂದಿಗೂ ಮರೆಯಬೇಡಿ. ಈ ಮೂರನ್ನೂ ಮರೆತರೆ ನಿಮಗೆ ನೀವೇ ದ್ರೋಹ ಮಾಡಿಕೊಂಡಂತೆ ಎಂದು ಸಾಹಿತಿ, ನಿವೃತ್ತ ಮುಖ್ಯ ಶಿಕ ಅರುಣ ಕುಲಕಣಿರ್ ಹೇಳಿದರು.
    ತಾಲೂಕಿನ ಲಕ್ಕುಂಡಿ ಗ್ರಾಮದ ಜನತಾ ವಿದ್ಯಾವರ್ದಕ ಸಂಸ್ಥೆಯ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಮಹಾಸರಸ್ವತಿ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾಥಿರ್ಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯೆಗೆ ವಿನಯವೇ ಭೂಷಣ. ವಿನಯಕ್ಕೆ ಸಂಸ್ಕಾರವೇ ಭೂಷಣ. ನೀವು ಒಂದರವನ್ನು ಕಡಿಮೆ ಕಲಿತರೂ ಚಿಂತೆಯಿಲ್ಲ ಆದರೆ ನೀವುಗಳು ಸಂಸ್ಕಾರವಂತರಾಗಿ ಈ ಸಮಾಜದ ಆಸ್ತಿ ಆಗಬೇಕು. ನಿಮ್ಮ ತಂದೆ ತಾಯಿಗಳು ನಿಮ್ಮ ಉದ್ಧಾರಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ತಮ್ಮ ಆಸೆಗಳೆಲ್ಲವನ್ನೂ ಬದಿಗಿರಿಸಿ ಅವರು ನಿಮಗಾಗಿ ಎಲ್ಲವನ್ನೂ ನೀಡುತ್ತಿದ್ದಾರೆ. ಇಂತಹ ಪಾಲಕರನ್ನು ಪಡೆದ ನೀವುಗಳು ಧನ್ಯರು. ಅವರ ಆಸೆಗೆ ಕಲ್ಲು ಹಾಕಬೇಡಿ. ನಿಮ್ಮನ್ನು ನಂಬಿ ವಿದ್ಯಾಭ್ಯಾಸ ಕಲಿಸಿದ ಗುರುಗಳಿಗೆ, ಶಾಲೆಗೆ ಕೆಟ್ಟ ಹೆಸರು ಬಾರದಂತೆ ನಡೆದುಕೊಳ್ಳಬೇಕು. ಬರುವ ವಾಷಿರ್ಕ ಪರೀೆಯಲ್ಲಿ ಎಲ್ಲರೂ ಉತ್ತಮ ಅಂಕ ಪಡೆದು ಶಾಲೆಗೆ ಉತ್ತಮ ಹೆಸರನ್ನು ತರಬೇಕೆಂದು ಹೇಳಿದರು.
    ಸಂಸ್ಥೆಯ ನಿರ್ದೇಶಕ ವೀರಯ್ಯ ಗಂಧದ ಮಾತನಾಡಿ, ವಿದ್ಯಾಥಿರ್ಗಳು ಶಿಸ್ತು, ಸಮಯ ಪಾಲನೆಯ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಓದಿದ್ದನ್ನು ನೆನಪಿನಲ್ಲಿಟ್ಟುಕೊಂಡು ಪರೀೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರವನ್ನು ಬರೆಯಬೇಕು. ನೀವು ಪೂಜಿಸಿದ ಮಹಾಸರಸ್ವತಿ ಎಲ್ಲ ಭಾಗ್ಯವನ್ನೂ ಕರುಣಿಸುತ್ತಾರೆ.
    ಸಂಸ್ಥೆಯ ಅಧ್ಯ ಐ. ಎನ್​. ಕುಂಬಾರ ಅಧ್ಯತೆ ವಹಿಸಿ ಮಾತನಾಡಿ, ಮನೆಗೆ ಉತ್ತಮ ಮಗನಾಗಿ, ಸಮಾಜಕ್ಕೆ ಉತ್ತಮ ನಾಗರಿಕನಾಗಿ ಮಕ್ಕಳು ರೂಪುಗೊಳ್ಳಬೇಕು. ಯಾವುದೇ ಕಾರಣಕ್ಕೂ ಸಮಾಜ ವಿರೋಧಿ ವ್ಯಯಾಘಿ ಬದುಕಬಾರದು ಎಂದರು.
    ಶಿಕ ಬಿ. ಎಸ್​. ಕಣವಿ ಮಾತನಾಡಿದರು. ಟಿ. ಎನ್​. ಅಂಬಕ್ಕಿ, ಕೆ. ಎಂ. ಪಾಟೀಲ, ಎ. ಎನ್​. ಪೂಜಾರ, ದಾದಾಪೀರ ಕಿತ್ತೂರ, ಪಿ. ಎಸ್​. ಕೊರಡೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts