More

    ಕೂಡ್ಲಿ‌-ಶೃಂಗೇರಿ ಮಠದ ಪೀಠಾಧಿಪತಿ ವಿದ್ಯಾಭಿನವ ಶಂಕರಭಾರತಿ ಸ್ವಾಮೀಜಿ ನಿಧನ

    ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಅವಿಚ್ಛಿನ್ನ ಪರಂಪರೆ ಕೂಡ್ಲಿ‌ ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಭಿನವ ಶಂಕರಭಾರತಿ ಸ್ವಾಮೀಜಿ ಇಂದು ಬೆಂಗಳೂರಿನ‌ ಶ್ರೀಮಠದಲ್ಲಿ ಸಮಾಧಿಸ್ಥರಾಗಿದ್ದಾರೆ.

    ಮೂಲತಃ ಧಾರವಾಡದವರಾಗಿದ್ದ ಶ್ರೀಗಳು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಧರರಾಗಿ ತಮ್ಮ ಪೂರ್ವಾಶ್ರಮದಲ್ಲಿ ಧಾರವಾಡದ ಪ್ರತಿಷ್ಠಿತ ಕೆ‌.ಇ. ಬೋರ್ಡ್ ಶಾಲೆ ಯಲ್ಲಿ‌ ಸಂಸ್ಕೃತ ಶಿಕ್ಷಕರಾಗಿ ಹಾಗೂ ಕರ್ನಾಟಕ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಬಾಲ್ಯದಿಂದಲೂ ಆಧ್ಯಾತ್ಮ ಮುಮುಕ್ಷುಗಳಾಗಿದ್ದ ಪೂಜ್ಯರು ಧಾರವಾಡದ‌ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಪಾಠಶಾಲೆಯಲ್ಲಿ ವೇದ, ಧರ್ಮಾಶಾಸ್ತ್ರಗಳ ಅಧ್ಯಯನ ನಡೆಸಿ ಸನ್ಯಾಸತ್ವ ಸ್ವೀಕರಿಸಿ ೨೦೦೪ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಚಾಮರಾಜಪೇಟೆಯ ಅವಿಚ್ಛಿನ್ನ ಪರಂಪರೆ ಕೂಡ್ಲಿ‌ ಶೃಂಗೇರಿ ಮಠದ ಪೀಠಾಧಿಪತಿಗಳಾಗಿ ನಿಯುಕ್ತಿಗೊಂಡಿದ್ದರು. ವೇದ‌ಶಾಸ್ತ್ರಗಳ‌ ಅಧ್ಯಯನ, ಸನಾತನ ಹಿಂದು ಧರ್ಮ ರಕ್ಷಣೆ ಹಾಗೂ ಯುವಪೀಳಿಗೆಯಲ್ಲಿ ಹಿಂದೂ ಧರ್ಮ ಜಾಗೃತಿಗಾಗಿ ಬಹುವಾಗಿ ಶ್ರಮಿಸಿದ್ದರು.

    ಆದಿ ಜಗದ್ಗುರು ಶಂಕರಾಚಾರ್ಯರ ತತ್ವ- ಸಿದ್ಧಾಂತಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ನಿರಂತರವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಶ್ರೀಗಳು ಜಗದ್ಗುರು ಶಂಕರಾಚಾರ್ಯರ ಜಯಂತಿ ದಿನದಂದೇ ಸಮಾಧಿಸ್ಥರಾಗಿದ್ದಾರೆ. ಶ್ರೀಮಠದ ಅಭಿವೃದ್ಧಿಗಾಗಿ ಅನೇಕ ವಿನೂತನ ಯೋಜನೆಗಳನ್ನು ರೂಪಿಸಿ ಅವುಗಳ ಸಾಕಾರಕ್ಕೆ ನಿರಂತರ ಪ್ರಯತ್ನಿಸುತ್ತಿದ್ದರು.

    ಇದನ್ನೂ ಓದಿ; ಟೆರೇಸ್ ಮೇಲೆ ಮಲ್ಲಿಗೆ ಕೃಷಿ: ಲಾಕ್‌ಡೌನ್ ವೇಳೆ ಪುತ್ತೂರಿನ ಯುವಕನ ಸಾಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts