More

    ಕೃಷಿಮೇಳ: ರಾಜ್ಯದಲ್ಲಿ ಬಿದಿರು ಅಭಿವೃದ್ಧಿ ಯೋಜನೆ

    ಕೇಂದ್ರ ಸರ್ಕಾರದ ರಾಷ್ಟ್ರೀಯ ಬಿದಿರು ಮಿಷನ್ ರಾಜ್ಯದ 3 ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಬಿದಿರು ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಡೀನ್ ಡಾ.ಸಿ.ಜಿ.ಕುಶಾಲಪ್ಪ ಘೊಷಣೆ ಮಾಡಿದರು. ವಿಚಾರಗೋಷ್ಠಿಯಲ್ಲಿ ಅರಣ್ಯ ಕೃಷಿ ವಿಚಾರವಾಗಿ ಉಪನ್ಯಾಸ ನೀಡಿದ ಅವರು, ಮುಂದಿನ ದಿನಗಳಲ್ಲಿ ಬಿದಿರು ಹಸಿರು ಚಿನ್ನವಾಗಿ ಪರಿಣಮಿಸಲಿದೆ.

    ರಾಷ್ಟ್ರೀಯ ಬಿದಿರು ಮಿಷನ್​ನಿಂದ ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ತರಲಾಗುತ್ತಿದ್ದು, ನಾಲ್ಕು ಜಾತಿಯ ಗಿಡಗಳನ್ನು ರೈತರಿಗೆ ಕೊಟ್ಟು ಬೆಳೆಸುವ ಯೋಜನೆ ಇದಾಗಿದೆ. ಪ್ರತಿವರ್ಷ ಒಂದು ಎಕರೆಗೆ 25 ಸಾವಿರ ರೂ. ಪ್ರೋತ್ಸಾಹಧನವನ್ನೂ ನೀಡಲಾಗುವುದು. ಈ ಜವಾಬ್ದಾರಿಯನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಕ್ಕೆ ವಹಿಸಿದ್ದು, ಆಸಕ್ತ ರೈತರು ನಮ್ಮ ಕಚೇರಿಯನ್ನು ಸಂರ್ಪಸಬಹುದು. ಇಲ್ಲವೇ ನೇರವಾಗಿ ಅರಣ್ಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

    ಅರಣ್ಯ ಮಹಾವಿದ್ಯಾಲಯದಿಂದ ಗಿಡಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಿದೆ ಎಂದು ವಿವರಿಸಿದರು. ಬಿದಿರಿಗೆ ತುಂಬಾ ಬೇಡಿಕೆ ಇದೆ. ಗಂಧದ ಕಡ್ಡಿಗೆ ಬಳಸುವ ಮರದ ಕಡ್ಡಿ ಈಗ ಬಹುತೇಕ ವಿದೇಶದಿಂದ ಪೂರೈಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಬಿದಿರು ಮನಿಷನ್ ಯೋಜನೆ ಮಹತ್ವ ಪಡೆದುಕೊಂಡಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೆಕು ಎಂದರು.

    ಮೈಸೂರು ಭಾಗದ ರೈತರು ಬಿದಿರು ಮತ್ತು ಶ್ರೀಗಂಧ ಬೆಳೆಯಲು ಆಸಕ್ತಿ ತೋರಬೇಕು. ಕೊಡಗಿನಲ್ಲಿ ಶೇ.80 ಅರಣ್ಯ ಪ್ರದೇಶವಿದೆ. ಇದರಲ್ಲಿ ಶೇ.33 ಕಾಫಿ, ಶೇ.47 ಕಾಡು. ಇಲ್ಲಿನ ರೈತರು ಒಂದು ಎಕರೆ ಕಾಫಿ ಪ್ರದೇಶದಲ್ಲಿ 140 ಮರಗಳನ್ನು ಬೆಳೆಸಿದ್ದಾರೆ. ಹಿಂದೆ ನಮ್ಮ ಪೂರ್ವಜರು ಬಿದಿರು ಕಡಿದು ಗದ್ದೆ ಮಾಡುತ್ತಿದ್ದರು. ಆದರೆ ಇಂದು ಮಳೆಯಿಲ್ಲದೆ ಆ ಗದ್ದೆಗಳಲ್ಲಿ ಬಿದಿರು ನೆಡುವ ಸ್ಥಿತಿ ನಿರ್ವಣವಾಗಿದೆ ಎಂದು ಕುಶಾಲಪ್ಪ ತಿಳಿಸಿದರು.

    ಸ್ವಾವಲಂಬಿ ಬದುಕು

    ಎಚ್.ಡಿ.ಕೋಟೆಯ ಪ್ರಗತಿಪರ ಕೃಷಿಕ ಮಲಾರ ಪುಟ್ಟಯ್ಯ ಮಾತನಾಡಿ, 40 ಎಕರೆ ಭೂಮಿಯಲ್ಲಿ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದೇನೆ. ನಮ್ಮದು ಅವಿಭಕ್ತ ಕುಟುಂಬ. ನಮ್ಮಲ್ಲೂ ಡಿಗ್ರಿ, ಮಾಸ್ಟರ್ ಡಿಗ್ರಿ, ಲಾ ಮಾಡಿ ದವರಿದ್ದಾರೆ. ಇವರ್ಯಾರೂ ಕೃಷಿ ಬಿಟ್ಟಿಲ್ಲ. ನಮ್ಮ ಜಮೀನಿನ ಕೆಲಸಗಳಿಗೆ ಕೂಲಿ ಕಾರ್ವಿುಕರನ್ನು ಆಶ್ರಯಿಸದೆ ಮನೆಯವರೇ ಕೆಲಸ ಮಾಡಿಕೊಳ್ಳುತ್ತೇವೆ. ರೈತರು ಸರ್ಕಾರದ ಯಾವುದೇ ಸಾಲ, ಸಬ್ಸಿಡಿಗೆ ಕೈಚಾಚದೆ ಇರುವ ಜಮೀನಿನಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು. ಅರಕರೆಯ ನೈಸರ್ಗಿಕ ಕೃಷಿತಜ್ಞ ಪ್ರಸನ್ನ ಎನ್.ಗೌಡ ಅಧ್ಯಕ್ಷತೆ ವಹಿಸಿದ್ದರು.

    ನೀರು ಬಳಕೆ ಮಿತಿಯಿರಲಿ

    ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ವನರಾಜು ಮಾತನಾಡಿ, ಕಾವೇರಿ ಕಣಿವೆ ಪ್ರದೇಶ ಚಿಕ್ಕಮಗಳೂರಿನಿಂದ ಕೊಡಗು, ಚಾಮರಾಜನಗರದಿಂದ ಚಿಕ್ಕಬಳ್ಳಾಪುರದವರೆಗೆ ಚಾಚಿಕೊಂಡಿದೆ. 26 ಲಕ್ಷ ಹೆಕ್ಟೇರ್ ಭೂಮಿಗೆ 485 ಟಿಎಂಸಿ ನೀರಿನ ಬೇಡಿಕೆ ಇದೆ. ಆದರೆ ಕಾವೇರಿ ನ್ಯಾಯಾಧಿಕರಣ 19.85 ಲಕ್ಷ ಹೆಕ್ಟೇರ್ ಭೂಮಿಗೆ 270 ಟಿಎಂಸಿ ಹಂಚಿಕೆ ಮಾಡಿದೆ. ಇದನ್ನು ಪ್ರಶ್ನಿಸಿ ಸುಪ್ರೀಕೋರ್ಟ್ ಮೆಟ್ಟಿಲೇರಿದ ಕಾರಣ 14 ಟಿಎಂಸಿ ಹಂಚಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ರೈತರು ನೀರನ್ನು ಮಿತವಾಗಿ ಬಳಸಿಕೊಳ್ಳುವ ಬಗ್ಗೆ ಜಾಗೃತರಾಗಬೇಕು. ನೀರು ಬಳಕೆದಾರರ ಸಂಘಗಳ ಸಬಲೀಕರಣಕ್ಕೆ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

    ಬರಲಿದೆ ಹೂ ಬಿಡದ ಕಬ್ಬು

    ಕಾರ್ಖಾನೆಗಳಲ್ಲಿ ಕಬ್ಬು ಅರೆಯಲು ಅನುಮತಿ ನೀಡುವುದು ತಡವಾದಾಗ ಕಬ್ಬಿನಲ್ಲಿ ಹೂವು ಬಂದು ಇಳುವರಿ ಕುಂಠಿತವಾಗಲಿದೆ. ಅದಕ್ಕೆ ಪರಿಹಾರವಾಗಿ ಹೂವನ್ನೇ ಬಿಡದ ಕಬ್ಬಿನ ತಳಿಯನ್ನು ಮಂಡ್ಯದ ವಿಸಿ ಫಾಮ್ರ್ ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿಪಡಿಸಿದೆ. ಕಬ್ಬಿನಲ್ಲಿ ಹೂವು ಬಿಡುವ ಸಮಸ್ಯೆಗೆ ಅಭಿವೃದ್ಧಿಪಡಿಸಿರುವ 86061 ಹೆಸರಿನ ತಳಿ 14 ತಿಂಗಳವರೆಗೆ ಹೂ ಬಿಡುವುದಿಲ್ಲ.

    ಸಾಮಾನ್ಯ ಕಬ್ಬಿನಲ್ಲಿ ಶೇ.10.5 ಸಕ್ಕರೆ ಅಂಶವಿದ್ದರೆ, ಈ ಹೊಸ ತಳಿಯಲ್ಲಿ ಶೇ.11 ಸಕ್ಕರೆ ಅಂಶ ಇರಲಿದೆ. ಹೆಚ್ಚಿನ ಇಳುವರಿ ಬರುವುದರಿಂದ ಕರ್ನಾಟಕವಷ್ಟೇ ಅಲ್ಲ, ಕಬ್ಬು ಬೆಳೆಯುವ ಎಲ್ಲ ಭಾಗಗಳ ರೈತರಿಗೂ ಇದೊಂದು ವರದಾನವಾಗಲಿದೆ. ಮುಂದಿನ ವರ್ಷ ರೈತರಿಗೆ ಈ ತಳಿಯನ್ನು ಪರಿಚಯಿಸುತ್ತಿದ್ದೇವೆ ಎಂದು ಕೇಂದ್ರದ ಸಂಶೋಧನಾ ಸಹ ನಿರ್ದೇಶಕ ಎಸ್.ಎನ್.ವಾಸುದೇವನ್ ಗೋಷ್ಠಿಯಲ್ಲಿ ತಿಳಿಸಿದರು.

    ನೆರಳಿನಲ್ಲಿ ಮಾತ್ರ ಬೆಳೆಯುವ ರೊಬಾಸ್ಟಾ ಕಾಫಿಯನ್ನು ಕೊಡಗು ಮತ್ತು ಉಗಾಂಡಾದಲ್ಲಿ ಬೆಳೆಯಲಾಗುತ್ತಿದೆ. ಈ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ಕಾಫಿ ಬೆಳೆಗಾರರೇ ಸೇರಿ ಕಾಫಿ ಮಾರಾಟ ಕಂಪನಿ ಸ್ಥಾಪಿಸಿಕೊಂಡು ನಾವೇ ನಮ್ಮ ಕಾಫಿಯನ್ನು ಹೆಚ್ಚು ಬೆಲೆಗೆ ರಫ್ತು ಮಾಡುತ್ತೇವೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ.

    | ಡಾ.ಸಿ.ಜಿ.ಕುಶಾಲಪ್ಪ  ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts