More

    ಬಂಗಾರಪೇಟೆ ತಹಸೀಲ್ದಾರ್ ಹತ್ಯೆಗೆ ತೀವ್ರ ಖಂಡನೆ

    ಕೊಪ್ಪಳ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರರನ್ನು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಸರ್ಕಾರಿ ನೌಕರರ ರಕ್ಷಣೆಗೆ ಸೂಕ್ತ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ಡಿಸಿ ಸುರಳ್ಕರ್ ವಿಕಾಸ್ ಕಿಶೋರ್‌ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಮನವಿ ಸಲ್ಲಿಸಿದರು.

    ಜಮೀನು ಸರ್ವೇ ಮಾಡುವ ವೇಳೆ ಪೊಲೀಸರ ಸಮ್ಮುಖದಲ್ಲೇ ಆರೋಪಿ ವೆಂಕಟಪತಿ ಎಂಬುವರು ತಹಸೀಲ್ದಾರ್ ಚಂದ್ರಮೌಳೇಶ್ವರರನ್ನು ಚಾಕುವಿನಿಂದ ಹತ್ಯೆ ಮಾಡಿರುವುದು ಅಮಾನವೀಯ. ರಾಜ್ಯದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಪಿಆರ್‌ಇಡಿ ಸೇರಿ ಇತರ ಇಲಾಖೆ ಅಧಿಕಾರಿಗಳ ಮೇಲೆ ಆಗಾಗ ಇಂತಹ ಹಲ್ಲೆ, ದೌರ್ಜನ್ಯ ನಡೆಯುತ್ತಿವೆ. ಇದರಿಂದ ಕೆಲಸ ಮಾಡಲು ಅಧಿಕಾರಿಗಳು ಹೆದರುವಂತಾಗಿದೆ.

    ಹತ್ಯೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ, ನೌಕರರ ರಕ್ಷಣೆಗೆ ಅಗತ್ಯ ಕಾನೂನು ಜಾರಿ, ಮೃತ ತಹಸೀಲ್ದಾರ್ ಕುಟುಂಬಕ್ಕೆ ಅಗತ್ಯ ನೆರವು ಹಾಗೂ ಅವರ ಕುಟುಂಬದವರಿಗೆ ಸರ್ಕಾರಿ ನೌಕರಿ ಸೇರಿ ಸರ್ಕಾರದಿಂದ ದೊರೆವ ಎಲ್ಲ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದರು. ಮೃತ ತಹಸೀಲ್ದಾರ್ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು.

    ಎಡಿಸಿ ಎಂ.ಪಿ.ಮಾರುತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್, ಕಾರ್ಯದರ್ಶಿ ಶಂಕರಗೌಡ, ಖಜಾಂಚಿ ಸುಶಿಲೇಂದ್ರರಾವ್ ಕುಲಕರ್ಣಿ, ಗೌರವ ಅಧ್ಯಕ್ಷ ಫಕ್ರುದ್ದೀನ್ ಕುದುರಿಮೋತಿ, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಎಂ.ಡಿ.ಇಸ್ಮಾಯಿಲ್, ಕೆ.ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts