More

    ಜವಳಿ ಇಲಾಖೆ ಡಿಡಿ ವಿರುದ್ಧ ನೇಕಾರರ ಪ್ರತಿಭಟನೆ

    ಕೊಪ್ಪಳ: ಕೈಮಗ್ಗ ಮತ್ತು ಜವಳಿ ಇಲಾಖೆ ಡಿಡಿ ವಿರುದ್ಧ ಕಿನ್ನಾಳ ಗ್ರಾಮದ ಬಡ ನೇಕಾರರು ನಗರದ ಉಪನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆಯ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಜವಳಿ ಇಲಾಖೆ ಡಿಡಿ ಭಾರತಿ ಬಿದರಿಮಠ ಅವರು ನೇಕಾರರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ ಹೆದರಿಸುವುದು, ಬೆದರಿಸುವುದು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬಡ ನೇಕಾರರಿಗೆ ನೀಡುವ 5 ಸಾವಿರ ರೂ. ಸಹಾಯ ಧನದ ಪೇಚಾನ್ ಕಾರ್ಡ್‌ಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿತರಿಸಲಾಗಿದೆ. ಆದರೆ, ನಮ್ಮ ಜಿಲ್ಲೆಯ ಡಿಡಿ ಅವರು 1400 ನೇಕಾರರ ಪೈಕಿ 400 ಮಂದಿಗೆ ಮಾತ್ರ ಸಹಾಯ ಧನ ನೀಡಿದ್ದು, ತಮ್ಮಗೆ ಬೇಕಾದ ನೇಕಾರರಿಗೆ ಯಾವುದೇ ದಾಖಲೆ ಪರಿಶೀಲಿಸದೆ ಸಹಾಯ ಧನ ನೀಡಿರುತ್ತಾರೆ. ಉಳಿದ 1 ಸಾವಿರ ನೇಕಾರರನ್ನು ಇನ್ನಿಲ್ಲದ ಕಾರಣ ನೀಡಿ ತಿರಸ್ಕರಿಸಿದ್ದಾರೆ ಎಂದು ದೂರಿದರು.

    ಈ ಹಿಂದಿನ 2 ವರ್ಷ ಎಲ್ಲ ಬಡ ನೇಕಾರರಿಗೂ ಸರ್ಕಾರದ ಸಹಾಯಧನ ಮುಟ್ಟಿದೆ. ಈ ಬಗ್ಗೆ ನೇಕಾರ ಮುಖಂಡರು ಮಾಹಿತಿ ಕೇಳಲು ಹೋದರೆ ಡಿಡಿ ಅವರು ನೀವು ಯಾರೆಂದು ಪ್ರಶ್ನಿಸುತ್ತಿದ್ದಾರೆ. ನಾನು ಮಹಿಳೆ ಇದ್ದು, ಪದೆ ಪದೇ ಮಾಹಿತಿ ಕೇಳಿದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೆದರಿಸುತ್ತಾರೆ. ಸರಿಯಾಗಿ ಕಚೇರಿಗೆ ಬರುವುದಿಲ್ಲ. ನಾವು ಯಾರಾದರೂ ಕಚೇರಿಗೆ ಬಂದ ವಿಷಯ ಅವರಿಗೆ ತಿಳಿದರೆ, ಕಚೇರಿಗೆ ಬರದೇ ಪರಾರಿಯಾಗುತ್ತಾರೆ. ಈ ಹಿಂದೆ ಪವರಲೂಮ್ ನೇಕಾರರಿಗೆ ಸರ್ಕಾರ ನೀಡುತ್ತಿದ್ದ ವಿದ್ಯುತ್ ಸಹಾಯ ಧನ ಬರದಂತೆ ಮಾಡಿ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ನೇಕಾರರಾದ ಕೆ.ಲಿಂಗರಾಜ, ಗುರುರಾಜ ಗುಬ್ಬಿ, ನಿಂಗಜ್ಜ ಕುರುಬರ, ಶೈಲಪ್ಪ ರ‌್ಯಾವಣಕಿ, ಮಲ್ಲಿಕಾರ್ಜುನ, ಪಂಪಣ್ಣ, ರಾಮಚಂದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts